ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡುವ ಕಾಂಗ್ರೆಸ್ ಗೆ ನೈತಿಕತೆ ಇದೆಯಾ?: ಮೋದಿ

|
Google Oneindia Kannada News

26/11ರ ಮುಂಬೈ ದಾಳಿಯ ವಿಚಾರವನ್ನು ರಾಜಕೀಯಕ್ಕೆ ಬಳಸಬಾರದು ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷವು 2016ರಲ್ಲಿ ಭಾರತೀಯ ಸೈನ್ಯವು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನೆ ಮಾಡಲು ನುಗ್ಗಿ ಬಂದಿತು ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ತಾನದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದಾರೆ.

"ಸರ್ಜಿಕಲ್ ಸ್ಟ್ರೈಕ್ ಗೆ ಸಂಬಂಧಿಸಿದಂತೆ ಅವರು (ಕಾಂಗ್ರೆಸ್) ದಾಖಲೆಗಾಗಿ ಒತ್ತಾಯಿಸುತ್ತಾರೆ. ಕಾರ್ಯಾಚರಣೆಗೆ ತೆರಳುವ ಯೋಧರು ಕ್ಯಾಮೆರಾ ತೆಗೆದುಕೊಂಡು ಹೋಗ್ತಾರಾ?" ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಸುರಕ್ಷತೆ ವಿಚಾರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ ಎಂದಿದ್ದಾರೆ.

ಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆಮುಂಬೈ ದಾಳಿ: ಹತ್ತು ವರ್ಷ ಕಳೆದರೂ ಇನ್ನೂ ಮಾಸದ ಗಾಯದ ಕಲೆ

"ಕಾಶ್ಮೀರದಿಂದ ಹೊರಗೆ ಕಾಲಿಡುವುದಕ್ಕೆ ಉಗ್ರಗಾಮಿಗಳಿಗೆ ಸಾಧ್ಯವಾಗುತ್ತಿಲ್ಲ" ಎಂದಿರುವ ಅವರು, ಯುಪಿಎ ಸರಕಾರ ಆಡಳಿತ ನಡೆಸುತ್ತಿದ್ದಾಗ ಪದೇಪದೇ ದಾಳಿ ನಡೆಯುತ್ತಿತ್ತು. ಅದೀಗ ನಿಯಂತ್ರಣಕ್ಕೆ ಬಂದಿದೆ ಹೇಗೆಂದರೆ, ಭಯೋತ್ಪಾದಕರು ಹಾಗೂ ಮಾವೋವಾದಿಗಳಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಾತಿ ಹಾಗೂ ಪೋಷಕರ ವಿಚಾರ ಎಳೆಯುತ್ತಿದೆ ಕಾಂಗ್ರೆಸ್

ಜಾತಿ ಹಾಗೂ ಪೋಷಕರ ವಿಚಾರ ಎಳೆಯುತ್ತಿದೆ ಕಾಂಗ್ರೆಸ್

ರಾಜಸ್ತಾನದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ನರೇಂದ್ರ ಮೋದಿ, ಈಚೆಗೆ ಕಾಂಗ್ರೆಸ್ ನಾಯಕರು ತಮ್ಮ ಜಾತಿ ಹಾಗೂ ಪೋಷಕರ ವಿಚಾರವನ್ನು ಎಳೆದು ತರುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ಅಸಮಾಧಾನ ಹೊರಹಾಕಿದರು.

ಮಾವೋವಾದಿಗಳು ಕಾಂಗ್ರೆಸ್ಸಿಗರ ಪಾಲಿಗೆ ಕ್ರಾಂತಿಕಾರಿಗಳು

ಮಾವೋವಾದಿಗಳು ಕಾಂಗ್ರೆಸ್ಸಿಗರ ಪಾಲಿಗೆ ಕ್ರಾಂತಿಕಾರಿಗಳು

ರಾಹುಲ್ ಗಾಂಧಿ ಅವರ ಹೆಸರನ್ನು ನೇರವಾಗಿ ಪ್ರಸ್ತಾವ ಮಾಡದಿದ್ದರೂ, 'ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರಿಗೆ' ಜನ ಸಾಮಾನ್ಯರ ಹೋರಾಟದ ಬಗ್ಗೆ ಗೊತ್ತಿರುವುದಿಲ್ಲ ಎಂದು ಪರೋಕ್ಷವಾಗಿ ತಿವಿದರು. ಜನರನ್ನು ಕೊಲ್ಲುವ ಮಾವೋವಾದಿಗಳನ್ನು ಕಾಂಗ್ರೆಸ್ ನಾಯಕರು ಕ್ರಾಂತಿಕಾರಿಗಳು ಎಂದು ಕರೆದು, ಸರ್ಟಿಫಿಕೇಟ್ ನೀಡುತ್ತಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಗೆ ತಿರುಗೇಟು; ಇಂದಿರಾ ವಿರುದ್ಧ ಮೋದಿ ಟೀಕಾಸ್ತ್ರರಾಹುಲ್ ಗಾಂಧಿಗೆ ತಿರುಗೇಟು; ಇಂದಿರಾ ವಿರುದ್ಧ ಮೋದಿ ಟೀಕಾಸ್ತ್ರ

ಪ್ರಣಾಳಿಕೆಯಲ್ಲಿ ಆ ಭರವಸೆಯ ಪ್ರಸ್ತಾವ ಇದೆಯಾ?

ಪ್ರಣಾಳಿಕೆಯಲ್ಲಿ ಆ ಭರವಸೆಯ ಪ್ರಸ್ತಾವ ಇದೆಯಾ?

ಕಾಂಗ್ರೆಸ್ ಪಕ್ಷವನ್ನು ಹಾಗೂ ಅದರ ನಾಯಕರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊಬೈಲ್ ಫೋನ್ ಗಳಲ್ಲಿ "ಮೇಡ್ ಇನ್ ಡುಂಗರ್ ಪುರ್" ಎಂದಿರುತ್ತದೆ ಅಂದಿದ್ದಾರೆ. ಆದರೆ ಇದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

ಪ್ರಣಾಳಿಕೆ ಅಂದರೇನು ಅಂತಲೂ ಗೊತ್ತಿಲ್ಲದ ರಾಹುಲ್ ಗಾಂಧಿ

ಪ್ರಣಾಳಿಕೆ ಅಂದರೇನು ಅಂತಲೂ ಗೊತ್ತಿಲ್ಲದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಅವರಿಗೆ ಎನ್ ಸಿಸಿ ಅಂದರೇನು ಅಂತ ಗೊತ್ತಿಲ್ಲ. ಇವರಿಗೆ ಪ್ರಣಾಳಿಕೆ ಅಂದರೇನು ಎಂಬುದೂ ಗೊತ್ತಿಲ್ಲ. ಕೈಲಾಶ್ ಮಾನಸ ಸರೋವರಕ್ಕೆ ಹೋಗಿಬಂದರೂ ಅವೆಲ್ಲ ಏನು ಅಂತಲೇ ಗೊತ್ತಿಲ್ಲ ಎಂದು ನರೇಂದ್ರ ಮೋದಿ ರಾಜಸ್ತಾನದ ಬುಡಕಟ್ಟು ಪ್ರದೇಶ ಬನ್ಸ್ ವಾರದಲ್ಲಿ ಹೇಳಿದ್ದಾರೆ.

ನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿನನ್ನನ್ನು ಎದುರಿಸಲಾಗದೆ ತಾಯಿಯ ಹೆಸರನ್ನು ತೆಗೆದುಕೊಂಡಿದೆ ಕಾಂಗ್ರೆಸ್: ಮೋದಿ

English summary
Prime Minister Narendra Modi launched a sharp attack on the Congress over the 26/11 Mumbai terror attacks, recalling how the party that was then in power had urged political parties not to politicise the terror strikes but had rushed to question the 2016 surgical strikes carried out by the army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X