ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: 70 ವರ್ಷಗಳಲ್ಲಿ ಅತಿ ಹೆಚ್ಚು ಮಳೆ ಕಂಡ ರಾಜಸ್ಥಾನ

|
Google Oneindia Kannada News

ಜೈಪುರ, ಆ.01: ಅಧಿಕೃತ ಅಂಕಿಅಂಶಗಳ ಪ್ರಕಾರ ರಾಜಸ್ಥಾನದಲ್ಲಿ ಜುಲೈ ತಿಂಗಳಿನಲ್ಲಿ 270 ಮಿಮೀ ಮಳೆ ಸುರಿದಿದೆ. ಇದು ಸುಮಾರು ಏಳು ದಶಕಗಳಲ್ಲಿ ಸುರಿದ ಅತಿ ಹೆಚ್ಚು ಮಳೆಯಾಗಿದೆ.

ಈ ವಾರದಿಂದ ಹೊಸ ಸುತ್ತಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಸ್ಥಾನದಲ್ಲಿ ಹೆಚ್ಚಿನ ನೈಋತ್ಯ ಮಾನ್ಸೂನ್ ಮಳೆಯು ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸುರಿಯುತ್ತದೆ.

ಜೈಪುರದ ಹವಾಮಾನ ಕೇಂದ್ರವು ಒದಗಿಸಿದ ಮಾಹಿತಿಯ ಪ್ರಕಾರ, ಜುಲೈನಲ್ಲಿ ರಾಜ್ಯವು 270 ಮಿಮೀ ಮಳೆಯನ್ನು ದಾಖಲಿಸಿದೆ. ತಿಂಗಳ ಸರಾಸರಿ 161.4 ಮಿಮೀಗಿಂತ 67 ಶೇಕಡಾ ಹೆಚ್ಚಾಗಿದೆ. ಇದು ಸುಮಾರು ಏಳು ದಶಕಗಳಲ್ಲಿ ಅತಿ ಹೆಚ್ಚು.

In July Rajasthan Received Highest Rainfall In 70 Years

1956 ರಲ್ಲಿ ರಾಜ್ಯವು ಜುಲೈ ತಿಂಗಳಲ್ಲಿಯೇ 308.7 ಮಿಮೀ ಮಳೆಯನ್ನು ದಾಖಲಿಸಿತ್ತು. ಕಳೆದ ವರ್ಷ ಜುಲೈನಲ್ಲಿ ರಾಜಸ್ಥಾನದಲ್ಲಿ 130.8 ಮಿಮೀ ಮಳೆಯಾಗಿತ್ತು.

ರಾಜ್ಯದಲ್ಲಿ ಜುಲೈ ತಿಂಗಳಲ್ಲಿ 1908 ರಲ್ಲಿ 288 ಮಿಮೀ ಇತ್ತು. 1943 ರಲ್ಲಿ 281.6 ಮಿಮೀ. 2022 ರಲ್ಲಿ 270 ಮಿಮೀ. 2015ರಲ್ಲಿ 262.3 ಮಿ.ಮೀ ಹಾಗೂ 2017ರಲ್ಲಿ 252.3 ಮಿ.ಮೀ. ಮಳೆಯಾಗಿತ್ತು.

2002 ರಲ್ಲಿ ಜುಲೈ ತಿಂಗಳಲ್ಲಿ 7.2 ಮಿಮೀ ಕಡಿಮೆ ಮಳೆ ದಾಖಲಾಗಿದೆ. ಆ ವರ್ಷದ ಸಂಪೂರ್ಣ ಮಾನ್ಸೂನ್ ಅವಧಿಯಲ್ಲಿ, ರಾಜ್ಯದಲ್ಲಿ ಕೇವಲ 175.6 ಮಿಮೀ ಮಳೆಯಾಗಿತ್ತು. ಇದು ಇಲ್ಲಿಯವರೆಗೆ ದಾಖಲಾದ ಅತ್ಯಂತ ಕಡಿಮೆ ಮಳೆಯಾಗಿದೆ.

ರಾಜ್ಯದ ಪಶ್ಚಿಮ ಜಿಲ್ಲೆಗಳು ಕೂಡ ಈ ಜುಲೈನಲ್ಲಿ ಗರಿಷ್ಠ ಮಳೆಯನ್ನು ಪಡೆದಿವೆ. ಶ್ರೀ ಗಂಗಾನಗರ ಜಿಲ್ಲೆಯಲ್ಲಿಯೇ 252.3 ಮಿಮೀ ಮಳೆಯಾಗಿದ್ದು, ಸರಾಸರಿಗಿಂತ (75.3 ಮಿಮೀ) 235 ರಷ್ಟು ಹೆಚ್ಚು ಮಳೆಯಾಗಿದೆ.

In July Rajasthan Received Highest Rainfall In 70 Years

ಈ ಬಾರಿಯ ಮುಂಗಾರು ಜೂನ್ 30 ರಂದು ರಾಜ್ಯಕ್ಕೆ ಪ್ರವೇಶಿಸಿದೆ. ಮೊದಲ ಸುತ್ತಿನ ಮಳೆ ಬಹುತೇಕ ಮುಗಿದಿದ್ದು, ಎರಡನೇ ಸುತ್ತಿನ ಮಳೆ ಈ ವಾರ ಪ್ರಾರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಕೇಂದ್ರದ ಪ್ರಕಾರ, ಆಗಸ್ಟ್ 3 ರಿಂದ ರಾಜ್ಯದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಮಳೆ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಆಗಸ್ಟ್ 4 ರಂದು, ಕೋಟಾ ವಿಭಾಗ ಮತ್ತು ಪೂರ್ವ ರಾಜಸ್ಥಾನದ ಪಕ್ಕದ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

English summary
In July Rajasthan received 270 mm of rainfall, the highest precipitation for the month in nearly seven decades. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X