ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ ನಿಯಮ ಉಲ್ಲಂಘನೆ: ರಾಜಸ್ಥಾನ ಮಂದಿ ಕಟ್ಟಿದ ದಂಡವೆಷ್ಟು?

|
Google Oneindia Kannada News

ಜೈಪುರ, ಡಿಸೆಂಬರ್ 04: ಕೊವಿಡ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನದ ಜನರು ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 14.03 ಕೋಟಿ ರೂ ದಂಡ ಕಟ್ಟಿದ್ದಾರೆ.

ಹತ್ತು ಲಕ್ಷ ಮಂದಿ ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಾರ್ಚ್ 22ರಿಂದ ಡಿಸೆಂಬರ್ 3ರವರೆಗೆ 1,005,000 ಮಂದಿ ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ.

ಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖ ಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖ

ಸಾರ್ವಜನಿಕ ಸ್ಥಳಗಳಲ್ಲಿ 353,000 ಮಂದಿ ಮಾಸ್ಕ್‌ ಧರಿಸದೆ ದಂಡ ಕಟ್ಟಿದ್ದಾರೆ, 14,135 ಮಂದಿ ಅಂಗಡಿ ಮಾಲೀಕರು ಮಾಸ್ಕ್ ಧರಿಸದೆ ದಂಡ ಪಾವತಿಸಿದ್ದಾರೆ. 2831 ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ದಕ್ಕೆ, 600 ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಕುಡಿದಿದ್ದಕ್ಕೆ, 637,000 ಮಂದಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಕ್ಕೆ ದಂಡ ವಿಧಿಸಲಾಗಿದೆ.

In Rajasthan, 1 Million People Pay Rs14.03 Cr In Fines For Violating Covid Norms

ಉದಯಪುರದಲ್ಲಿ 75,349 ಪ್ರಕರಣಗಳು, ಜೈಪುರದಲ್ಲಿ 73,316 ಪ್ರಕರಣಗಳು, ಭಿಲ್ವಾರಾದಲ್ಲಿ 66,759 ಪ್ರಕರಣಗಳು, ಜಲಾವರದಲ್ಲಿ 58,770 ಪ್ರಕರಣಗಳು, ಭಿವಾಡಿಯಲ್ಲಿ 51,230 ಪ್ರಕರಣಗಳು ಪತ್ತೆಯಾಗಿವೆ.

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರವಾಗಿ 40 ಸಾವಿರಕ್ಕಿಂತ ಕಡಿಮೆಯಾಗಿದೆ. ಕಳೆದೊಂದು ದಿನದಲ್ಲಿ 36594 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 540 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ ಮೃತಪಟ್ಟವರ ಸಂಖ್ಯೆಯು 1,39,188ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಕೊವಿಡ್-19 ಸೋಂಕಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಗುಣಮುಖ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Recommended Video

ಶಿವಮೊಗ್ಗದಲ್ಲಿ IGP Ravi ಎದುರು ಚಾಕು ಪ್ರದರ್ಶಿಸಿದ ಯುವಕ | Oneindia Kannada

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 95,71,559ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಒಂದೇ ದಿನದಲ್ಲಿ 40,726 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೂ 90,16,289 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, 4,16,082 ಸಕ್ರಿಯ ಪ್ರಕರಣಗಳಿವೆ.

English summary
More than one million people have been fined in Rajasthan for violating guidelines issued to contain Covid-19 and more than rS14 crore has been collected from them as fine since March, according to the police department’s dada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X