ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಚುನಾವಣೆ : ಫಲಿತಾಂಶದ ಬಳಿಕ ಕಾಂಗ್ರೆಸ್ ತಂತ್ರ ಸಿದ್ಧ

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ಜೈಪುರ, ಡಿಸೆಂಬರ್ 10 : ರಾಜಸ್ಥಾನ ವಿಧಾನಸಭೆ ಚುನಾವಣೆಯ ಫಲಿತಾಂಶ ಮತಯಂತ್ರದಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ ರಾಜ್ಯದಲ್ಲಿ ಚುನಾವಣೆ ಗೆದ್ದು ಅಧಿಕಾರ ಪಡೆಯುವ ವಿಶ್ವಾಸದಲ್ಲಿದೆ. ಡಿ.11ರ ಮಂಗಳವಾರ ಫಲಿತಾಂಶ ಪ್ರಕಟವಾಗಲಿದೆ.

ರಾಜಸ್ಥಾನ ಕಾಂಗ್ರೆಸ್‌ನ ಪ್ರಮುಖ ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ. ಮುಂದಿನ ನಡೆ ಬಗ್ಗೆ ಅವರು ಚರ್ಚೆ ನಡೆಸಲಿದ್ದು, ಡಿಸೆಂಬರ್ 11ರ ಬೆಳಗ್ಗೆ ಎಲ್ಲರೂ ರಾಜಸ್ಥಾನಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.

ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ!ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ!

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಸಚಿನ್ ಪೈಲೆಟ್ ಅವರು ದೆಹಲಿಯಲ್ಲಿದ್ದಾರೆ. ರಾಜ್ಯದ ಪ್ರತಿಪಕ್ಷ ನಾಯಕ ರಾಮೇಶ್ವರ ದುಡಿ ಅವರು ಸಹ ದೆಹಲಿ ತಲುಪಿದ್ದು, ಸಂಭಾವ್ಯ ಗೆಲ್ಲುವ ಅಭ್ಯರ್ಥಿಗಳಿಗೆ ಈಗಾಗಲೇ ಕರೆ ಮಾಡಲಾಗುತ್ತಿದೆ.

ವಸುಂಧರಾ ರಾಜೆ ದಪ್ಪವಾಗಿದ್ದಾರೆ, ಅವರಿಗೆ ರೆಸ್ಟ್ ಕೊಡಿ: ಶರದ್ ಯಾದವ್!ವಸುಂಧರಾ ರಾಜೆ ದಪ್ಪವಾಗಿದ್ದಾರೆ, ಅವರಿಗೆ ರೆಸ್ಟ್ ಕೊಡಿ: ಶರದ್ ಯಾದವ್!

Congress strategists to remain in Jaipur during the counting of votes

ಕಾಂಗ್ರೆಸ್ ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಡಿಸೆಂಬರ್ 12ರಂದು ಪಕ್ಷದ ಶಾಸಕರ ಸಭೆ ನಡೆಯಲಿದೆ. ಹೈಕಮಾಂಡ್ ಆದೇಶದಂತೆ ಒಂದು ಸಾಲಿನ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗುತ್ತದೆ. ಜೈಪುರದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ಪೋಲ್ ಆಫ್ ಪೋಲ್ಸ್ : ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆಪೋಲ್ ಆಫ್ ಪೋಲ್ಸ್ : ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ

ಮುಖ್ಯಮಂತ್ರಿ ಆಯ್ಕೆಗೆ 2008ರಲ್ಲಿ ಉಂಟಾದ ಪರಿಸ್ಥಿತಿ ಎದುರಾಗಬಾರದು ಎಂಬುದು ಪಕ್ಷದ ಆಶಯವಾಗಿದೆ. ಆಗ ಅಶೋಕ್ ಗೆಹ್ಲೋಟ್ ಮತ್ತು ಸಿ.ಪಿ.ಜೋಶಿ ಅವರು ನಡುವೆ ಪೈಪೋಟಿ ನಡೆದಿತ್ತು. ಅಂತಿಮವಾಗಿ ಸಿ.ಪಿ.ಜೋಶಿ ಒಂದು ಮತದ ಅಂತರದಿಂದ ಚುನಾವಣೆಯಲ್ಲಿ ಸೋತಿದ್ದರು.

ಮಂಗಳವಾರ ಜೈಪುರದಲ್ಲಿ ಫಲಿತಾಂಶದ ಬಳಿಕ ಎಲ್ಲಾ ತಂತ್ರಗಳನ್ನು ಶಾಸಕರ ಜೊತೆ ಚರ್ಚೆ ನಡೆಸಲಾಗುತ್ತದೆ. ಗುಲಾಂ ನಬಿ ಆಜಾದ್, ಅವಿನಾಶ್ ಪಾಂಡೆ ಮುಂತಾದ ನಾಯಕರು ಚುನಾವಣಾ ಫಲಿತಾಂಶದ ವಿಶ್ಲೇಷಣೆ ಮಾಡಲಿದ್ದಾರೆ.

English summary
Fate of candidates for Rajasthan Assembly are closed in the Electronic Voting Machines (EVMs) that will open on December 11 but the Congress is confident of forming the government in the state and all important leaders of the party rushed to Delhi to discuss future strategy n Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X