• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ಅಜಯ್ ಮಾಕೇನ್ ಅಗ್ನಿ ಪರೀಕ್ಷೆ!

|
Google Oneindia Kannada News

ನವದೆಹಲಿ, ಜುಲೈ 29: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ)ಯ ರಾಜಸ್ಥಾನ ಉಸ್ತುವಾರಿ ಅಜಯ್ ಮಾಕೇನ್ ತಮ್ಮದೇ ಪಕ್ಷದ ಸರ್ಕಾರ ಮತ್ತು ಶಾಸಕರಿಗೆ ಅಗ್ನಿಪರೀಕ್ಷೆಯೊಡ್ಡಿದ್ದಾರೆ. ಜೈಪುರದಲ್ಲಿ ಪಕ್ಷದ ಶಾಸಕರ ಜೊತೆಗೆ ಮುಖಾಮುಖಿ ಸಂವಾದ ನಡೆಸಿದರು. ರಾಜ್ಯ ಉಸ್ತುವಾರಿ ಎಸೆದ ಪ್ರಶ್ನೆಗಳ ಸರಮಾಲೆಗೆ ಕಾಂಗ್ರೆಸ್ ಶಾಸಕರು ಕಕ್ಕಾಬಿಕ್ಕಿಯಾದರು.
ರಾಜ್ಯದಲ್ಲಿ ಸರ್ಕಾರ ಮತ್ತು ಶಾಸಕರ ಅಭಿಪ್ರಾಯವನ್ನು ಕೂಲಂಕುಶವಾಗಿ ಪರಾಮರ್ಶೆ ಮಾಡಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಅಧ್ಯಕ್ಷರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯ ಸಂಪುಟ ಪುನಾರಚನೆ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆ ಶನಿವಾರ ರಾತ್ರಿ ಅಜಯ್ ಮಾಕೇನ್ ಮತ್ತು ಕೆ ಸಿ ವೇಣುಗೋಪಾಲ್ ಸಭೆ ನಡೆಸಿದ್ದರು.

2 ದಿನದಲ್ಲೇ ಲಸಿಕೆ ಖಾಲಿ; 30 ಲಕ್ಷ ಲಸಿಕೆ ಕೊಡಿ ಎಂದ ಮುಖ್ಯಮಂತ್ರಿ!2 ದಿನದಲ್ಲೇ ಲಸಿಕೆ ಖಾಲಿ; 30 ಲಕ್ಷ ಲಸಿಕೆ ಕೊಡಿ ಎಂದ ಮುಖ್ಯಮಂತ್ರಿ!

ಕಾಂಗ್ರೆಸ್ ಶಾಸಕರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಮತ್ತು ಸರ್ಕಾರದ ಯೋಜನೆಗಳ ಪರಿಣಾಮಕಾರಿ ಜಾರಿ ಕುರಿತು ಶಾಸಕರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಲಾಯಿತು. ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಯಾವ ಕಾರ್ಯಗಳ ಮೇಲೆ ಹೆಚ್ಚು ಲಕ್ಷ್ಯ ವಹಿಸಿದ್ದಾರೆ. ಸರ್ಕಾರದ ಯೋಜನೆಗಳು ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂಬುದರ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಕುರಿತು ಕಾಂಗ್ರೆಸ್ ಶಾಸಕರಿಗೆ ಅಜಯ್ ಮಾಕೇನ್ ಕೇಳಿದ ಪ್ರಶ್ನೆಗಳನ್ನು ಒಮ್ಮೆ ನೀವೂ ಓದಿ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ಕೇಳಿರುವ ಪ್ರಶ್ನೆಗಳು:
* ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ಷಮತೆ ಹೇಗಿದೆ? ಸಚಿನವರ ಬಗ್ಗೆ ನಿಮ್ಮದೇನಾದರೂ ದೂರು ಇದೆಯೇ?.
* ಸರ್ಕಾರದ ಕಾರ್ಯ ಯೋಜನೆಗಳು ಹೇಗಿವೆ, ಉತ್ತಮವಾಗಿ ಅವುಗಳ ಅನುಷ್ಠಾನವಾಗುತ್ತಿವೆಯೇ ಇಲ್ಲವೇ?
* ಈ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಹೇಗೆ, ಆ ಬಗ್ಗೆ ನಿಮ್ಮಲ್ಲಿರುವ ಸಲಹೆಗಳೇನು?
* ಡಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ನೀವು ಯಾರನ್ನು ಆಯ್ಕೆ ಮಾಡಲು ಇಚ್ಛಿಸುತ್ತೀರಿ?.
* ನಿಮ್ಮ ಘಟಕದಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಚುನಾಯಿಸಲು ಬಯಸುತ್ತೀರಿ?.
* ಸರ್ಕಾರ ಅಥವಾ ಪಕ್ಷದ ಬಗ್ಗೆ ನಿಮ್ಮಲ್ಲಿ ಏನಾದರೂ ಅಸಮಾಧಾನ ಅಥವಾ ದೂರು ಇದೆಯೇ?

ರಾಜಸ್ಥಾನದಲ್ಲಿ ಸಂಪುಟ ಪುನಾರಚನೆ ಬಗ್ಗೆ ಅಸಮಾಧಾನವಿಲ್ಲ:
ರಾಜ್ಯ ಸಚಿವ ಸಂಪುಟ ಪುನಾರಚನೆ ಬಗ್ಗೆ ಶಾಸಕರಲ್ಲಿ ಯಾವುದೇ ರೀತಿ ಅಸಮಾಧಾನವಿಲ್ಲ ಎಂದು ಮುಖಂಡರು ತಿಳಿಸಿದ್ದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಗಿನ ಚರ್ಚೆ ಬಳಿಕ ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರಿಗೆ ಬಿಡಲಾಗಿದೆ. ಈ ಸಂದರ್ಭದಲ್ಲಿ ಕೆಲವು ಸಚಿವರು ಸಂಪುಟದಿಂದ ತೆಗೆದುಹಾಕಲಾಗುವುದು. ಈ ಪ್ರಕ್ರಿಯೆ ಎಲ್ಲವೂ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗಲಿದೆ ಎಂದು ಗೆಹ್ಲೋಟ್ ಹೇಳಿದ್ದರು. ಅದರ ಪೈಕಿ ಶಿಕ್ಷಣ ಸಚಿವ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಗೋವಿಂದ್ ಸಿಂಗ್ ದೋತಸ್ರಾ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

English summary
Congress Examine to Overhaul Govt And Party; Here Read Ajay Makens Questionnaire To Rajasthan MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X