ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

900 ಕುಟುಂಬವನ್ನು ದತ್ತು ಪಡೆದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ

|
Google Oneindia Kannada News

ನವದೆಹಲಿ, ಮೇ 28: ರಾಜಸ್ಥಾನದ ಜನತೆ ಉಷ್ಣಗಾಳಿ, ನೀರಿನ ಕೊರತೆ ಹಾಗೂ ಮರುಭೂಮಿ ಮಿಡತೆಯ ಹಾವಳಿಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾರೆ.

ಇದರ ಜೊತೆಗೆ ಕರೊನಾವೂ ಕೂಡ ಇದೆ. ರಾಜಸ್ಥಾನದ ಸೋಡಾ ಪ್ರದೇಶದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಛವಿ ರಾಜಾವತ್ ಅವರು ಅಲ್ಲಿನ 900 ಕುಟುಂಬವನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಊರಿನ ಒಂದೆರೆಡು ಮಂದಿಯನ್ನು ದತ್ತು ತೆಗೆದುಕೊಳ್ಳಬಹುದು ಆದರೆ ಇವರು ಹಳ್ಳಿಯಲ್ಲಿರುವ 900 ಕುಟುಂಬವನ್ನೂ ಕೂಡ ದತ್ತು ತೆಗೆದುಕೊಂಡು ಅವರ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Former Sarpanch Of The Soda Village Adopted 900 Families

ಛವಿ ಅವರು ಬಿಜಿನೆಸ್ ಮ್ಯಾನೇಜ್‌ಮೆಂಟ್ ಡಿಗ್ರಿ ವ್ಯಾಸಂಗ ಮಾಡಿದ್ದಾರೆ. ಆದರೆ ಅವರು ಒಳ್ಳೆಯ ಕೆಲಸಕ್ಕೆ ಸೇರುವುದು ಬಿಟ್ಟು ಜನರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಿದ್ದಾರೆ. ಈ 900 ಕುಟುಂಬಗಳನ್ನು ಸಾಕಲು ನಿಧಿ ಒಟ್ಟುಗೂಡಿಸುತ್ತಿದ್ದಾರೆ.

ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?ಕುಟುಂಬವೇ ಕಷ್ಟದಲ್ಲಿದ್ದರೂ ಕೊಡಗಿನ ಡಿಸಿ ಶ್ರೀವಿದ್ಯಾ ಕೆಲಸ ಗೊತ್ತೆ?

ಈ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ ಭಾರತವು ಉತ್ತಮ ಸ್ಥಳಗಳಲ್ಲಿ ಒಂದು ಎಂದು ಹೇಳಲು ಕಷ್ಟವಾಗುತ್ತದೆ. ಸೆಕೆ ಹೆಚ್ಚಿದೆ, ಕುಡಿಯಲು ನೀರಿಲ್ಲ, ಕೊರೊನಾವೈರಸ್ ಹಾವಳಿ ಇದೆ, ಈಗ ಮರುಭೂಮಿ ಮಿಡತೆ ಕೂಡ ಬೆಳೆಗಳನ್ನು ನಾಶಮಾಡುತ್ತಿದೆ. ನಾನು ಈ ಹಳ್ಳಿಯ ಜೊತೆ ಮೊದಲಿನಿಂದಲೂ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಈ 900 ಕುಟುಂಬದ ಜವಾಬ್ದಾರಿ ಹೊರಲು ತಯಾರಿದ್ದೇನೆ.

ಎಷ್ಟು ಮಂದಿಗೆ ನಿಮ್ಮಿಂದ ಸಹಾಯ ಮಾಡಲು ಸಾಧ್ಯವೋ ಅಷ್ಟು ಸಹಾಯ ಮಾಡಿ. ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಇದರ ಬಳಿಕ ಇ-ಮೇಲ್ ಹಾಗೂ ಫೋನ್ ನಂಬರ್ ಹಾಕಿ, ಡೊನೇಟ್ ಎನ್ನುವ ಬಟನ್ ಕ್ಲಿಕ್ ಮಾಡಿ. ನಿಮಗೆ ಇನ್ಯಾವುದೇ ಮಾಹಿತಿ ಬೇಕಿದ್ದರೆ [email protected] ಗೆ ಇ-ಮೇಲ್ ಮಾಬಹುದಾಗಿದೆ.

ಅವರು ಗ್ರಾಮದ ಜನರೊಂದಿಗೆ ಮಾತನಾಡಿ, ಅವರಿಗೆ ಪ್ರತಿ ತಿಂಗಳು 3 ಸಾವಿರ ರೂ ನೀಡುವುದಾಗಿ ಭರವಸೆ ನೀಡಿದ್ದಾರೆ. ಆನ್‌ಲೈನ್ ಮೂಲಕ ಕೆಲವರನ್ನು ಭೇಟಿಯಾಗಿ ಅವರ ಬಳಿ ಸಹಾಯ ಕೇಳಿದ್ದಾರೆ. ಸುಮಾರು 140 ಮಂದಿಯನ್ನು ದತ್ತುತೆಗೆದುಕೊಳ್ಳುವಷ್ಟು ಹಣ ಈಗಾಗಲೇ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏಪ್ರಿಲ್ 10 ರಿಂದ ಅಭಿಯಾನ ಆರಂಭವಾಗಿದ್ದು, ಜುಲೈ 2020ರವರೆಗೆ ನಡೆಯಲಿದೆ.

ಈ ಹಳ್ಳಿಯಲ್ಲಿ ಸಾಕಷ್ಟು ಮಂದಿ ಬಳಿ ಜಮೀನಿಲ್ಲ, ಸಣ್ಣ ಹಾಗೂ ಮಧ್ಯಮ ವರ್ಗದ ಕೃಷಿಕರು ಎಂದಿಗೂ ಲಾಭ ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

English summary
Former Sarpanch Of The Soda of Rajasthan Chhavi Rajawat Has Adopted 900 Families of Soda Village. And started Online Campaign For Fund Rising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X