ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಸ್ಥಳೀಯ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್: ಮುಗ್ಗರಿಸಿದ ಬಿಜೆಪಿ

|
Google Oneindia Kannada News

ಜೈಪುರ, ಡಿಸೆಂಬರ್ 22: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

12 ಜಿಲ್ಲೆಗಳ 50 ಸ್ಥಾನಗಳ ಪೈಕಿ ಕಾಂಗ್ರೆಸ್ 36 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯು 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದ ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ.

ಎಐಎಡಿಎಂಕೆ, ಡಿಎಂಕೆ ಜತೆ ಬಿಲ್‌ಕುಲ್ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ಕಮಲ್ ಹಾಸನ್ಎಐಎಡಿಎಂಕೆ, ಡಿಎಂಕೆ ಜತೆ ಬಿಲ್‌ಕುಲ್ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದ ಕಮಲ್ ಹಾಸನ್

ಒಟ್ಟು 50 ನಾಗರಿಕ ಸ್ಥಾನಗಳಲ್ಲಿ 7 ನಗರಸಭೆ ಮತ್ತು 43 ಪುರಸಭೆಗಳಿವೆ. ನಗರಸಭೆಯ 7 ಸ್ಥಾನಗಳಲ್ಲಿ ಕಾಂಗ್ರೆಸ್ 5 ಗೆದ್ದಿದ್ದರೆ, ಬಿಜೆಪಿ ಒಂದನ್ನು ಮಾತ್ರ ಗೆದ್ದಿದೆ. ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. 28 ಸ್ಥಾನಗಳಲ್ಲಿ ಪುರುಷ ಅಭ್ಯರ್ಥಿ ಗೆಲುವು ಸಾಧಿಸಿದ್ದು, 22 ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ.

Congress Won 36 municipal boards, BJP 12 in Rajasthan Panchayat Elections

ಜೈಪುರ ಜಿಲ್ಲೆಯಲ್ಲಿ ಕಾಂಗ್ರೆಸ್ 10ರಲ್ಲಿ 9 ಪುರಸಭೆಯನ್ನು ಗೆದ್ದು ಬೀಗಿದೆ. ಮತ್ತೊಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾನೆ.

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸರಾ ಅವರು ಟ್ವೀಟ್ ಮಾಡಿದ್ದು "ರಾಜಸ್ಥಾನದ 50 ಪುರಸಭೆಗಳಲ್ಲಿ ಅಧ್ಯಕ್ಷರ ಹುದ್ದೆಗಳಿಗೆ ಚುನಾವಣೆ ಮುಗಿದ ನಂತರ, ಕಾಂಗ್ರೆಸ್ ಪಕ್ಷವು 36 ಸಂಸ್ಥೆಗಳಲ್ಲಿ ಗೆದ್ದು ಬೀಗಿದೆ ಮತ್ತು 12 ಸ್ಥಾನ ಹೊಂದಿರುವ ಬಿಜೆಪಿಗೆ ಕೇವಲ ಶೇಕಡಾ 24ರಷ್ಟು ಮಾತ್ರ ಸಿಗುತ್ತದೆ. ಈ ನಿರೀಕ್ಷಿತ ಫಲಿತಾಂಶಕ್ಕಾಗಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಮತ್ತೊಮ್ಮೆ ಧನ್ಯವಾದಗಳು. " ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ 12 ಜಿಲ್ಲೆಗಳ 1,775 ವಾರ್ಡ್‌ಗಳಲ್ಲಿ 619 ಸ್ಥಾನ ಗೆದ್ದಿತ್ತು. ಸ್ವತಂತ್ರ ಅಭ್ಯರ್ಥಿಗಳು 595 ವಾರ್ಡ್‌ನಲ್ಲಿ ಜಯಿಸಿದರೆ, ಬಿಜೆಪಿಯು 549 ಸ್ಥಾನ ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್ ಪಕ್ಷವು 41 ಪುರಸಭೆಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮಂಡಳಿಗಳನ್ನು ರಚಿಸುವ ಸಾಧ್ಯತೆಯಿದೆ.

English summary
In a major boost to congress bags 36 muncipal boards in Rajasthan Munsipal boards polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X