ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಸಿಎಂ ಆಪ್ತರ ಮನೆ, ಕಚೇರಿ ಮೇಲೆ ಐಟಿ ದಾಳಿ

|
Google Oneindia Kannada News

ಜೈಪುರ, ಜುಲೈ 13: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ನಡುವೆಯೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Recommended Video

Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

ಕಾಂಗ್ರೆಸ್ ಮುಖಂಡ ಧರ್ಮೇಂದ್ರ ರಾಥೋಡ್ ಹಾಗೂ ರಾಜ್ಯ ಕಾಂಗ್ರೆಸ್ ಕಚೇರಿಯ ಸದಸ್ಯ ಹಾಗೂ ಆಭರಣ ಸಂಸ್ಥೆಯ ಮಾಲೀಕ ರಾಜೀವ್ ಅರೋರಾ ಅವರ ಮನೆ, ಕಚೇರಿ ಹಾಗೂ ರಾಜ್ಯದ ಹಲವು ಕಡೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.

ತೆರಿಗೆ ವಂಚನೆ ದೂರಿನ ಹಿನ್ನೆಲೆ ಈ ದಾಳಿ ನಡೆದಿದ್ದು, ದಾಖಲೆಗಳು ಪರಿಶೀಲನೆ ಮಾಡಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿದೇಶದ ವಹಿವಾಟುಗಳಲ್ಲಿ ತೆರಿಗೆ ವಂಚನೆ ಆಗಿರುವ ಅನುಮಾನವೂ ವ್ಯಕ್ತವಾಗಿದೆ. ಈ ಹಾಗಾಗಿ, ಸುಮಾರು 200 ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

ರಾಜಸ್ಥಾನಕ್ಕೆ ಬಂದರೂ ಪೈಲಟ್ ಕಚೇರಿಗೆ ಕಾಲಿಡುವಂತಿಲ್ಲ!ರಾಜಸ್ಥಾನಕ್ಕೆ ಬಂದರೂ ಪೈಲಟ್ ಕಚೇರಿಗೆ ಕಾಲಿಡುವಂತಿಲ್ಲ!

ರಾಜಸ್ಥಾನ, ದೆಹಲಿ ಮತ್ತು ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸುತ್ತಿದೆ. ಜೈಪುರ, ಕೋಟಾ, ದೆಹಲಿ ಮತ್ತು ಮುಂಬೈಗಳಲ್ಲಿ ಹುಡುಕಾಟಗಳು ನಡೆಯುತ್ತಿವೆ ಎಂಬ ಮಾಹಿತಿ ತಿಳಿದಿದೆ.

Income Tax Department conducting raids at Dharmendra Rathore residence

ಮತ್ತೊಂದೆಡೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರ ಆಪ್ತ ರವಿ ಕಾಂತ್ ಶರ್ಮಾ ಅವರ ಆಸ್ತಿಗಳ ಬಗ್ಗೆ ಇಡಿ ಇಲಾಖೆ (ಜಾರಿ ನಿರ್ದೇಶನಾಲಯ) ಪರಿಶೀಲನೆ ಮಾಡುತ್ತಿದೆ. ಆದರೆ, ರಾಜಸ್ಥಾನದಲ್ಲಿ ನಡೆಇದರುವ ಐಟಿ ದಾಳಿಗೂ ಹಾಗೂ ಇಡಿ ಅಧಿಕಾರಿಗಳ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಇಡಿ ಇಲಾಖೆ ಸಮರ್ಥಿಸಿಕೊಂಡಿದೆ.

English summary
Income Tax Department conducting raids at multiple locations across the state, including office and residence of Congress leader Dharmendra Rathore and one Rajiv Arora.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X