ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ವಿಶ್ವಾಸಮತಕ್ಕೆ ಮುನ್ನ ತಣ್ಣಗಾದ ಸಿಎಂ ಗೆಹ್ಲೋಟ್

|
Google Oneindia Kannada News

ಜೈಪುರ, ಆ 1: ಭಿನ್ನಮತೀಯ ಕ್ಯಾಂಪಿನ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ವಿರುದ್ದ ಕೆಂಡಕಾರುತ್ತಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತುಸು ತಣ್ಣಗಾಗಿದ್ದಾರೆ.

ವಿಶ್ವಾಸಮತಯಾಚನೆಗೆ ರಾಜ್ಯಪಾಲರು ಈಗಾಗಲೇ ದಿನ ನಿಗದಿ ಮಾಡಿದ್ದು, ಕುದುರೆ ವ್ಯಾಪಾರದ ಭೀತಿಯಿಂದ, ಎಲ್ಲಾ, ನೂರು ಕಾಂಗ್ರೆಸ್ ಶಾಸಕರನ್ನು ಜೈಪುರದಿಂದ ಜೈಸಲ್ಮೇರ್ ರೆಸಾರ್ಟಿಗೆ ಶಿಫ್ಟ್ ಮಾಡಲಾಗಿದೆ.

ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಬೆಲೆ ಹೆಚ್ಚಾಯಿತು ಎಂದ ಸಿಎಂ!ರಾಜಸ್ಥಾನದಲ್ಲಿ ಕುದುರೆ ವ್ಯಾಪಾರದ ಬೆಲೆ ಹೆಚ್ಚಾಯಿತು ಎಂದ ಸಿಎಂ!

ಬಂಡಾಯ ನಾಯಕ ಸಚಿನ್ ಪೈಲಟ್, ಸೋನಿಯಾ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಂಡವರು. ಹಾಗಿದ್ದರೂ, ಅವರ ವಿರುದ್ದ ಗೆಹ್ಲೋಟ್ ಕಠಿಣ ಕ್ರಮವನ್ನು ತೆಗೆದುಕೊಂಡಿದ್ದರು.

ಸಚಿನ್ ಪೈಲಟ್ ಜೊತೆ, ಪ್ರಿಯಾಂಕ ಗಾಂಧಿ ಹಲವು ಸುತ್ತಿನ ದೂರವಾಣಿ ಮಾತುಕತೆ ನಡೆಸಿದ್ದರು. ಒಂದು ಹಂತದಲ್ಲಿ ಹೈಕಮಾಂಡ್ ಆದೇಶಕ್ಕೂ ಜಗ್ಗದಿದ್ದ ಗೆಹ್ಲೋಟ್, ಈಗ ಎಲ್ಲಾ ಹೈಕಮಾಂಡ್ ಹೇಳಿದಂತೆ ಎಂದಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರನಿಗೆ ಇಡಿ ಸಮನ್ಸ್‌ಮನಿ ಲಾಂಡರಿಂಗ್ ಪ್ರಕರಣ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹೋದರನಿಗೆ ಇಡಿ ಸಮನ್ಸ್‌

ಸಚಿನ್ ಪೈಲಟ್ ಅವರ ಭಯವೇ

ಸಚಿನ್ ಪೈಲಟ್ ಅವರ ಭಯವೇ

"ವಿಶ್ವಾಸಮತಕ್ಕೆ ಬೇಕಾಗಿರುವ ನಂಬರ್ ನನ್ನಲಿದೆ. ಬಿಜೆಪಿಯವರು ಏನೇ ಕಿತಾಪತಿ ಮಾಡಿದರೂ, ಅದು ವರ್ಕೌಟ್ ಆಗುವುದಿಲ್ಲ"ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ. "ಹಾಗಿದ್ದರೆ, ನಿಮ್ಮ ಶಾಸಕರನ್ನು ರೆಸಾರ್ಟಿಗೆ ಯಾಕೆ ಕಳುಹಿಸಿದ್ದೀರಾ, ಸಚಿನ್ ಪೈಲಟ್ ಅವರ ಭಯವೇ"ಎಂದು ಬಿಜೆಪಿ ತಿರುಗೇಟು ನೀಡಿದೆ.

ಎಲ್ಲಾ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳೋಣ

ಎಲ್ಲಾ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳೋಣ

"ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಕ್ಷಮಿಸುವುದಿಲ್ಲ"ಎಂದು ಹೇಳಿದ್ದ ಗೆಹ್ಲೋಟ್, "ಎಲ್ಲಾ ಮಾತುಕತೆಯ ಮೂಲಕ ಸರಿಪಡಿಸಿಕೊಳ್ಳೋಣ. ಅವರು ವಾಪಸ್ ಪಕ್ಷಕ್ಕೆ ಬರುವುದಿದ್ದರೆ ಅವರನ್ನು ಸ್ವಾಗತಿಸುವುದಕ್ಕೆ ನಾನು ಸಿದ್ದನಿದ್ದೇನೆ"ಎನ್ನುವ ಹೇಳಿಕೆಯನ್ನು ಗೆಹ್ಲೋಟ್ ನೀಡಿದ್ದಾರೆ.

ಸೋನಿಯಾ, ರಾಹುಲ್ ಗಾಂಧಿ ಕ್ಷಮಿಸಿದರೆ, ನನ್ನದೇನೂ ತಕರಾರು ಇಲ್ಲ

ಸೋನಿಯಾ, ರಾಹುಲ್ ಗಾಂಧಿ ಕ್ಷಮಿಸಿದರೆ, ನನ್ನದೇನೂ ತಕರಾರು ಇಲ್ಲ

ಪಕ್ಷದ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದು ನನ್ನ ಕೆಲಸ. ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರನ್ನು ಸೋನಿಯಾ, ರಾಹುಲ್ ಗಾಂಧಿ ಕ್ಷಮಿಸಿದರೆ, ನನ್ನದೇನೂ ತಕರಾರು ಇಲ್ಲ. ನಾನು ಬಂಡಾಯವೆದ್ದ ಎಲ್ಲರನ್ನೂ, ಯಾವುದೇ ಮುಜುಗರಕ್ಕೆ ಒಳಗಾಗದಂತೆ ನೋಡಿಕೊಳ್ಳುವೆ"ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಪ್ರಿಯಾಂಕ ಗಾಂಧಿ ಜೊತೆ ಮಾತುಕತೆ

ಪ್ರಿಯಾಂಕ ಗಾಂಧಿ ಜೊತೆ ಮಾತುಕತೆ

ಸೋನಿಯಾ ಕುಟುಂಬಕ್ಕೆ ಆಪ್ತರಾಗಿರುವ ಸಚಿನ್ ಪೈಲಟ್ ಜೊತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರಾ ಮಾತುಕತೆಯನ್ನು ನಡೆಸಿದ್ದರು. ಮುಂದಿನ ವರ್ಷ ನನ್ನನ್ನು ಸಿಎಂ ಆಗಿ, ಬಹಿರಂಗವಾಗಿ ಘೋಷಿಸಬೇಕು ಎನ್ನುವ ಡಿಮಾಂಡ್ ಅನ್ನು ಪೈಲಟ್ ಇಟ್ಟಿದ್ದರು ಎಂದು ವರದಿಯಾಗಿತ್ತು.

English summary
If High Command Forgives Rebels, I Will Welcome Them Back: Ashok Gehlot,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X