ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಲ್ಲಿ ಇನ್ಮುಂದೆ 'ಒಂದು ಕುಟುಂಬಕ್ಕೆ ಒಂದೇ ಟಿಕೆಟ್'; ಗಾಂಧಿ ಕುಟುಂಬಕ್ಕೂ ಅನ್ವಯ?

|
Google Oneindia Kannada News

ಜೈಪುರ, ಮೇ 13: 'ಒಂದು ಕುಟುಂಬ, ಒಂದು ಟಿಕೆಟ್‌' ನೀತಿಯನ್ನು ಅಳವಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಹೊಸ ನಿಯಮದಂತೆ ಪಕ್ಷದ ಇತರೆ ವಿಭಾಗಗಳಲ್ಲಿ 5 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಇರುವವರು ಸ್ಥಾನ ತೊರೆಯಬೇಕು ಮತ್ತು ಅದೇ ಹುದ್ದೆ ಪಡೆಯಲು 3 ವರ್ಷ ಕಾಯಬೇಕಾಗುತ್ತದೆ.

ರಾಜಸ್ಥಾನದ ಉದಯಪುರ್‍‌ನಲ್ಲಿ ನಡೆದ ಕಾಂಗ್ರೆಸ್‌ ಚಿಂತನಾ ಶಿಬಿರದಲ್ಲಿಈ ನಿರ್ಣಯ ಕೈಗೊಳ್ಳಲಾಗಿದೆ. 'ಒಂದು ಕುಟುಂಬ, ಒಂದು ಟಿಕೆಟ್‌' ನಿಯಮಕ್ಕೆ ಕಾಂಗ್ರೆಸ್‌ನ ಎಲ್ಲಾ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Congress Chintan Shivir; ಇಂದಿನಿಂದ ಮೂರು ದಿನ ಕಾಂಗ್ರೆಸ್ ಚಿಂತನ ಶಿಬಿರ; ಕೈಪಾಳಯಕ್ಕೆ ಯುವ ಕಳೆ? Congress Chintan Shivir; ಇಂದಿನಿಂದ ಮೂರು ದಿನ ಕಾಂಗ್ರೆಸ್ ಚಿಂತನ ಶಿಬಿರ; ಕೈಪಾಳಯಕ್ಕೆ ಯುವ ಕಳೆ?

ಪಕ್ಷದ ಪುನಶ್ಚೇತನಕ್ಕಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದ್ದು, ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಪಕ್ಷದಲ್ಲಿ ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಸಮನ್ವಯ ಸಾಧಿಸಲು, ಚುನಾವಣೆ ಜವಾಬ್ದಾರಿಗಳನ್ನು ಯುವಕರಿಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Congress Set to Adopt One Family One Ticket Policy

"ಕನಿಷ್ಠ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ, ಒಂದು ಕುಟುಂಬದ ಇಬ್ಬರು ಅಥವಾ ಮೂವರು ಸದಸ್ಯರು ಪಕ್ಷಕ್ಕಾಗಿ ಐದು ವರ್ಷಕ್ಕಿಂತ ಹೆಚ್ಚಿಗೆ ಕೆಲಸ ಮಾಡಿದ್ದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ, ಐದು ವರ್ಷಕ್ಕಿಂತ ಕಡಿಮೆ ಕೆಲಸ ಮಾಡಿದವರಿಗೆ ಟಿಕೆಟ್ ನೀಡಬಾರದು ಎಂದು ಶಿಬಿರದಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲಾ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರಿಗೂ ತಕ್ಷಣಕ್ಕೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ" ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ತಿಳಿಸಿದ್ದಾರೆ.

Congress Set to Adopt One Family One Ticket Policy

"ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ 5 ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಪಕ್ಷಕ್ಕಾಗಿ ದುಡಿಯುತ್ತಿದ್ದು ಅವರು ಚುನಾವಣೆಗೆ ನಿಲ್ಲಬಹುದು. ಅನಾರೋಗ್ಯ ಅಥವಾ ಇತರೆ ಕಾರಣದಿಂದ ಸೋನಿಯಾ ಗಾಂಧಿ ಚುನಾವಣೆಗೆ ಸ್ಪರ್ಧಿಸದಿದ್ದರೂ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ" ಎಂದು ಅಜಯ್ ಮಾಕೆನ್ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಈ ಹೊಸ ನಿಯಮದಿಂದ ಹಿರಿಯ ರಾಜಕಾರಣಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದ್ದು ಈ ನಿಯಮ ಒಪ್ಪಿಕೊಳ್ಳದೆ ವಿರೋಧ ವ್ಯಕ್ತಪಡಿಸಬಹುದು ಎಂದು ಮತ್ತೊಬ್ಬ ಕಾಂಗ್ರೆಸ್ ನಾಯಕ ಅಭಿಪ್ರಾಯಪಟ್ಟಿದ್ದಾರೆ.

English summary
The Congress is set to adopt a one family, one ticket policy at the party’s Chintan Shibir in Rajasthans Udaipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X