• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಹರು-ಗಾಂಧಿ ಕುಟುಂಬ ಆಕ್ಷೇಪಾರ್ಹ ಪೋಸ್ಟ್‌: ನಟಿ ಜೈಲು ಪಾಲು

|

ಜೈಪುರ, ಡಿಸೆಂಬರ್ 16: ನೆಹರು ಮತ್ತು ಗಾಂಧಿ ಕುಟುಂಬವನ್ನು ಅವಮಾನಿಸಿ ಪೋಸ್ಟ್ ಹಾಕಿದ್ದ ನಟಿ ಪಾಯಲ್ ರೊಹ್ಟಗಿ ಗೆ ಜಾಮೀನು ನಿರಾಕರಿಸಲಾಗಿದ್ದು, ಇನ್ನೂ ಕೆಲವು ದಿನಗಳು ಅವರು ಜೈಲಿನಲ್ಲೇ ಕಳೆಯಬೇಕಿದೆ.

ನೆಹರು-ಗಾಂಧಿ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಪಾಯಲ್ ರೋಹ್ಟಗಿ ಅವರನ್ನು ಭಾನುವಾರ ರಾತ್ರಿ ಬಂಧಿಸಲಾಗಿತ್ತು. ಅವರನ್ನು ಸೋಮವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

6 ಅಂಕಿ ಸಂಬಳ ಗಳಿಸುತ್ತಿರುವ 23ರ ಹರೆಯದ ಟಿಕ್ ಟಾಕ್ ಸ್ಟಾರ್!

ರೊಹ್ಟಗಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಣೆ ಆಗಿದ್ದು, ಅವರನ್ನು ಡಿಸೆಂಬರ್ 24 ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅಲ್ಲಿಯ ವರೆಗೆ ನಟಿ ಜೈಲಿನಲ್ಲೇ ಇರಬೇಕಾಗಿದೆ.

ಮೋತಿಲಾಲ್ ನೆಹರು, ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಬಗ್ಗೆ ಪಾಯಲ್ ರೊಹ್ಟಗಿ ಅವರು ಕೀಳು ಮಟ್ಟದ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹಾಗಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು.

'ಪ್ರಿಯಾಂಕ ಚೋಪ್ರಾ ಜಿಂದಾಬಾದ್' ಎಂದ ಕಾಂಗ್ರೆಸ್ ಮುಖಂಡ: ಮುಸಿಮುಸಿ ನಕ್ಕ ಜನ!

ನಟಿಯನ್ನು ಬಂಧಿಸಿರುವುದರ ಬಗ್ಗೆ ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದು, ರಾಜಸ್ಥಾನ ಪೊಲೀಸರು, ಕಾಂಗ್ರೆಸ್‌ ನ ಕಾವಲು ಕಾಯುತ್ತಿದ್ದಾರಷ್ಟೆ ಎಂದು ಪಾಯಲ್ ರೊಹ್ಟಗಿ ಅವರ ಸ್ನೇಹಿತೆ ಮತ್ತೋರ್ವ ನಟಿ ಪೋಸ್ಟ್ ಮಾಡಿದ್ದಾರೆ.

English summary
Actress Payal Rohtagi sent to judicial custody by court for posting defaming post about Neharu and Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X