ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಡಾ. ಸುಭಾಷ್ ಚಂದ್ರ ನಾಮಪತ್ರ

|
Google Oneindia Kannada News

ಜೈಪುರ, ಮೇ 31: ರಾಜಸ್ಥಾನದಿಂದ ಮೇಲ್ಮನೆ ರಾಜ್ಯಸಭೆಗೆ ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ಸಂಸದ ಡಾ. ಸುಭಾಷ್ ಚಂದ್ರ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಡಾ. ಸುಭಾಷ್‌ ಚಂದ್ರ ಅವರು ಜೈಪುರದ ಮೋತಿದುಂಗರಿಯಲ್ಲಿರುವ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಡಾ. ಸುಭಾಷ್‌ಚಂದ್ರ ಅವರು ವಿಧಾನಸಭೆಯಲ್ಲಿ ಭೇಟಿ ಮಾಡಿದರು. ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಘನಶ್ಯಾಮ್‌ ತಿವಾರಿ ಅವರನ್ನು ಬಿಜೆಪಿ ಸ್ಫರ್ಧೆಗೆ ಇಳಿಸಿದೆ. ಹರಿಯಾಣದಿಂದ ರಾಜ್ಯಸಭಾ ಸದಸ್ಯರಾಗುರುವ ಡಾ. ಚಂದ್ರ ಅವರ ಅಧಿಕಾರ ಅವಧಿಯು ಆಗಸ್ಟ್‌ 1ರಂದು ಕೊನೆಗೊಳ್ಳಲಿದೆ. ಮಂಗಳವಾರ ಮೇ 31ರಂದು ರಾಜಸ್ಥಾನದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ರಾಜ್ಯಸಭೆ: ಮುಸ್ಲಿಮರಿಗೆ ಸ್ಥಾನವನ್ನೇ ನೀಡದ ಬಿಜೆಪಿರಾಜ್ಯಸಭೆ: ಮುಸ್ಲಿಮರಿಗೆ ಸ್ಥಾನವನ್ನೇ ನೀಡದ ಬಿಜೆಪಿ

ರಾಜಸ್ಥಾನದಿಂದ ಹಿರಿಯ ನಾಯಕರಾದ ಮುಕುಲ್‌ ವಾಸ್ನಿಕ್‌, ಪ್ರಮೋದ್‌ ತಿವಾರಿ ಮತ್ತು ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಜೂನ್‌ 1ರಂದು ನಾಮಪತ್ರಗಳ ಪರಶೀಲನೆ ನಡೆಯಲಿದ್ದು, ಜೂನ್‌ 3ರವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶವಿದೆ. ಚುನಾವಣೆ ಜೂನ್‌ 10ರಂದು ಮತದಾನ ನಡೆಯಲಿದೆ. ಆಂಧ್ರಪ್ರದೇಶ, ತೆಲಂಗಾಣ, ಛತ್ತಿಸ್‌ಗಡ, ಮಧ್ಯಪ್ರದೇಶ, ತಮಿಳುನಾಡು, ಕರ್ನಾಟಕ, ಒಡಿಶಾ, ಮಹರಾಷ್ಟ್ರ, ಪಂಜಾಬ್‌, ರಾಜಸ್ಥಾನ, ಉತ್ತರಪ್ರದೇಶ, ಉತ್ತರಖಂಡ, ಬಿಹಾರ, ಜಾರ್ಖಂಡ್‌, ಮತ್ತು ಹರಿಯಾಣದಲ್ಲಿ ದ್ವೈವಾರ್ಷಿಕ ಚುನಾವಣೆಗಳು ನಡೆಯಲಿವೆ.

Dr Subhash Chandra nominated as BJP-backed candidate

ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಹೈಕಮಾಂಡ್, ಕನ್ನಡದ ಖ್ಯಾತ ನಟ ಹಾಗೂ ನವರಸ ನಾಯಕ ಜಗ್ಗೇಶ್ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಿಸಿದೆ.

ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಕರ್ನಾಟಕದಿಂದ ಬಿಜೆಪಿಯಿಂದ ಎರಡು ಸ್ಥಾನಗಳಿಗೆ ಸ್ಪರ್ಧಿಸಿರುವವರು ಆಯ್ಕೆಯಾಗುವುದು ಖಚಿತವಾಗಿದ್ದು, ಮತ್ತೊಂದು ಸ್ಥಾನವನ್ನು ಕಾಂಗ್ರೆಸ್ ಗಳಿಸಲು ಯತ್ನಿಸುತ್ತಿದ್ದು, ಜೆಡಿಎಸ್ ಬಾಹ್ಯ ಬೆಂಬಲದ ನಿರೀಕ್ಷೆಯಲ್ಲಿದೆ.

ಮಧ್ಯಪ್ರದೇಶ: ಕವಿತಾ ಪಾಟೀದಾರ್
ಕರ್ನಾಟಕ: ನಿರ್ಮಲಾ ಸೀತಾರಾಮನ್, ಜಗ್ಗೇಶ್
ಮಹಾರಾಷ್ಟ್ರ: ಪಿಯೂಷ್ ಗೋಯೆಲ್, ಡಾ. ಅನಿಲ್ ಸುಖ್ ದೇವ್ ರಾವ್ ಬೊಂಡೆ
ರಾಜಸ್ಥಾನ: ಘನಶ್ಯಾಮ್ ತಿವಾರಿ
ಉತ್ತರ ಪ್ರದೇಶ: ಡಾ. ಲಕ್ಷ್ಮಿಕಾಂತ್ ವಾಜಪೇಯಿ, ಡಾ. ರಾಧಾಮೋಹನ್ ಅಗರವಾಲ್, ಸುರೇಂದ್ರ ಸಿಂಗ್ ನಾಗರ್, ಬಾಬುರಾಮ್ ನಿಶಾದ್, ದರ್ಶನಾ ಸಿಂಗ್, ಸಂಗೀತಾ ಯಾದವ್
ಉತ್ತರಾಖಂಡ್: ಡಾ. ಕಲ್ಪನಾ ಸೈನಿ ಅವರು ಕಣದಲ್ಲಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Dr Subhash Chandra, Essell Group President and MP from Rajasthan to Upper House Rajya Sabha has filed a nomination for the BJP-backed candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X