ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾರಾಟ ನಿಲ್ಲಿಸಿದ ಮಿಗ್-27; ಯೋಧರಿಂದ ಸೆಲ್ಯೂಟ್

|
Google Oneindia Kannada News

ಜೈಪುರ, ಡಿಸೆಂಬರ್ 27 : ಭಾರತೀಯ ಸೇನಾಪಡೆಯ ಬಲಿಷ್ಠ ಯುದ್ಧ ವಿಮಾನ 'ಮಿಗ್-27' ಹಾರಾಟ ಅಂತ್ಯಗೊಂಡಿದೆ. ನಿವೃತ್ತಿಯ ದಿನ ವಾಯುಪಡೆಯ ಯೋಧರು ಸೆಲ್ಯೂಟ್ ಹೊಡೆದು ವಿಮಾನಕ್ಕೆ ಬೀಳ್ಕೊಡುಗೆ ನೀಡಿದ್ದಾರೆ.

ಶುಕ್ರವಾರ ರಾಜಸ್ಥಾನದ ಜೋಧ್‌ಪುರ್‌ ವಾಯುನೆಲೆಯಲ್ಲಿ ಮಿಗ್-27 ಅಂತಿಮ ಹಾರಾಟ ನಡೆಸಿತು. ವಾಯುಪಡೆಯಲ್ಲಿದ್ದ 7 ಮಿಗ್-27 ಹಾರಾಟ ಇಂದಿಗೆ ಅಂತ್ಯವಾಯಿತು. ಸೇನೆ ಬಲಿಷ್ಠ ಯುದ್ಧ ವಿಮಾನಕ್ಕೆ ನಿವೃತ್ತಿ ನೀಡಿದೆ.

ವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲು ವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲು

ಭಾರತೀಯ ವಾಯುಸೇನೆಯ ಸಿಬ್ಬಂದಿ ಹಾರಾಟ ನಡೆಸಿದ ಮಿಗ್-27 ವಿಮಾನಗಳಿಗೆ ವಾಟರ್ ಸೆಲ್ಯೂಟ್ ಮೂಲಕ ಬೀಳ್ಕೊಡುಗೆ ನೀಡಿದರು. 1982ರಲ್ಲಿ ರಷ್ಯಾದಿಂದ ಮಿಗ್-27 ಯುದ್ಧ ವಿಮಾನಗಳನ್ನು ಖರೀದಿ ಮಾಡಲಾಗಿತ್ತು.

ವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳುವಾಯುಪಡೆ ಸೇರಿದ ಅರಿ ಭಯಂಕರ ಅಪಾಚೆ ಹೆಲಿಕಾಪ್ಟರ್‌ಗಳು

In Pics De Induction Ceremony Of MiG 27 Aircraft

ಭಾರತೀಯ ಸೇನೆಯ ಬಲಿಷ್ಠ ಯುದ್ಧ ವಿಮಾನ ಎಂದು ಮಿಗ್-27 ಹೆಸರುಗಳಿಸಿತ್ತು. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈ ವಿಮಾನ ಹೀರೋ ಎನಿಸಿಕೊಂಡಿತ್ತು. ವಾಯುಪಡೆಯಿಂದ ಇಂದು ವಿಮಾನ ನಿವೃತ್ತವಾಗಿದೆ.

ಬಾಲಕೋಟ್ ದಾಳಿಯ 'ರಹಸ್ಯ' ಬಹಿರಂಗಪಡಿಸಿದ ವಾಯುಪಡೆ ಬಾಲಕೋಟ್ ದಾಳಿಯ 'ರಹಸ್ಯ' ಬಹಿರಂಗಪಡಿಸಿದ ವಾಯುಪಡೆ

ರಕ್ಷಣಾ ವಕ್ತಾರ ಕರ್ನಲ್ ಸೋಂಬಿತ್ ಘೋಷ್, "ಮಿಗ್-27 ವಿಮಾನಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದ್ದು, ಇನ್ನು ಮುಂದೆ ದೇಶದ ಯಾವುದೇ ಭಾಗದಲ್ಲೂ ಈ ವಿಮಾನಗಳು ಹಾರಾಡುವುದಿಲ್ಲ" ಎಂದು ಘೋಷಣೆ ಮಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ರಷ್ಯಾ ಮೂಲದ ಮಿಗ್-27 ವಿಮಾನ ಇತಿಹಾಸದ ಪುಟವನ್ನು ಸೇರಿದೆ. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ 7 ಮಿಗ್-27 ಯುದ್ಧ ವಿಮಾನಗಳಿದ್ದು, ಎಲ್ಲವೂ ನಿವೃತ್ತವಾಗಿವೆ.

English summary
De-induction ceremony of MiG-27 Aircraft held in Jodhpur, Rajasthan on December 27, 2019. Indian air force stopped 7 MiG-27 aircraft service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X