ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ: ಹೈಕೋರ್ಟ್ ಮಹತ್ವದ ತೀರ್ಪು

|
Google Oneindia Kannada News

ಜೈಪುರ, ಜನವರಿ 13: ಉದ್ಯೋಗ ಸ್ಥಳದಲ್ಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುದಾರರನ್ನು ಬೇರೆ ರಾಜ್ಯದಲ್ಲಿ ನಿಯೋಜಿಸುವುದು ಈಗಿನ ಡಿಜಿಟಲ್ ಯುಗದಲ್ಲಿ ಉದ್ಯೋಗ ಸ್ಥಳದಲ್ಲಿನ ಪ್ರಕರಣದ ತನಿಖೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ ಹೇಳಿದೆ.

'ಪ್ರಸ್ತುತದ ಡಿಜಿಟಲ್ ಜಗತ್ತಿನಲ್ಲಿ, ಬ್ಯಾಂಕ್‌ ಉದ್ಯೋಗಿಯ ಕಾರ್ಯ ಸ್ಥಳವು, ಅದೇ ಶಾಖೆಯಲ್ಲಿ ಈ ಹಿಂದೆ ಕೆಲಸ ಮಾಡಿ ಬಳಿಕ ಬೇರೆ ರಾಜ್ಯದಲ್ಲಿನ ವಿಭಿನ್ನ ಶಾಖೆಗೆ ವರ್ಗಾವಣೆಯಾಗಿದ್ದರೆ, ಡಿಜಿಟಲ್ ವೇದಿಕೆಯಲ್ಲಿ ಒಂದೇ ಕಾರ್ಯಸ್ಥಳ ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ ಅವರ ಏಕ ಸದಸ್ಯ ನ್ಯಾಯಪೀಠ ಹೇಳಿದೆ.

ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್ಲೈಂಗಿಕ ಉದ್ದೇಶವಿಲ್ಲದ ಪ್ರೇಮ ನಿವೇದನೆಯ ಸ್ಪರ್ಶ ದೌರ್ಜನ್ಯವಲ್ಲ: ಹೈಕೋರ್ಟ್

ತಮ್ಮ ಅಧೀನ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಮಹತ್ವದ ತೀರ್ಪು ನೀಡಲಾಗಿದೆ. ಮುಂದೆ ಓದಿ.

ಕರ್ತವ್ಯದ ಸ್ಥಳ ಅಲ್ಲ

ಕರ್ತವ್ಯದ ಸ್ಥಳ ಅಲ್ಲ

ಬೇರೆ ರಾಜ್ಯದಲ್ಲಿ ಉದ್ಯೋಗದಲ್ಲಿರುವ ಮಹಿಳೆಗೆ ಕರ್ತವ್ಯದ ಅವಧಿ ಬಳಿಕವೂ ಸಂದೇಶ ಕಳುಹಿಸಿ ಕಿರುಕುಳ ನೀಡಿದ ಆರೋಪ ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರ ಮೇಲಿತ್ತು. ಉದ್ಯೋಗಿಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಂತ್ರಣ - 1976ರ ಪ್ರಕಾರ ಕರ್ತವ್ಯದ ಸ್ಥಳದಲ್ಲಿ ಕಿರುಕುಳ ಸಂಭವಿಸಿದ್ದರೆ ಮಾತ್ರ ತನಿಖೆ ನಡೆಸಬಹುದು. ಕರ್ತವ್ಯದ ಸ್ಥಳದಲ್ಲಿ ಅಂತಹ ಘಟನೆ ನಡೆದಿಲ್ಲ ಎಂದು ಅಧಿಕಾರಿ ವಾದಿಸಿದ್ದರು.

ಸಮಿತಿ ವ್ಯಾಪ್ತಿಗೆ ಬರುವುದಿಲ್ಲ

ಸಮಿತಿ ವ್ಯಾಪ್ತಿಗೆ ಬರುವುದಿಲ್ಲ

ತಮ್ಮ ವಿರುದ್ಧದ ಆರೋಪವು ಬ್ಯಾಂಕಿನ ಶಿಸ್ತುಪಾಲನಾ ಸಮಿತಿಯ ವ್ಯಾಪ್ತಿಗೆ ಬರುವುದಿಲ್ಲ. ಕೆಲಸದ ಅವಧಿ ಮುಗಿದ ಬಳಿಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾಗಿ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಹೊರಡಿಸಿದ್ದ ಆರೋಪಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಲೈಂಗಿಕ ಅಪರಾಧಕ್ಕೆ ಮರಣದಂಡನೆ, ಭಾರಿ ದಂಡ: ಬರಲಿದೆ ಕಠಿಣ ಕಾನೂನುಲೈಂಗಿಕ ಅಪರಾಧಕ್ಕೆ ಮರಣದಂಡನೆ, ಭಾರಿ ದಂಡ: ಬರಲಿದೆ ಕಠಿಣ ಕಾನೂನು

ಒಂದೇ ಸ್ಥಳ ಎಂದೇ ಪರಿಗಣನೆ

ಒಂದೇ ಸ್ಥಳ ಎಂದೇ ಪರಿಗಣನೆ

ಇದನ್ನು ವಜಾಗೊಳಿಸಿದ ಹೈಕೋರ್ಟ್ ಪೀಠ, ಇಂದಿನ ಡಿಜಿಟಲ್ ಜಗತ್ತಿನಲ್ಲಿ ಉದ್ಯೋಗಿಯು ವಿಭಿನ್ನ ಶಾಖೆ ಅಥವಾ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದರೂ ಅದನ್ನು ಡಿಜಿಟಲ್ ವೇದಿಕೆಯಲ್ಲಿ ಒಂದೇ ಕಾರ್ಯ ಸ್ಥಳ ಎಂದೇ ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿ ಜೈಪುರದಲ್ಲಿ ಕೆಲಸ ಮಾಡುತ್ತಿದ್ದು, ಅನ್ಯ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಡಿಜಿಟಲ್ ವೇದಿಕೆ ಮೂಲಕ ಕಿರುಕುಳ ನೀಡಿದರೆ ಅದು ಸಾಮಾನ್ಯ ಕಾರ್ಯ ಸ್ಥಳದಲ್ಲಿಯೇ ಕಿರುಕುಳ ನೀಡಿದ ಪ್ರಕರಣದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದೆ.

ಕರ್ತವ್ಯದ ಅವಧಿ ಇಷ್ಟೇ ಅಲ್ಲ

ಕರ್ತವ್ಯದ ಅವಧಿ ಇಷ್ಟೇ ಅಲ್ಲ

ಹಾಗೆಯೇ ಅರ್ಜಿದಾರರು ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಹುದ್ದೆಯನ್ನು ಹೊಂದಿದ್ದಾರೆ. ಹಿರಿಯ ಮಟ್ಟದ ಅಧಿಕಾರಿಗಳ ಕೆಲಸದ ಸಮಯವನ್ನು ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಮಾತ್ರ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಹಿಳಾ ಸುರಕ್ಷತೆ ಕುರಿತು ರಾಜ್ಯಗಳಿಗೆ ಕೇಂದ್ರದ ಸಲಹೆ: ಪೊಲೀಸರು ಪಾಲಿಸಬೇಕಾದ ನಿಯಮಗಳುಮಹಿಳಾ ಸುರಕ್ಷತೆ ಕುರಿತು ರಾಜ್ಯಗಳಿಗೆ ಕೇಂದ್ರದ ಸಲಹೆ: ಪೊಲೀಸರು ಪಾಲಿಸಬೇಕಾದ ನಿಯಮಗಳು

English summary
Rajasthan High Court said in this digital world, employees working in different states to be considered as 'one work place' for purpose of Sexual Harassment ar workplace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X