ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಪೀಡಿತ ದಂಪತಿ ಮೇಲೆ anti-HIV ಡ್ರಗ್ಸ್ ಪ್ರಯೋಗ

|
Google Oneindia Kannada News

ಜೈಪುರ, ಮಾರ್ಚ್ 10: ವಿಶ್ವಾದ್ಯಂತ ಕೊರೊನಾ ಪೀಡಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚೀನಾದಲ್ಲಿ ಮರಣ ಮೃದಂಗ ಬಾರಿಸಿದ್ದ ಕೊರೊನಾ ಈಗ ಇಟಲಿಯನ್ನು ಟಾರ್ಗೆಟ್ ಮಾಡಿದಂತಿದೆ. ಈ ಕಡೆ ಭಾರತದಲ್ಲೂ ಕೊರೊನಾ ಭೀತಿ ಹೆಚ್ಚಾಗಿದ್ದು, 47 ಕೊರೊನಾ ಕೇಸ್ ದಾಖಲಾಗಿದೆ ಎಂಬ ಮಾಹಿತಿ ಇದೆ.

Recommended Video

First time in india anti-hiv drugs used on Italian couple with coronavirus patients in jaipur

ಇಲ್ಲಿಯವರೆಗೂ ಕೊರೊನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ಸೂಕ್ತ ಚಿಕಿತ್ಸೆ ಕಂಡುಹಿಡಿಯುವಲ್ಲಿ ವೈದ್ಯಲೋಕ ಸೋತಿದೆ. ಆದರೆ ಪ್ರಾಥಮಿಕ ಹಂತದಲ್ಲಿ ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸಬಹುದು ಎಂಬ ಧೈರ್ಯದಿಂದ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!ಪ್ರತಿನಿತ್ಯ ಬಳಸುವ ಮೊಬೈಲ್ ನಲ್ಲಿ 9 ದಿನ ಕೊರೊನಾ ವೈರಸ್ ಜೀವಂತ!

ಇದೀಗ, ಕೊರೊನಾ ಪೀಡಿತರ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡುವ ಮೂಲಕ ಭಾರತ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಕೊರೊನಾ ಹರಡುವಿಕೆಯನ್ನು Anti-HIV ಡ್ರಗ್ಸ್ ತಡೆಯಬಹುದು ಎಂಬ ವಿಶ್ವಾಸದಿಂದ ಈ ಪ್ರಯತ್ನಕ್ಕೆ ಕೈಹಾಕಿದೆ. ಹಾಗಿದ್ರೆ, ಫಲಿತಾಂಶ ಏನಾಯ್ತು? ಮುಂದೆ ಓದಿ....

ಇಟಲಿ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ

ಇಟಲಿ ದಂಪತಿ ಮೇಲೆ Anti-HIV ಡ್ರಗ್ಸ್ ಪ್ರಯೋಗ

ಇಟಲಿಯಿಂದ ಭಾರತಕ್ಕೆ ಬಂದಿದ್ದ ದಂಪತಿಗೆ ಕೊರೊನಾ ವೈಸರ್ ಸೋಂಕು ಕಾಣಿಸಿಕೊಂಡಿರುವುದು ದೃಢ ಪಟ್ಟಿದೆ. ಜೈಪುರದಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಈ ದಂಪತಿ ಮೇಲೆ ವೈದ್ಯರು Anti-HIV ಡ್ರಗ್ಸ್ ಪ್ರಯೋಗ ಮಾಡಿದ್ದಾರೆ. ಭಾರತದಲ್ಲಿ ಕೊರೊನಾ ಪೀಡಿತರ ಮೇಲೆ Anti-HIV ಡ್ರಗ್ಸ್ ಪ್ರಯೋಗ ಮಾಡಿರುವುದು ಇದೇ ಮೊದಲ ಪ್ರಕರಣ.

ವರ್ಕೌಟ್ ಆಗುತ್ತಾ Anti-HIV ಡ್ರಗ್ಸ್?

ವರ್ಕೌಟ್ ಆಗುತ್ತಾ Anti-HIV ಡ್ರಗ್ಸ್?

ಕೊರೊನಾ ಪೀಡಿತ ದಂಪತಿ ಮೇಲೆ ಎಚ್‌ಐವಿ ಎರಡನೇ ಹಂತದ ಔಷಧಿಗಳಾದ ಲೋಪಿನಾವಿರ್ / ರಿಟೊನವಿರ್ ಕಾಂಬಿನೇಷನ್ ಪ್ರಯೋಗ ಮಾಡಲಾಗಿದೆ. ರೋಗಿಗಳ ಒಪ್ಪಿಗೆ ಪಡೆದು ಸರಿಯಾದ ವಿಧಾನವನ್ನು ಅನುಸರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಡ್ರಗ್ಸ್ ಕಾರ್ಯನಿರ್ವಹಿಸುತ್ತಿದೆಯೇ ಎಂದು ಹೇಳುವುದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಕೂಡ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಆತಂಕ: ಎಲ್‌ಕೆಜಿ, ಯುಕೆಜಿ ಜೊತೆಗೆ ಪ್ರಾಥಮಿಕ ಶಾಲೆಗಳಿಗೂ ರಜೆಕೊರೊನಾ ಆತಂಕ: ಎಲ್‌ಕೆಜಿ, ಯುಕೆಜಿ ಜೊತೆಗೆ ಪ್ರಾಥಮಿಕ ಶಾಲೆಗಳಿಗೂ ರಜೆ

ಕೇಂದ್ರ ಆರೋಗ್ಯ ಸಚಿವ ಸ್ಪಷ್ಟನೆ

ಕೇಂದ್ರ ಆರೋಗ್ಯ ಸಚಿವ ಸ್ಪಷ್ಟನೆ

''ಕೊರೊನಾ ಪೀಡಿತರ ಮೇಲೆ ಎರಡನೇ ಸಾಲಿನ ಎಚ್‌ಐವಿ drugs ಔಷಧಿ ಬಳಸಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮೋದನೆ ಪಡೆದಿದೆ. ಆದರೆ ಈ ಲೋಪಿನವೀರ್ / ರಿಟೊನವೀರ್ ಕಾಂಬಿನೇಷನ್‌ನ ಚಿಕಿತ್ಸೆಯನ್ನು COVID-19 ರೋಗಿಗಳಲ್ಲಿ ತುರ್ತು ಬಳಕೆಗಾಗಿ ಅನುಮತಿಸಲಾಗಿದೆ. ಇಲ್ಲಿಯವರೆಗೆ, ಜೈಪುರದಲ್ಲಿ ಆಸ್ಪತ್ರೆಗೆ ದಾಖಲಾದ ಇಬ್ಬರು ಇಟಾಲಿಯನ್ ರೋಗಿಗಳಿಗೆ ಈ ಡ್ರಗ್ಸ್ ಬಳಸಲಾಗಿದೆ'' ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ ನೀಡಿದ್ದಾರೆ.

ಚೀನಾದಲ್ಲಿ ಈ ಡ್ರಗ್ಸ್ ಬಳಕೆಯಾಗಿತ್ತು?

ಚೀನಾದಲ್ಲಿ ಈ ಡ್ರಗ್ಸ್ ಬಳಕೆಯಾಗಿತ್ತು?

ಭಾರತಕ್ಕೂ ಮುಂಚೆ ಕೊರೊನಾ ರೋಗಿಗಳ ಮೇಲೆ ಚೀನಾ Anti-HIV ಡ್ರಗ್ಸ್ ಪ್ರಯೋಗ ಮಾಡಿತ್ತು. ಇದು ಹೊಸ ಔಷಧವಲ್ಲ, ಆದರೂ ಕೆಲವು ಅಡ್ಡಪರಿಣಾಮ ಬೀರುತ್ತೆ. ಇದು ವರ್ಕೌಟ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಸದ್ಯ ಬಳಕೆ ಮಾಡುತ್ತಿರುವ ಔಷಧವಾಗಿರುವುದರಿಂದ ರೋಗಿಗಳ ಒಪ್ಪಿಗೆ ಪಡೆದು ಇದನ್ನು ಪ್ರಯೋಗ ಮಾಡಿದ್ದೇವೆ'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 69 ವರ್ಷದ ವ್ಯಕ್ತಿಗೆ ಕೊರೊನಾ?

69 ವರ್ಷದ ವ್ಯಕ್ತಿಗೆ ಕೊರೊನಾ?

ಜೈಪುರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿರುವ ಪ್ರಕಾರ, 69 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಆ ವ್ಯಕ್ತಿಯನ್ನು ಚೇತರಿಕೆಯಾದ ಬಳಿಕ ಡಿಸ್ಚಾರ್ಜ್ ಮಾಡಲಾಗುತ್ತೆ. ಆ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡ ನಂತರದ ಹತ್ತು ದಿನದಲ್ಲಿ ಆಕೆಯ ಪತ್ನಿಗೂ ಸೋಂಕು ತಗುಲಿತ್ತು. ಇದೀಗ, ಇಬ್ಬರು ನಾರ್ಮಲ್ ಆಗಿದ್ದಾರೆ ಎಂದು ಹೇಳಿದ್ದಾರೆ.

English summary
First time in india anti-hiv drugs used on Italian couple with coronavirus patients in jaipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X