ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಗೆಹ್ಲೋಟ್‌ ಸರ್ಕಾರಕ್ಕೆ ಸಂಕಟ ತಂದ ಬಿಎಸ್‌ಪಿ ಆನೆ!

|
Google Oneindia Kannada News

ಜೈಪುರ, ಆಗಸ್ಟ್ 06 : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್‌ಪಿಯ ಆನೆ ಸಂಕಟ ತಂದಿದೆ. ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ ಆರಂಭವಾಗಲಿದೆ.

ಬಿಎಸ್‌ಪಿಯ 6 ಶಾಸಕರು ಕಾಂಗ್ರೆಸ್‌ ಜೊತೆ ವಿಲೀನಗೊಂಡಿರುವುದನ್ನು ಬಿಎಸ್‌ ಪಿ ಮತ್ತು ಬಿಜೆಪಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿವೆ. ಈ ಅರ್ಜಿಯ ವಿಚಾರಣೆಯನ್ನು ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.

ರಾಜಸ್ಥಾನ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಸ್ಥಳಾಂತರ! ರಾಜಸ್ಥಾನ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಸ್ಥಳಾಂತರ!

ಆಗಸ್ಟ್ 11ರಂದು ಅರ್ಜಿಯ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವುದು ರದ್ದುಗೊಂಡರೆ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಹಿನ್ನಡೆಯಾಗಲಿದೆ.

ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ! ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ!

ತಮ್ಮ ಸರ್ಕಾರಕ್ಕೆ 102 ಶಾಸಕರ ಬಲವಿದೆ ಎಂದು ಅಶೋಕ್ ಗೆಹ್ಲೋಟ್ ಹೇಳುತ್ತಿದ್ದಾರೆ. ಒಂದು ವೇಳೆ ಬಿಎಸ್‌ಪಿ ಬೆಂನಲ ನೀಡಿಲ್ಲ ಎಂದರೆ ಸರ್ಕಾರದ ಬಲ ಕಡಿಮೆಯಾಗಲಿದೆ ಆಗ ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಇದೆ.

ರಾಜಸ್ಥಾನದಲ್ಲಿ ಬಿಎಸ್‌ಪಿ, ಕಾಂಗ್ರೆಸ್‌ ವಿಲೀನ; ಶಾಸಕರಿಗೆ ನೋಟಿಸ್ರಾಜಸ್ಥಾನದಲ್ಲಿ ಬಿಎಸ್‌ಪಿ, ಕಾಂಗ್ರೆಸ್‌ ವಿಲೀನ; ಶಾಸಕರಿಗೆ ನೋಟಿಸ್

ಮ್ಯಾಜಿಕ್ ನಂಬರ್ ಬದಲು

ಮ್ಯಾಜಿಕ್ ನಂಬರ್ ಬದಲು

6 ಬಿಎಸ್‌ಪಿ ಶಾಸಕರ ಬೆಂಬಲವಿಲ್ಲದಿದ್ದರೆ ಅಶೋಕ್ ಗೆಹ್ಲೋಟ್ ಸರ್ಕಾರದ ಬೆಂಬಲಿತ ಶಾಸಕರ ಸಂಖ್ಯೆ 102 ರಿಂದ 96ಕ್ಕೆ ಕುಸಿಯಲಿದೆ. ಪ್ರತಿಪಕ್ಷ ಬಿಜೆಪಿ 72 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ಬಂಡಾಯ ಶಾಸಕರು, ಮೂವರು ಪಕ್ಷೇತರ ಸದಸ್ಯರ ಬಲ ಸೇರಿದರೆ ಒಟ್ಟು ಸದಸ್ಯ ಬಲ 97 ಆಗಲಿದೆ. ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ ಸಹ 101 ರಿಂದ 97ಕ್ಕೆ ಕುಸಿಯಲಿದೆ.

ಬಿಎಸ್‌ಪಿಯೇ ವಿರೋಧಿಸುತ್ತಿದೆ

ಬಿಎಸ್‌ಪಿಯೇ ವಿರೋಧಿಸುತ್ತಿದೆ

6 ಬಿಎಸ್‌ಪಿ ಶಾಸಕರು ಕಾಂಗ್ರೆಸ್ ಜೊತೆ ವಿಲೀನವಾಗಿದ್ದನ್ನು ಬಿಎಸ್‌ಪಿಯೇ ವಿರೋಧಿಸುತ್ತಿದೆ. ಬಿಜೆಪಿ ಮತ್ತು ಬಿಎಸ್‌ಪಿ 2019ರ ಸೆಪ್ಟೆಂಬರ್‌ನಲ್ಲಿ ವಿಲೀನಕ್ಕೆ ಸ್ಪೀಕರ್ ಒಪ್ಪಿಗೆ ಕೊಟ್ಟಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿವೆ.

ಕಲಾಪಕ್ಕೆ ಹಾಜರಾಗುವುದು ಬೇಡ

ಕಲಾಪಕ್ಕೆ ಹಾಜರಾಗುವುದು ಬೇಡ

ಬಿಜೆಪಿ ಮತ್ತು ಬಿಎಸ್‌ಪಿ 6 ಬಿಎಸ್‌ಪಿ ಶಾಸಕರು ವಿಧಾನಸಭೆ ಕಲಾಪಕ್ಕೆ ಹಾಜರಾಗದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿವೆ. ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಮಾಡಲು ಮುಂದಾದರೆ ಆಗ ಸಂಕಷ್ಟ ಎದುರಾಗಲಿದೆ.

ಕೋರ್ಟ್ ಹೇಳಿದ್ದೇನು?

ಕೋರ್ಟ್ ಹೇಳಿದ್ದೇನು?

ಅರ್ಜಿಯ ವಿಚಾರಣೆ ನಡೆಸುತ್ತಿರುವ ರಾಜಸ್ಥಾನ ಹೈಕೋರ್ಟ್ ಏಕಸದಸ್ಯ ಪೀಠ ಬಿಎಸ್‌ಪಿ ಶಾಸಕರು ಕಾಂಗ್ರೆಸ್ ಶಾಸಕರಂತೆ ಕಾರ್ಯ ನಿರ್ವಹಣೆ ಮಾಡಲು ತಡೆ ಕೊಟ್ಟಿಲ್ಲ. ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

English summary
BSP appeal seeking a temporary freeze on the merger of its 6 MLA's with Rajasthan's Congress government has been dismissed by the high court. Single bench will hearing the case and order may on August 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X