• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದುಳಿದ ಜನರಿಗಾಗಿ ದಂಪತಿಯಿಂದ ಉಚಿತ ಮಾಸ್ಕ್ ವಿತರಣೆ

|

ಸೂರತ್, ಅಕ್ಟೋಬರ್.08: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಪ್ರತಿನಿತ್ಯ ಜನರು ಆತಂಕದಲ್ಲೇ ದಿನ ದೂಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕೇಂದ್ರ ಸರ್ಕಾರವೇ ಕಡ್ಡಾಯಗೊಳಿಸಿದೆ.

ದೇಶದಲ್ಲಿ ಉದ್ಯೋಗವಿಲ್ಲದೇ ಹೆಚ್ಚಿನ ಆದಾಯವಿಲ್ಲದೇ ಕೂಲಿ ಕಾರ್ಮಿಕರು ಹಣ ಕೊಟ್ಟು ಮಾಸ್ಕ್ ಗಳನ್ನು ಖರೀದಿಸುವಂತಾ ಸ್ಥಿತಿಯಲ್ಲಿಲ್ಲ. ಈ ಹಿನ್ನೆಲೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿಲೆಂದು ಸೂರತ್ ನಲ್ಲಿನ ದಂಪತಿಯು ಉಚಿತವಾಗಿ ಕಾರ್ಮಿಕರಿಗೆ ಮಾಸ್ಕ್ ಗಳನ್ನು ಹೊಲಿದು ಕೊಡುತ್ತಿದ್ದಾರೆ.

ಗಾಳಿಯಿಂದಲೂ ಕೊರೊನಾ: ಕಡ್ಡಾಯವಾಗಿ ಮಾಸ್ಕ್ ಧರಿಸಲು ಮಮತಾ ಸೂಚನೆ

ಸೂರತ್ ನಿವಾಸಿಗಳಾದ ಹನುಮಾನ್ ಪ್ರಜಾಪತಿ ಮತ್ತು ಅವರ ಪತ್ನಿ ರತನ್ ಬೆನ್ ಅವರು ನಾಲ್ಕು ಪದರಗಳಿರುವ ಮಾಸ್ಕ್ ಗಳನ್ನು ಸಿದ್ಧಪಡಿಸಿ ಉಚಿತವಾಗಿ ನೀಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಲ್ಲಿ ಸೂರತ್ ಸುತ್ತಮುತ್ತಲಿನ ಗ್ರಾಮದಲ್ಲಿ ಸುಮಾರು 6,000 ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಗ್ರಾಮೀಣ ಕೂಲಿ ಕಾರ್ಮಿಕರಿಗಾಗಿ ಮಾಸ್ಕ್ ತಯಾರಿಕೆ:

"ಸೂರತ್ ನಲ್ಲಿರುವ ಟೈಲರ್ ಗಳಿಂದ ಹಾಳಾಗಿರುವ ತುಂಡು ಬಟ್ಟೆಗಳನ್ನು ಸಂಗ್ರಹಿಸುತ್ತಿದ್ದೆನು. ನಂತರದಲ್ಲಿ ಅದರಿಂದಲೇ ಕೂಲಿ ಕಾರ್ಮಿಕರಿಗಾಗಿ ಮಾಸ್ಕ್ ಗಳನ್ನು ತಯಾರಿಸಿ ಉಚಿತವಾಗಿ ನೀಡುತ್ತಿದ್ದೆವು. ನನ್ನ ಪತ್ನಿ ಸಹ ನನ್ನ ಈ ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ್ದರು" ಎಂದು ಹನುಮಾನ್ ಪ್ರಜಾಪತಿ ತಿಳಿಸಿದ್ದಾರೆ.

ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವನ್ನು ಮಾಡುವ ಕಾರ್ಮಿಕರಿಗೆ ಅಗತ್ಯವಿರುವ ಮಾಸ್ಕ್ ಗಳನ್ನು ವಿತರಿಸಲಾಗುತ್ತಿದೆ. ಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್ ಹಂಚಿದ ಹನುಮಾನ್ ಪ್ರಜಾಪತಿ ಅವರು, ಇದೀಗ ನಿಷ್ಕಮ್ ಕರ್ಮ ಸೇವಾ ಫೌಂಡೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

English summary
Couple Stitches Free Masks For Underprivileged From Leftover Fabrics At Surat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X