ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲಿಂಪಿಯನ್ ಕೃಷ್ಣ ಪೂನಿಯಾಗೆ ಜೈಪುರದ ಟಿಕೆಟ್ ಕೊಟ್ಟ ಕಾಂಗ್ರೆಸ್

|
Google Oneindia Kannada News

ಜೈಪುರ, ಏಪ್ರಿಲ್ 02: ಒಲಿಂಪಿಕ್ ಡಿಸ್ಕಸ್ ಎಸೆತಗಾರ್ತಿ ಕೃಷ್ಣ ಪೂನಿಯಾ ಅವರಿಗೆ ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ಸಿನಿಂದ ಬಿ ಫಾರಂ ನೀಡಲಾಗಿದೆ.

ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸುವ ಮೂಲಕ ಒಟ್ಟಾರೆ, 325 ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೆಸರಿಸಿದೆ.

ಜೈಪುರ ಕ್ಷೇತ್ರ ಪರಿಚಯ

ಮೂರು ಬಾರಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಕೃಷ್ಣ ಪೂನಿಯ ಅವರು, ರಾಜಸ್ಥಾನದ ಸದಲ್ ಪುರ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ.

Congress fields Olympian Krishna Poonia from Jaipur Rural LS seat

ಈಗ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ, ಒಲಿಂಪಿಕ್ಸ್ ಪದಕ ವಿಜೇತ, ಜೈಪುರ ಗ್ರಾಮೀಣ ಕ್ಷೇತ್ರದ ಹಾಲಿ ಸಂಸದ ರಾಜ್ಯವರ್ಧನ್ ರಾಥೋರ್ ವಿರುದ್ಧ ಕೃಷ್ಣ ಪೂನಿಯಾ ಸೆಣಸಲಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಭ್ಯರ್ಥಿಗಳ ಹೊಚ್ಚ ಹೊಸ ಪಟ್ಟಿಯಲ್ಲಿ ಇಬ್ಬರು ಮಹಾರಾಷ್ಟ್ರ, ಗುಜರಾತಿನ ಒಬ್ಬರು ಹಾಗೂ ರಾಜಸ್ಥಾನದ 6 ಮಂದಿ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಈ ಪೈಕಿ ಸುರೇಶ್ ಕಲ್ಮಾಡಿ ಪ್ರತಿನಿಧಿಸುತ್ತಿದ್ದಾ ಪುಣೆಯಿಂದ ಮೋಹನ್ ಜೋಶಿ ಅವರಿಗೆ ಟಿಕೆಟ್ ನೀಡಲಾಗಿದೆ.

ರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆ

2010ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಡಿಸ್ಕಸ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಪೂನಿಯಾ ಅವರು ಈಗ ಸಂಸದೆಯಾಗಲು ಮುಂದಾಗಿದ್ದಾರೆ.

English summary
The Congress on Monday fielded Olympian discus thrower Krishna Poonia from the Jaipur Rural constituency as it released another list of nine candidates for the Lok Sabha polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X