• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈಪುರದಲ್ಲಿ ಪ್ರವಾಹದಂತಹ ಮಳೆ: ಹೊರಬಂತು 2400 ವರ್ಷಗಳ ಹಳೆಯ ಮಮ್ಮಿ

|

ಜೈಪುರ, ಆಗಸ್ಟ್ 19: ಜೈಪುರದಲ್ಲಿ ಸುರಿದ ಭಾರಿ ಮಳೆಗೆ 2400 ವರ್ಷಗಳ ಹಿಂದಿನ ಈಜಿಪ್ಟ್‌ ಮಮ್ಮಿಯೊಂದು ಹೊರಬಂದಿದೆ.

2400 ವರ್ಷಗಳಷ್ಟು ಹಳೆಯದಾಗಿರುವ ಈಜಿಪ್ಟ್‌ನ ಮಮ್ಮಿಯೊಂದು ಮಳೆಯಿಂದ ರಕ್ಷಣೆ ಕೊಡುವ ಸಲುವಾಗಿ ಹೊರಕ್ಕೆ ತೆಗೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಈಜಿಪ್ಟ್ ಪಾನೊಪೊಲೀಸ್ ನಗರದ ಅಖ್ಮಿನ್ ಪ್ರಾಂತ್ಯದ ಟುಟು ಎಂಬ ಮಹಿಳೆಯ ಮಮ್ಮಿ ಇದಾಗಿದ್ದು, 130 ವರ್ಷಗಳ ಹಿಂದೆ ಅಲ್ಲಿಂದ ರಾಜಸ್ಥಾನಕ್ಕೆ ತರಲಾಗಿತ್ತು.

ಆಗಸ್ಟ್ 14 ರಂದು ಸುರಿದ ಭಾರಿ ಮಳೆಗೆ ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂ ಒಳಗೆ ನೀರು ನುಗ್ಗಿದೆ. ಪ್ರವಾಹದಿಂದ ರಕ್ಷಿಸಲು ಈ ಮಮ್ಮಿಯನ್ನು 130 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಕ್ಸ್‌ನಿಂದ ಹೊರ ತೆಗೆಯಲಾಗಿದೆ.

130 ವರ್ಷಗಳ ಹಿಂದೆ ಈ ಮಮ್ಮಿಯನ್ನು ಬಾಕ್ಸ್‌ನಿಂದ ಹೊರಕ್ಕೆ ತೆರೆಯಲಾಗಿತ್ತು. ಇದೀಗ ಮತ್ತೆ ತೆಗೆದು ರಕ್ಷಣೆ ಮಾಡಲಾಗಿದೆ. ಇದನ್ನು ಜೈಪುರದ ಅಲ್ಬರ್ಟ್ ಹಾಲ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ.

ಮ್ಯೂಸಿಯಂ ಒಳಗೆ ಐದು ಅಡಿಗಳ ಮೇಲುಭಾಗದವರೆಗೆ ನೀರು ಬಂದಿದೆ. ಇದರಿಂದ ಗ್ಲಾಸ್ ಬಾಕ್ಸ್ ಒಡೆದು ಅದರಿಂದ‌ ಮಮ್ಮಿಯನ್ನು ಹೊರ‌ ತೆಗೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಸೆಂಟ್ರಲ್ ಮ್ಯೂಸಿಯಂನ ಮೇಲ್ವಿಚಾರಕ ಡಾ.ರಾಕೇಶ್ ಚೋಲಾಕ್ ಹೇಳಿದ್ದಾರೆ.

ನವದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಭಾರಿ ಮಳೆ ಎಚ್ಚರಿಕೆ

2016ರಿಂದ ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತು, ಅದನ್ನು ನಾಜೂಕಿನಲ್ಲಿ ಇಡಬೇಕು, ಇಲ್ಲವಾದಲ್ಲಿ ಅದು ಹಾಳಾಗುವ ಸಾಧ್ಯತೆ ಇದೆ. ಈ ಮಮ್ಮಿಯನ್ನು ನೋಡಲು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ಬರುತ್ತಾರೆ.

ಮಮ್ಮಿ ಅಷ್ಟೇ ಅಲ್ಲದೆ 17 ಸಾವಿರ ವಸ್ತುಗಳನ್ನು ರಕ್ಷಿಸಲಾಗಿದೆ. ಪ್ಯಾರಾನಿಕ್ ಮೂರ್ತಿಗಳು, ಲಾಕೆಟ್‌ಗಳು ಸೇರಿ 200 ವಸ್ತುಗಳನ್ನು ರಕ್ಷಿಸಲಾಗಿದೆ. ಮಮ್ಮಿಯನ್ನು ನೀರಿನಿಂದ ಆರುವಂತೆ ಮಾಡಲು ಸಾಕಷ್ಟು ಫ್ಯಾನ್‌ಗಳ ವ್ಯವಸ್ಥೆ ಮಾಡಲಾಗಿದೆ.

English summary
According to officials of Albert Hall museum, the mummy , Tutu, a female member of a priest’s family, dates back to Egypt’s Ptolemaic era (322 BC to 30 BC). It was found in the Akhmin area of the ancient city of Panopolis in Egypt more than 300 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X