ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಒಳನುಸುಳುಕೋರರನ್ನು ಸದೆ ಬಡಿದ ಭಾರತೀಯ ಯೋಧರು

|
Google Oneindia Kannada News

ನವದೆಹಲಿ, ಆಗಸ್ಟ್ 08: ಪಾಕಿಸ್ತಾನದಿಂದ ಭಾರತದೊಳಗೆ ಅಕ್ರಮವಾಗಿ ಬರುತ್ತಿದ್ದ ನುಸುಳುಕೋರರನ್ನು ಗಡಿ ಭದ್ರತಾ ಪಡೆಯ ಯೋಧರು ಹತ್ಯೆಗೈದಿದ್ದಾರೆ.

ರಾಜಸ್ಥಾನದ ಬರ್ಮರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದ್ದು, ಒಳನುಸುಳಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆಯು(ಬಿಎಸ್‌ಎಫ್‌) ಶುಕ್ರವಾರ ತಡರಾತ್ರಿ ಹೊಡೆದುರುಳಿಸಿದೆ.

ಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರಜಲಾಲಾಬಾದ್ ಜೈಲಿನಲ್ಲಿ ರಕ್ತದೋಕುಳಿ ಹರಿಸಿದ ಉಗ್ರ

ಶವನ್ನು ವಶಕ್ಕೆ ಪಡೆದಿರುವ ಯೋಧರು, ಘಟನಾ ಸ್ಥಳದಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಇದೇ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂಬ ಎಚ್ಚರಿಕೆ ಹಿನ್ನಲೆಯಲ್ಲಿ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

BSF Kills Suspected Pakistan Intruder In Rajasthans Barmer

ಇದೇ ಸಂದರ್ಭದಲ್ಲಿ ಗಡಿಯಲ್ಲೂ ಒಳ ನುಸುಳುವಿಕೆಯಂತಹ ಘಟನೆಗಳ ಹೆಚ್ಚಾಗಿ ಕಂಡುಬರುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಅಂತಾರಾಷ್ಟ್ರೀಯ ಗಡಿ ಮೂಲಕ ಒಳನುಸುಳಲು ಯತ್ನಿಸಿದ ವ್ಯಕ್ತಿಗೆ ಬಿಎಸ್‌ಎಫ್‌ ಯೋಧರು ಎಚ್ಚರಿಕೆ ನೀಡಿದರು. ಆದರೆ, ಆತ ಗಡಿದಾಟಲು ಪ್ರಯತ್ನಿಸಿದ. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಈತನನ್ನು ಸೈನಿಕರು ಹೊಡೆದುರುಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬಕ್ಸಾರ್‌ ಪ್ರದೇಶದ ಬಳಿ ಘಟನೆ ನಡೆದಿದ್ದು. ಈ ವೇಳೆ ಪಾಕಿಸ್ತಾನದಿಂದ 10-15 ಟಾರ್ಚ್‌ಗಳ ಬೆಳಕು ಕಾಣಿಸಿಕೊಂಡಿತ್ತು ಮತ್ತು ಶಬ್ದ ಕೇಳಿ ಬಂದಿತ್ತು. ಈ ವೇಳೆ ಸೈನಿಕರು ಎಚ್ಚರಿಕೆ ನೀಡಿದರು.

ಆದರೂ ಒಳನುಸುಳುವಿಕೆ ಮುಂದುವರೆದಾಗ ಶಬ್ದ ಬಂದ ಜಾಗಕ್ಕೆ ಸೈನಿಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಗಿಡಗಂಟೆಗಳಲ್ಲಿ ಓರ್ವ ಅವಿತುಕೊಂಡಿದ್ದ. ಕೂಡಲೇ ಸ್ಥಳಕ್ಕೆ ಸೈನಿಕರು ದೌಡಾಯಿಸಿದ ಸೈನಿಕರು ಶೋಧ ನಡೆಸಿದಾಗ ಓರ್ವ ನುಸುಳುಕೋರ ಶವವಾಗಿ ಪತ್ತೆಯಾಗಿದ್ದ.

English summary
A suspected Pakistani infiltrator was killed on Saturday by the Border Security Force (BSF) along the International Border in Rajasthan's Barmer district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X