ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಮೀರ್ ದರ್ಗಾ ಸಮೀಕ್ಷೆಗೆ ಹಿಂದೂ ಸಂಘಟನೆಗಳ ಒತ್ತಾಯ

|
Google Oneindia Kannada News

ಜೈಪುರ ಮೇ 27: ರಾಜಸ್ಥಾನದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯು(ದರ್ಗಾ) ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು. ಹಾಗಾಗಿ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಯು ದರ್ಗಾ ಆವರಣವನ್ನು ಸರ್ವೆ ಮಾಡಬೇಕು ಎಂದು ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ.

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆ ನಡೆಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ.

ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಶಿಲ್ಪಗಳು ಪತ್ತೆಯಾಗಿವೆ: ಅಜಯ್ ಕುಮಾರ್ ಮಿಶ್ರಾಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಶಿಲ್ಪಗಳು ಪತ್ತೆಯಾಗಿವೆ: ಅಜಯ್ ಕುಮಾರ್ ಮಿಶ್ರಾ

"ಅಜ್ಮೀರ್ ದರ್ಗಾದ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಹಿಂದೂ ಚಿಹ್ನೆಗಳು ಇವೆ,'' ಎಂದು ಮಹಾರಾಣಾ ಪ್ರತಾಪ್‌ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಪ್ರತಿಪಾದಿಸಿದರು.

Hindu Outfit Claims Ajmer Shrine Was a Temple

ಆದರೆ ದರ್ಗಾದ ಆಡಳಿತ ಮಂಡಳಿಯು ಈ ಹೇಳಿಕೆಯನ್ನು ತಿರಸ್ಕರಿಸಿದೆ. ಅಂತಹ ಯಾವುದೇ ಚಿಹ್ನೆ ದರ್ಗಾದ ಗೋಡೆಗಳು ಮತ್ತು ಕಿಟಕಿಗಳಲ್ಲಿ ಇಲ್ಲ ಎಂದು ಹೇಳಿದೆ.

Gyanvapi Controversy; 1991ರ ಕಾಯ್ದೆ ಜ್ಞಾನವಾಪಿ ಮಸೀದಿಗೆ ರಕ್ಷಾಕವಚವೇ? Gyanvapi Controversy; 1991ರ ಕಾಯ್ದೆ ಜ್ಞಾನವಾಪಿ ಮಸೀದಿಗೆ ರಕ್ಷಾಕವಚವೇ?

ಗೋಡೆಗಳು, ಕಿಟಕಿಗಳ ಮೇಲೆ ಸ್ವಾಸ್ತಿಕ್ ಚಿಹ್ನೆ; ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜವರ್ಧನ್ ಸಿಂಗ್ ಪರ್ಮಾರ್, "ಅಜ್ಮೀರದ ಖ್ವಾಜಾ ಗರೀಬ್ ನವಾಜ್ ದರ್ಗಾ ಈ ಹಿಂದೆ ಪ್ರಾಚೀನ ಹಿಂದೂ ದೇವಾಲಯವಾಗಿತ್ತು. ಇದರ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಸ್ವಾಸ್ತಿಕ್ ಚಿಹ್ನೆಗಳು ಇವೆ. ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆಯು ದರ್ಗಾದ ಸಮೀಕ್ಷೆಯನ್ನು ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ,'' ಎಂದು ಹೇಳಿದರು.

Hindu Outfit Claims Ajmer Shrine Was a Temple

"ದರ್ಗಾದಲ್ಲಿ ಅಂತಹ ಯಾವುದೇ ಚಿಹ್ನೆಗಳಿಲ್ಲ. ಹಾಗಾಗಿ ಈ ಹಕ್ಕು ನಿರಾಧಾರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಹಿಂದೂಗಳು ಮತ್ತು ಮುಸ್ಲಿಮರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುತ್ತಾರೆ,'' ಎಂದು ಅಂಜುಮನ್ ಸೈಯದ್ ಝುಡ್ಗಾನ್‌ಗೆ ಅಧ್ಯಕ್ಷ ಮೊಯಿನ್ ಚಿಸ್ತಿ ಹೇಳಿದರು.

ದರ್ಗಾದಲ್ಲಿ ಸ್ವಸ್ತಿಕ್ ಚಿಹ್ನೆ ಎಲ್ಲೂ ಇಲ್ಲ: "ದರ್ಗಾದಲ್ಲಿ ಸ್ವಸ್ತಿಕ್ ಚಿಹ್ನೆ ಎಲ್ಲೂ ಇಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. 850 ವರ್ಷಗಳಿಂದ ದರ್ಗಾ ಇದ್ದು, ಅಂತಹ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ಎಂದೂ ಇಲ್ಲದ ವಾತಾವರಣವು ಇಂದು ದೇಶದಲ್ಲಿದೆ,'' ಎಂದು ಬೇಸರ ವ್ಯಕ್ತಪಡಿಸಿದರು.

"ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಎಂದರೆ ಧರ್ಮಾತೀತವಾಗಿ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವುದು ಎಂದರ್ಥ. ಈ ರೀತಿಯ ಅಂಶಗಳ ಬಗ್ಗೆ ಸರಕಾರ ಸ್ಪಂದಿಸಬೇಕು,'' ಎಂದು ಮೊಯಿನ್ ಚಿಸ್ತಿ ಅಭಿಪ್ರಾಯಪಟ್ಟರು.

ಕೋಮು ಸೌಹಾರ್ದತೆ ಕದುಡುವ ಪ್ರಯತ್ನ: "ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದುಡುವ ಪ್ರಯತ್ನವಾಗಿದೆ,'' ಎಂದು ಖ್ವಾಜಾ ಗರೀಬ್ ನವಾಜ್ ದರ್ಗಾದ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ ಹೇಳಿದರು.

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆಗೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ವಿವಾದವೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆಗಳು ದಟ್ಟವಾಗಿದೆ.

Recommended Video

ಸೋತ ಹತಾಶೆಯಲ್ಲಿ KL Rahul ರನ್ನು ದಿಟ್ಟಿಸಿ ನೋಡಿ ತಗ್ಲಾಕೊಂಡ Gautam Gambhir | #cricket | Oneindia Kannada

English summary
Hindu outfit claims Rajasthan's Ajmer shrine of Khwaja Moinuddin Chisti was a temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X