ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ಲಗ್ನ ಪತ್ರಿಕೆಯಲ್ಲಿ ಜನ್ಮ ದಿನಾಂಕ ನಮೂದು ಕಡ್ಡಾಯ

|
Google Oneindia Kannada News

ಜೈಪುರ, ಏಪ್ರಿಲ್ 10: ಬಾಲ್ಯ ವಿವಾಹವನ್ನು ತಡೆಯಲು ರಾಜಸ್ಥಾನ ಸರ್ಕಾರ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಪ್ರತಿಯೊಂದು ವಿವಾಹದ ಲಗ್ನ ಪತ್ರಿಕೆಯಲ್ಲಿ ವಧು-ವರರ ಹುಟ್ಟಿದ ದಿನಾಂಕವನ್ನು ಮುದ್ರಿಸಲು ಸೂಚಿಸಿದೆ. ಅಲ್ಲದೆ, ಆಹ್ವಾನ ಪತ್ರಿಕೆ ಮುದ್ರಿಸಲು ಸೂಚಿಸಿದೆ.

ಅಲ್ಲದೆ, ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವ ಪ್ರಿಟಿಂಗ್ ಪ್ರೆಸ್‌ಗಳಿಗೆ ಜೋಡಿ ತಮ್ಮ ಜನನ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯಗೊಳಿಸಿದೆ.ಒಂದು ವೇಳೆ ವಧುವಿಗೆ 18 ವರ್ಷ ಪೂರ್ಣಗೊಳ್ಳದೇ ಇದ್ದಲ್ಲಿ ವಧು-ವರನ ಕಡೆಯವರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತದೆ.

ಮೇ 14ರ ಈ ಬಾರಿಯ ಅಕ್ಷಯ ತೃತೀಯದ ವಿವಾಹ ಸಮಾರಂಭಗಳಿಗೆ ರಾಜಸ್ಥಾನ ಸರ್ಕಾರ ಕಟ್ಟಾಜ್ಞೆ ಜಾರಿಗೊಳಿಸಿದೆ. ಈ ಮೂಲಕ ಬಾಲ್ಯ ವಿವಾಹ ಕಡಿವಾಣದ ಶಪಥ ತೊಟ್ಟಿದೆ. ಬಾಲ್ಯ ವಿವಾಹಗಳ ಸೂತ್ರಧಾರರ ವಿರುದ್ಧ ಮಾತ್ರವಲ್ಲದೆ ಮದುವೆಗೆ ಊಟ ಪೂರೈಸಿದ ಕೇಟರಿಂಗ್ ಮೇಲೂ ಪ್ರಕರಣ ದಾಖಲಿಸಲು ಆದೇಶ ನೀಡಲಾಗಿದೆ.

Child Marriage : Rajsthan Govt Plans To Curb With Checks On Birth Certificate, Wedding card

ಅಷ್ಟೇ ಅಲ್ಲದೆ, ಅಂಥ ವಿವಾಹಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳು, ಅಡುಗೆ ಸಿಬ್ಬಂದಿ, ಪುರೋಹಿತರು, ಬ್ಯಾಂಡ್‌ನವರು, ಟೆಂಟ್‌ನವರೆಲ್ಲರ ಮೇಲೂ ಕೇಸ್ ಬೀಳಲಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಗೃಹ ಇಲಾಖೆ ಕಠಿಣ ನಿಯಮ ಜಾರಿಗೊಳಿಸಿದೆ, ಮೇ 14ರ ಅಕ್ಷಯ ತೃತೀಯ ಹಾಗೂ ಪೀಪಲ್ ಪೂರ್ಣಿಮಾಮೇ 26 ರಂದು ನಡೆಯಲಿದೆ.

English summary
Rajasthan government has prepared a ‘mega plan’ to stop child marriage during the Akhateej. The state government have ordered the groom and bride’s name be printed on the wedding card and also a copy of the birth certificate of the couple must be submitted to the printing press.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X