• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಸ್ತರಣಾವಾದ ಮಾನಸಿಕ ಕಾಯಿಲೆ: ಚೀನಾ ವಿರುದ್ಧ ಮೋದಿ ಟೀಕೆ

|

ಜೈಸಲ್ಮೆರ್, ನವೆಂಬರ್ 14: ವಿಸ್ತರಣಾವಾದಿ ಪಡೆಗಳ ಧೋರಣೆಯು 18ನೇ ಶತಮಾನದ ಆಲೋಚನೆಗಳನ್ನು ಪ್ರತಿಫಲಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ವಿರುದ್ಧ ಕಿಡಿಕಾರಿದ್ದಾರೆ.

ರಾಜಸ್ಥಾನದ ಜೈಸಲ್ಮೆರ್‌ನಲ್ಲಿನ ಲೊಂಗೆವಾಲ ಪೋಸ್ಟ್‌ನಲ್ಲಿ ದೀಪಾವಳಿ ಹಬ್ಬದ ಆಚರಣೆಯ ಸಲುವಾಗಿ ಸೈನಿಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ದೇಶದ ಗಡಿಯನ್ನು ರಕ್ಷಿಸುವುದರಿಂದ ಭಾರತೀಯ ಸೈನಿಕರನ್ನು ಜಗತ್ತಿನ ಯಾವುದೇ ಪಡೆಗಳು ತಡೆಯಲಾರವು ಎಂದರು.

'ಇಂದು ಇಡೀ ಜಗತ್ತು ವಿಸ್ತರಣಾವಾದಿ ಪಡೆಗಳಿಂದ ತೊಂದರೆಗೆ ಒಳಗಾಗಿದೆ. ವಿಸ್ತರಣಾವಾದವು ಒಂದು ರೀತಿ ಮಾನಸಿಕ ಕಾಯಿಲೆ ಇದ್ದಂತೆ. ಇದು 18ನೇ ಶತಮಾನದ ಆಲೋಚನೆಯಾಗಿದೆ. ಭಾರತ ಕೂಡ ಈ ಚಿಂತನೆಯ ವಿರುದ್ಧದ ಗಟ್ಟಿ ಧ್ವನಿಯಾಗುತ್ತಿದೆ' ಎಂದು ಮೋದಿ ಅವರು ಹೇಳಿದರು.

'ಭಾರತವು ಬೇರೆಯವರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರಿಗೆ ಅರ್ಥಮಾಡಿಸುವ ನೀತಿಯನ್ನು ನಂಬುತ್ತದೆ. ಆದರೆ ಅದನ್ನು ಪರೀಕ್ಷಿಸಿದರೆ ನಾವು ಕಠಿಣ ಪ್ರತಿಕ್ರಿಯೆ ನೀಡುತ್ತೇವೆ. ನೀವು ಅಲ್ಲಿ ಇರುವವರೆಗೂ ಈ ದೇಶದಲ್ಲಿ ದೀಪಾವಳಿ ಸಂಭ್ರಮಾಚರಣೆಯು ಜೋರಾಗಿ ಮತ್ತು ಪ್ರಕಾಶಮಾನವಾಗಿ ಮುಂದುವರಿಯುತ್ತದೆ' ಎಂದು ಹೇಳಿದರು.

ರಾಜಸ್ಥಾನದ ಲಾಂಗ್‌ವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, "ದೇಶದಲ್ಲಿ ಯಾರಾದರೂ ಒಂದು ಪೋಸ್ಟ್‌ನ ಹೆಸರನ್ನು ನೆನಪಿಸಿಕೊಳ್ಳುವುದಾದರೆ, ಅದು ಲಾಂಗ್‌ವಾಲಾ ಪೋಸ್ಟ್ ಆಗಿದೆ. ಈ ಪೋಸ್ಟ್‌ನಲ್ಲಿ ನಿಮ್ಮ ಸಹೋದ್ಯೋಗಿಗಳು ಅಂತಹ ಶೌರ್ಯವನ್ನು ಬರೆದಿದ್ದಾರೆ, ಜನರು ಅದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಮಿಲಿಟರಿ ಕೌಶಲ್ಯದ ಇತಿಹಾಸವನ್ನು ಬರೆದಾಗಲೆಲ್ಲಾ ಲಾಂಗ್‌ವಾಲಾ ಕದನವನ್ನು ನೆನಪಿಸಿಕೊಳ್ಳಲಾಗುತ್ತದೆ' ಎಂದು ಹೇಳಿದರು.

English summary
PM Narendra Modi attacked China, expansionism is a mental disorder, it reflects 18th century thinking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X