ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ; ಕಾಂಗ್ರೆಸ್ ಶಾಸಕರ ಅನರ್ಹತೆ ಬಿಕ್ಕಟ್ಟು ಸುಪ್ರೀಂಕೋರ್ಟ್‌ಗೆ

|
Google Oneindia Kannada News

ಜೈಪುರ, ಜುಲೈ 22 : ರಾಜಸ್ಥಾನ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ. ಸಚಿನ್ ಪೈಲೆಟ್ ಸೇರಿ 19 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್‌ಗೆ ಶುಕ್ರವಾರದ ತನಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Recommended Video

America ನಂತರ Indiaದಲ್ಲಿ ಅತಿ ಹೆಚ್ಚು Covid test | Oneindia Kannada

ವಿಧಾನಸಭೆ ಸ್ಪೀಕರ್ ಸಿ. ಪಿ. ಜೋಶಿ ರಾಜಸ್ಥಾನ ಹೈಕೋರ್ಟ್ ಆದೇಶದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದಾರೆ. ಸ್ಪೀಕರ್ ನೀಡಿರುವ ನೋಟಿಸ್ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.

ಸಚಿನ್ ಪೈಲೆಟ್ ಮುಂದಿನ ನಡೆ; ಶುಕ್ರವಾರ ನಿರ್ಣಾಯಕ ದಿನ! ಸಚಿನ್ ಪೈಲೆಟ್ ಮುಂದಿನ ನಡೆ; ಶುಕ್ರವಾರ ನಿರ್ಣಾಯಕ ದಿನ!

ಶುಕ್ರವಾರ ಅರ್ಜಿಯ ತೀರ್ಪು ನೀಡುವ ತನಕ ಸ್ಪೀಕರ್ ನೋಟಿಸ್ ಕುರಿತು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ರಾಜಸ್ಥಾನ ಹೈಕೋರ್ಟ್‌ನ ಈ ಆದೇಶವನ್ನು ಸ್ಪೀಕರ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದಾರೆ.

ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ! ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ!

ರಾಜಸ್ಥಾನ ಹೈಕೋರ್ಟ್‌ನಲ್ಲಿ ಸ್ಪೀಕರ್ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ, "ಶಾಸಕರಿಗೆ ನೋಟಿಸ್ ಕುರಿತು ಪ್ರಶ್ನೆ ಮಾಡಲು ಅವಕಾಶವೇ ಇಲ್ಲ. ಸ್ಪೀಕರ್ ತೀರ್ಮಾನ ಕೈಗೊಂಡಿದ್ದರೆ ಪ್ರಶ್ನೆ ಮಾಡಬಹುದಿತ್ತು" ಎಂದು ಹೇಳಿದ್ದರು.

''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು? ''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು?

ಕ್ರಮ ಕೈಗೊಳ್ಳುವಂತಿಲ್ಲ

ಕ್ರಮ ಕೈಗೊಳ್ಳುವಂತಿಲ್ಲ

ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರ ಅನರ್ಹತೆ ನೋಟಿಸ್ ವಿಚಾರದಲ್ಲಿ ಶುಕ್ರವಾರದ ತನಕ ಯಾವುದೇ ಕ್ರಮವನ್ನು ಸ್ಪೀಕರ್ ಕೈಗೊಳ್ಳುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಮೊದಲು ಮೂರು ದಿನ ತಡೆಯಾಜ್ಞೆ ನೀಡಿತ್ತು. ಬಳಿಕ ಮಂಗಳವಾರ ಶುಕ್ರವಾರದ ತನಕ ಅದನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಸಂಪೂರ್ಣ ಅಧಿಕಾರವಿದೆ

ಸಂಪೂರ್ಣ ಅಧಿಕಾರವಿದೆ

ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಶಾಸಕರನ್ನು ಅನರ್ಹಗೊಳಿಸಲು ನೋಟಿಸ್ ನೀಡಲಾಗಿದೆ. ಸ್ಪೀಕರ್‌ಗೆ ನೋಟಿಸ್ ನೀಡುವ ಅಧಿಕಾರವಿದೆ. ಹೈಕೋರ್ಟ್ ನೋಟಿಸ್ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡುವ ಮೂಲಕ ವಿಳಂಬ ಮಾಡುತ್ತಿದೆ ಎಂದು ಸ್ಪೀಕರ್ ಸಿ. ಪಿ. ಜೋಶಿ ಹೇಳಿದ್ದಾರೆ. ಆದ್ದರಿಂದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದಾರೆ.

ಸಚಿನ್ ಪೈಲೆಟ್ ಬಣಕ್ಕೆ ಸಮಯ ಸಿಕ್ಕಿದೆ

ಸಚಿನ್ ಪೈಲೆಟ್ ಬಣಕ್ಕೆ ಸಮಯ ಸಿಕ್ಕಿದೆ

ಎರಡು ಸಿಎಲ್‌ಪಿ ಸಭೆಗೆ ಗೈರಾಗಿದ್ದ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಮತ್ತು ಅವರ 18 ಬೆಂಬಲಿತ ಶಾಸಕರಿಗೆ ಸ್ಪೀಕರ್ ಅನರ್ಹತೆ ನೋಟಿಸ್ ನೀಡಿದ್ದರು. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ. ಆದ್ದರಿಂದ, ಸಚಿನ್ ಪೈಲೆಟ್ ಬಣಕ್ಕೆ ಸಮಯ ಸಿಕ್ಕಿದೆ.

ನಾವು ಪಕ್ಷವನ್ನು ಬಿಟ್ಟಿಲ್ಲ

ನಾವು ಪಕ್ಷವನ್ನು ಬಿಟ್ಟಿಲ್ಲ

ರಾಜಸ್ಥಾನ ಹೈಕೋರ್ಟ್‌ನಲ್ಲಿ ಬಂಡಾಯ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲರು, "ವಿಧಾನಸಭೆ ಅಧಿವೇಶನ ನಡೆಯುತ್ತಿಲ್ಲ. ಆದ್ದರಿಂದ, ವಿಪ್‌ಗೆ ಯಾವುದೇ ಮಾನ್ಯತೆ ಇಲ್ಲ. ಶಾಸಕರು ಕಾಂಗ್ರೆಸ್ ಪಕ್ಷವನ್ನು ಬಿಡುತ್ತಿಲ್ಲ. ನಾಯಕತ್ವವನ್ನು ಬದಲಾವಣೆ ಮಾಡಬೇಕು ಎಂದು ಮಾತ್ರ ಕೇಳುತ್ತಿದ್ದಾರೆ" ಎಂದು ಹೇಳಿದ್ದರು.

English summary
Rajasthan speaker C. P. Joshi decided to go to the supreme court against high court order on defer to take action on disqualification notices to 19 rebel MLAs including Sachin Pilot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X