ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಹುಮತ: ಎನ್ ಡಿಟಿವಿ ವಿಶ್ಲೇಷಣೆ

|
Google Oneindia Kannada News

Recommended Video

Rajasthan Assembly Elections 2018: ಕಾಂಗ್ರೆಸ್ಸಿಗೆ ಬಹುಮತ: ಎನ್ ಡಿಟಿವಿ ವಿಶ್ಲೆಷಣೆ..! | Oneindia Kannada

ಜೈಪುರ, ಡಿಸೆಂಬರ್ 05: ಬಹಳ ಕುತೂಹಲ ಕೆರಳಿಸಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಎನ್ ಡಿಟಿವಿಯ ಪ್ರಣೋಯ್ ರಾಯ್ ವಿಶ್ಲೇಷಿಸಿದ್ದಾರೆ. ಆಡಳಿತಾರೂಢ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಇರುವ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡು ಬಹುಮತ ಗಳಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

2013 ರ ಚುನಾವಣೆಯಲ್ಲಿ ಭಾರೀ ಜಯಗಳಿಸಿದ್ದ ಬಿಜೆಪಿ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರುವ ಸಾಧ್ಯತೆ ಇದೆ. ಕಳೆದ ಚುನಾವಣೆಗೆ ಹೋಲಿಸಿದರೆ, ಬಿಜೆಪಿ 90 ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿವಾದಾತ್ಮಕ ನಡೆ ಮತ್ತು ಪಕ್ಷದ ಜನರಿಂದಲೇ ಸಿಕ್ಕ 'ದುರಹಂಕಾರ' ಎಂಬ ಬಿರುದು, ಅವರ ರಾಜಕೀಯ ಬದುಕಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.

ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಸಮರರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಸಮರ

199(200) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಫಲಿತಾಂಶ ಕುತೂಹಲ ಕೆರಳಿಸಿದೆ. ಎನ್ ಡಿಟಿವಿ ವಿಶ್ಲೇಷಣೆ ಪ್ರಕಾರ ಯಾರಿಗೆಷ್ಟು ಸ್ಥಾನ ಎಂಬ ವಿವರ ಇಲ್ಲಿದೆ.

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಕಾಂಗ್ರೆಸ್- 125
ಬಿಜೆಪಿ - 67
ಬಿಎಸ್ಪಿ - 2
ಇತರರು - 6

2013 ರಲ್ಲಿ ಎಷ್ಟಿತ್ತು?

2013 ರಲ್ಲಿ ಎಷ್ಟಿತ್ತು?

ಕಾಂಗ್ರೆಸ್- 21
ಬಿಜೆಪಿ - 163
ಬಿಎಸ್ಪಿ - 3
ಇತರರು - 13

ಲೇಟೆಸ್ಟ್ ಸರ್ವೇ: ರಾಜಸ್ಥಾನದಲ್ಲಿ ಉಲ್ಟಾ ಹೊಡೆಯುತ್ತಾ ಎಲ್ಲಾ ಸಮೀಕರಣ?ಲೇಟೆಸ್ಟ್ ಸರ್ವೇ: ರಾಜಸ್ಥಾನದಲ್ಲಿ ಉಲ್ಟಾ ಹೊಡೆಯುತ್ತಾ ಎಲ್ಲಾ ಸಮೀಕರಣ?

ಮ್ಯಾಜಿಕ್ ನಂಬರ್ 101

ಮ್ಯಾಜಿಕ್ ನಂಬರ್ 101

200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗ್ಯವಿರುವ ಮ್ಯಾಜಿಕ್ ನಂಬರ್ 101. ಕಾಂಗ್ರೆಸ್ ಸುಲಭವಾಗಿ ಈ ನಂಬರ್ ಅನ್ನು ದಾಟಲಿದೆ ಎಂಬುದು ವಿಶ್ಲೇಷಣೆ. ಹಾಲಿ ಬಿಜೆಪಿ ಸರ್ಕಾರದ ವಿರುದ್ಧ, ಅದರಲ್ಲೂ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ರಾಜ್ಯದ ಜನತೆಯಲ್ಲಿ ಉತ್ತಮ ಅಭಿಪ್ರಾಯವಿದ್ದಂತಿಲ್ಲ. ಈ ಆಡಳಿತ ವಿರೋಧಿ ಅಲೆಯನ್ನೇ ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಾಭಿಪ್ರಾಯವರುವುದು ಬಿಜೆಪಿಗೆ ಲಾಭವಾಗಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಡಿ.7 ರಂದು ಚುನಾವಣೆ

ಡಿ.7 ರಂದು ಚುನಾವಣೆ

ರಾಜಸ್ಥಾನದಲ್ಲಿ ಡಿ.7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಒಟ್ಟು 200 ಕ್ಷೇತ್ರಗಳ ವಿಧಾನಸಭೆಯಲ್ಲಿ 199 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ನ.29 ರಂದು ಹೃದಯಾಘಾತದಿಂದ ಮೃತರಾದ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ರಾಜಸ್ತಾನ ಚುನಾವಣೆಯಲ್ಲಿ ಕ್ಷೀಣಿಸುತ್ತಿದೆ ರಾಜ ಮನೆತನದವರ ಪ್ರಭಾವರಾಜಸ್ತಾನ ಚುನಾವಣೆಯಲ್ಲಿ ಕ್ಷೀಣಿಸುತ್ತಿದೆ ರಾಜ ಮನೆತನದವರ ಪ್ರಭಾವ

English summary
Rajasthan assembly elections 2018: According to NDTV analysis, Congress in Rajasthan will get clear majority against BJP and form government. Anti-incumbency factor will matter a lot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X