ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಕ್ಕೂ ಸವಾಲು

|
Google Oneindia Kannada News

ಜೈಪುರ, ಜೂ. 09: ರಾಜಸ್ತಾನದಲ್ಲಿ ಕಾಂಗ್ರೆಸ್‌ನ ಹಾಗೂ ಬಿಜೆಪಿ ಪಕ್ಷದಲ್ಲಿನ ಒಳಜಗಳವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಸವಾಲನ್ನು ಎದುರಿಸುತ್ತಿದೆ. ಒಂದೆಡೆ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಒಳಜಗಳವಾದರೆ, ಇನ್ನೊಂದೆಡೆ ಬಿಜೆಪಿಯ ಒಳಜಗಳ ರಾಜಕೀಯ ವಲಯದಲ್ಲಿ ಗದ್ದಲ ಸೃಷ್ಟಿಸಿದೆ.

ಕಳೆದ ವರ್ಷದಲ್ಲಿ ರಾಜಸ್ತಾನ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಂಗ್ರೆಸ್‌ನ ಸಚಿನ್‌ ಪೈಲಟ್‌ ಬಣ, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ದ ಬಂಡಾಯವೆದ್ದಿದರು. ಸುಮಾರು 18 ಶಾಸಕರೊಂದಿಗೆ ಸಚಿನ್‌ ಪೈಲಟ್‌ ಬಹಿರಂಗವಾಗಿಯೇ ಬಂಡಾಯವೆದ್ದು ಬಳಿಕ ಸುಮಾರು ಒಂದು ತಿಂಗಳ ಕಾಲ ಸರ್ಕಾರ ಉರುಳಲಿದೆ ಎಂಬ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಹೈಕಮಾಂಡ್‌ ಮಧ್ಯಪ್ರವೇಶದ ನಂತರ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಒಟ್ಟಾಗಿ ರಾಜಸ್ಥಾನದ ಕಾಂಗ್ರೆಸ್‌ ರಾಜಕೀಯವು ಸುಖಾಂತ್ಯವನ್ನು ಕಂಡಿತ್ತು.

ವಿಶ್ವಾಸಮತ ಗೆದ್ದ ಅಶೋಕ್ ಗೆಹ್ಲೋಟ್ ಸರ್ಕಾರ; ಬಿಜೆಪಿಗೆ ಮುಖಭಂಗವಿಶ್ವಾಸಮತ ಗೆದ್ದ ಅಶೋಕ್ ಗೆಹ್ಲೋಟ್ ಸರ್ಕಾರ; ಬಿಜೆಪಿಗೆ ಮುಖಭಂಗ

ಈಗ ಸಚಿನ್‌ ಪೈಲಟ್‌ ಮತ್ತೆ ಸ್ವಪಕ್ಷ ಆಡಳಿತದ ವಿರುದ್ದ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಈ ನಡುವೆ ರಾಜಸ್ಥಾನ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟು ಹೆಚ್ಚಾಗಿದ್ದು, ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಸಚಿನ್ ಪೈಲಟ್ ಬೆಂಬಲಿಗ ಹೇಮರಾಮ್ ಚೌಧರಿ ಕಳೆದ ತಿಂಗಳು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ.

 ಪೈಲಟ್ ಮತ್ತು ಅಶೋಕ್ ಗೆಹ್ಲೋಟ್‌ ಬಣದ ನಡುವೆ ಮತ್ತೆ ಬಿರುಕು?

ಪೈಲಟ್ ಮತ್ತು ಅಶೋಕ್ ಗೆಹ್ಲೋಟ್‌ ಬಣದ ನಡುವೆ ಮತ್ತೆ ಬಿರುಕು?

ಬಾರ್ಮರ್ ಜಿಲ್ಲೆಯ ಗುಡಮಲಾನಿ ಶಾಸಕ ಹೇಮರಾಮ್ ಚೌಧರಿ ತಮ್ಮ ರಾಜೀನಾಮೆಗೆ ಯಾವುದೇ ಕಾರಣವನ್ನು ಉಲ್ಲೇಖ ಮಾಡಲ್ಲ. ಆದರೆ ಸಚಿನ್‌ ಪೈಲಟ್‌ ಬಣದ ಈ ಶಾಸಕರ ರಾಜೀನಾಮೆಗೆ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್‌ ಬಣದ ನಡುವೆ ಮತ್ತೆ ಕಾಣಿಸಿಕೊಂಡಿರುವ ಬಿರುಕೇ ಕಾರಣ ಎಂದು ಹೇಳಲಾಗಿದೆ. ಈ ನಡುವೆ ವಿಧಾನಸಭೆ ಸ್ಪೀಕರ್ ಶಾಸಕರಿಗೆ ವೈಯಕ್ತಿಕವಾಗಿ ಹಾಜರಾಗಲು ಮತ್ತು ರಾಜೀನಾಮೆಯನ್ನು ಸ್ವೀಕರಿಸುವ ಮೊದಲು ಕಾರಣ ವಿವರಿಸಲು ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ, ಪೈಲಟ್ ಪಕ್ಷದ ಹೈಕಮಾಂಡ್ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ಬೆನ್ನಲ್ಲೇ 8 ಶಾಸಕರು ಮುಖ್ಯಮಂತ್ರಿ ಗೆಹ್ಲೋಟ್ ವಿರುದ್ಧ ದಂಗೆ ಎದಿದ್ದಾರೆ.

ಅರ್ಧ ಪ್ಯಾಂಟ್ ಧರಿಸಿ ನಿಂತು ಭಾಷಣ ಮಾಡುವುದು ರಾಷ್ಟ್ರೀಯತೆಯಲ್ಲ: ಸಚಿನ್ಅರ್ಧ ಪ್ಯಾಂಟ್ ಧರಿಸಿ ನಿಂತು ಭಾಷಣ ಮಾಡುವುದು ರಾಷ್ಟ್ರೀಯತೆಯಲ್ಲ: ಸಚಿನ್

 ರಾಜಸ್ಥಾನ ಬಿಜೆಪಿಯಲ್ಲೂ ರಾಜಕೀಯ ಬಿಕ್ಕಟ್ಟು

ರಾಜಸ್ಥಾನ ಬಿಜೆಪಿಯಲ್ಲೂ ರಾಜಕೀಯ ಬಿಕ್ಕಟ್ಟು

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಇನ್ನಷ್ಟು ಉಲ್ಭಣಿಸಿ ಸಕಾರ ಪತನವಾಗಬಹುದೇ ಎಂಬ ಪ್ರಶ್ನೆಗಳು ಮೂಡುತ್ತಿರುವ ನಡುವೆ ಇತ್ತ ಬಿಜೆಪಿಯಲ್ಲೂ ಬಿಕ್ಕಟ್ಟು ಕಾಣಿಸಿಕೊಂಡಿದೆ. 2023 ರಲ್ಲಿ ಬಿಜೆಪಿ ಆಡಳಿತ ಪಡೆದರೆ ಸಿಎಂ ಆಗುವುದು ಯಾರು ಎಂಬ ಬಗ್ಗೆ ಕೆಲವು ನಾಯಕರು ಹೇಳಿಕೆಗಳನ್ನು ನೀಡುತ್ತಿರುವುದು ಮಾತ್ರವಲ್ಲದೇ ಇದರಿಂದಾಗಿ ಬಿಜೆಪಿಯೊಳಗೆ ಬಿಕ್ಕಟ್ಟು ಕಾಣಿಸಿಕೊಂಡಿದೆ. 2020 ರ ಡಿಸೆಂಬರ್‌ನಲ್ಲಿ, ಮಾಜಿ ರಾಜಮನೆತನದ ಹಲವಾರು ಬೆಂಬಲಿಗರು ರಾಜ್ಯದಲ್ಲಿ ವಸುಂಧರಾ ರಾಜೇ ನೇತೃತ್ವದ ಹಿಂದಿನ ಸರ್ಕಾರಗಳ ಸಾಧನೆಗಳು ಮತ್ತು ನೀತಿಗಳನ್ನು ಪ್ರಚಾರ ಮಾಡಲು 'ವಸುಂಧರಾ ರಾಜೇ ಸಮರ್ಥಕ್ ರಾಜಸ್ಥಾನ (ಮಂಚ್)' ರಚಿಸಿದಾಗ ಬಿಜೆಪಿಯ ಉನ್ನತ ನಾಯಕರಲ್ಲಿ ಆಂತರಿಕ ಬಿಕ್ಕಟ್ಟು ಉಲ್ಭಣವಾಯಿತು. ರಾಜಸ್ಥಾನ ವಿಧಾನಸಭೆ ಉಪಚುನಾವಣೆಗೆ ಮುನ್ನ ತಮ್ಮ ಹಾಗೂ ಮಾಜಿ ಸಿಎಂ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ರಾಜ್ಯ ಮುಖ್ಯಸ್ಥ ಸತೀಶ್ ಪೂನಿಯಾ, ಪ್ರತಿಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಮತ್ತು ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್‌ರನ್ನು ಭೇಟಿಯಾಗಿದ್ದರು. ಇದೀಗ ಮತ್ತೆ ಸಚಿವರೊಬ್ಬರು ಬಿಜೆಪಿಯಿಂದ ವಸುಂಧರಾ ರಾಜೇ ಅವರೇ ಮುಖ್ಯಮಂತ್ರಿ ಆಗುವುದು ಸೂಕ್ತ ಎಂಬ ಹೇಳಿಕೆ ನೀಡಿದ್ದು ಈ ವಿಚಾರದಲ್ಲಿ ರಾಜಸ್ಥಾನದ ಬಿಜೆಪಿಯಲ್ಲಿ ಮತ್ತೆ ಗದ್ದಲ ಆರಂಭವಾಗಿದೆ.

 ಸ್ವಪಕ್ಷದ ವಿರುದ್ದ ಮತ್ತೆ ಪೈಲಟ್‌ ಆಕ್ರೋಶ

ಸ್ವಪಕ್ಷದ ವಿರುದ್ದ ಮತ್ತೆ ಪೈಲಟ್‌ ಆಕ್ರೋಶ

ರಾಜಸ್ಥಾನದಲ್ಲಿ ಕಳೆದ ವರ್ಷದ ಬಿಕ್ಕಟ್ಟು ಆರಂಭವಾದ ಸಂದರ್ಭ ಸಚಿನ್‌ ಪೈಲಟ್‌ ಬಣಕ್ಕೆ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಈವರೆಗೂ ಬೇಡಿಕೆ ಈಡೇರಿಸಿಲ್ಲ ಎಂದುಈಗ ಮತ್ತೆ ಪೈಲಟ್‌ ಬಣ ದಂಗೆ ಎದ್ದಿದೆ. ''ಭರವಸೆ ನೀಡಿ 10 ತಿಂಗಳಾಗಿದೆ. ಸಮಿತಿ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದು ನನ್ನಲ್ಲಿ ಹೇಳಲಾಗಿತ್ತು. ಆದರೆ ಈಗ ಅರ್ಧದಷ್ಟು ಅವಧಿ ಮುಗಿದಿದೆ. ಸಮಿತಿ ಸಮಸ್ಯೆಗಳನ್ನು ಪರಿಹರಿಸಿಲ್ಲ'' ಎಂದು ಹೇಳಿರುವ ಸಚಿನ್‌ ಪೈಲಟ್‌, ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ನಡುವೆ ರಾಜಸ್ಥಾನ ಸಂಪುಟ ಪುನರ್‌ ರಚನೆಯ ಸುದ್ದಿಗಳು ಕೇಳಿಬಂದಿದೆ.

ರಾಜಸ್ಥಾನ: ವಸುಂಧರಾ ರಾಜೇ ಮುಂದೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್ರಾಜಸ್ಥಾನ: ವಸುಂಧರಾ ರಾಜೇ ಮುಂದೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್

 ''ಬಿಜೆಪಿಯಲ್ಲಿ ವಸುಂಧರಾ ರಾಜೆಗಿಂತ ಬೇರೆ ಸಿಎಂ ಮುಖವಿಲ್ಲ''

''ಬಿಜೆಪಿಯಲ್ಲಿ ವಸುಂಧರಾ ರಾಜೆಗಿಂತ ಬೇರೆ ಸಿಎಂ ಮುಖವಿಲ್ಲ''

ಮಾಜಿ ಸಚಿವರಾದ ರೋಹಿತಾಶ್ವ ಶರ್ಮಾ, ''ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಗಿಂತ ಬಿಜೆಪಿಯಲ್ಲಿ ಬೇರೆ ಯಾವುದೇ ಸಿಎಂ ಮುಖಗಳು ಇಲ್ಲ. ಬೇರೆ ಯಾರೂ ಸಿಎಂ ಆಗಲು ಅರ್ಹರಾಗಿಲ್ಲ'' ಎಂದು ಹೇಳಿದ್ದಾರೆ. ಹಾಗೆಯೇ ''ಸಂಕಷ್ಟದಲ್ಲಿರುವ ಜನರಿಗೆ ಆಹಾರವನ್ನು 'ವಸುಂಧರಾ ರಾಜೇ ಸಮರ್ಥಕ್ ರಾಜಸ್ಥಾನ (ಮಂಚ್)' ವಿತರಿಸುತ್ತಿದೆಯೇ ಹೊರತು ಬಿಜೆಪಿಯಲ್ಲ'' ಎಂದು ಸ್ವಪಕ್ಷವನ್ನು ಟೀಕಿಸಿದ್ದಾರೆ. ''ರಾಜಸ್ಥಾನ ಸಿಎಂಗೆ 5-6 ಹೆಸರುಗಳು ಕೇಳಿ ಬಂದಿದೆ. ಆದರೆ 68 ವರ್ಷದ 2 ಬಾರಿ ಸಿಎಂ ಆದ ನಾಯಕರೇ ಸೂಕ್ತ'' ಎಂದು ಕೂಡಾ ಹೇಳಿಕೊಂಡಿದ್ದಾರೆ ರೋಹಿತಾಶ್ವ ಶರ್ಮಾ. ರಾಜೇ 2003 ರಿಂದ 2008 ರವರೆಗೆ ಮತ್ತು 2013 ರಿಂದ 2018 ರವರೆಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ರಾಜಸ್ಥಾನ ಬಿಕ್ಕಟ್ಟಿನ ಸಂದರ್ಭದಲ್ಲಿ, ಬಿಜೆಪಿ ಮಿತ್ರಪಕ್ಷದ ಹನುಮಾನ್ ಬೆನಿವಾಲ್, ರಾಜ್ಯದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉಳಿಸಲು ವಸುಂಧರಾ ರಾಜೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ನಾನು ಪಕ್ಷಕ್ಕೆ ನಿಷ್ಠಳಾಗಿದ್ದೇನೆ, ಆದರೆ ಕೆಲವರು ಗೊಂದಲವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Rajasthan political crisis: Both Congress and BJP face challenges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X