ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲಟ್ ಭವಿಷ್ಯದಲ್ಲಿ ಬಿಜೆಪಿ ಸೇರಬಹುದು: ಬಿಜೆಪಿ ಉಪಾಧ್ಯಕ್ಷ ಅಬ್ದುಲ್ಲಾಕುಟ್ಟಿ

|
Google Oneindia Kannada News

ಜೈಪುರ, ಆಗಸ್ಟ್ 09: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಸಚಿನ್ ಪೈಲಟ್ ಭವಿಷ್ಯದಲ್ಲಿ ಬಿಜೆಪಿಗೆ ಸೇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅಬ್ದುಲ್ಲಾಕುಟ್ಟಿ ಹೇಳಿದ್ದಾರೆ.

''ಸಚಿನ್ ಪೈಲಟ್ ಉತ್ತಮ ನಾಯಕ ಮತ್ತು ಅವರು ಭವಿಷ್ಯದಲ್ಲಿ ಬಿಜೆಪಿ ಸೇರುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ಅಬ್ದುಲ್ಲಾಕುಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ವರ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ನಿಷ್ಠಾವಂತ ಶಾಸಕರು ಬಂಡಾಯವೆದ್ದ ನಂತರ ಸಚಿನ್ ಪೈಲಟ್ ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಇದರ ನಡುವೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಿದ ತಾನು ಬಿಜೆಪಿಗೆ ಸೇರುವುದಿಲ್ಲ ಎಂದು ಪೈಲಟ್ ಹೇಳಿದ್ದರು.

Sachin Pilot

ಬಿಜೆಪಿ ಮುಸ್ಲಿಂರ ವಿರುದ್ಧ ಎಂದು ಕೆಲವರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಅಬ್ದುಲ್ಲಕುಟ್ಟಿ ಹೇಳಿದ್ದಾರೆ. ಬಿಜೆಪಿ ಮುಸ್ಲಿಮರ ವಿರುದ್ಧವಾಗಿದೆ ಎಂಬುದು ಸುಳ್ಳು.

ಸಚಿನ್ ಪೈಲಟ್ ಮುಂದಿಟ್ಟ ಬೇಡಿಕೆಗೆ ರಾಹುಲ್, ಸೋನಿಯಾ ಗಾಂಧಿ ಬೇಸ್ತು!ಸಚಿನ್ ಪೈಲಟ್ ಮುಂದಿಟ್ಟ ಬೇಡಿಕೆಗೆ ರಾಹುಲ್, ಸೋನಿಯಾ ಗಾಂಧಿ ಬೇಸ್ತು!

ನಮ್ಮ ಗೌರವಾನ್ವಿತ ಆರ್‌ಎಸ್‌ಎಸ್ ಮುಖ್ಯಸ್ಥರು ಮುಸ್ಲಿಮರು ಮತ್ತು ಹಿಂದೂಗಳು ಒಂದೇ. ಅವರ ಡಿಎನ್‌ಎ ಕೂಡ ಒಂದೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಪಕ್ಷವಾಗಿದೆ. ಇದು ಅದರ ತತ್ವವಾಗಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದರು. ಇತ್ತೀಚೆಗೆ, ಕಾಂಗ್ರೆಸ್ ನಾಯಕರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ರಾಜಸ್ಥಾನದಲ್ಲಿ ಬಹುನಿರೀಕ್ಷಿತ ಕ್ಯಾಬಿನೆಟ್ ಪುನರ್ರಚನೆಯ ಬಗ್ಗೆ ಚರ್ಚೆ ನಡೆಸಿದರು.

''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು?''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು?

ಪೈಲಟ್ ನೇತೃತ್ವದ ಶಿಬಿರದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದಂತೆ ರಾಜಸ್ಥಾನದಲ್ಲಿ ಸಂಪುಟ ವಿಸ್ತರಣೆ ಮತ್ತು ರಾಜಕೀಯ ನೇಮಕಾತಿಗಳ ಬೇಡಿಕೆಗಳು ವೇಗ ಪಡೆದುಕೊಂಡಿವೆ.

ಕಳೆದ ತಿಂಗಳು, ಪೈಲಟ್ ಎತ್ತಿದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸೂಚಿಸಿದ್ದರು.

ಬಿಜೆಪಿ ವಿರುದ್ಧ ಪ್ರಚಾರ ನಡೆಸಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಪೈಲಟ್ ನೆರವಾಗಿದ್ದರು. ಆದರೆ, ಸಿಎಂ ಆಗಿ ಅಶೋಕ್ ಗೆಹ್ಲೋಟ್ ಅವರನ್ನು ನೇಮಿಸಲಾಗಿತ್ತು.

ಇನ್ನು ಒಂದು ವರ್ಷದೊಳಗೆ ನನ್ನನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಸಾರ್ವಜನಿಕವಾಗಿ, ಹೈಕಮಾಂಡ್ ಈ ಬಗ್ಗೆ ಘೋಷಣೆ ಮಾಡಿದರೆ ಮಾತ್ರ ನಾನು, ರಾಹುಲ್ ಗಾಂಧಿಯನ್ನು ಭೇಟಿಯಾಗುವೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆಂದು ವರದಿಯಾಗಿತ್ತು.ರಾಜಸ್ಥಾನ ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಅತಿಮ ಹಂತಕ್ಕೆ ಬಂದು ತಲುಪಿದಂತೆ ತೋರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಮಾತುಗಳು ಕಳೆದ ವರ್ಷ ಕೇಳಿಬಂದಿತ್ತು.

ಇದೆಲ್ಲಕ್ಕೂ ತಮ್ಮ ಬೆಂಬಲಿಗ ಶಾಸಕರೊಂದಿಗೆ ದೆಹಲಿಯಲ್ಲಿ ಸಚಿನ್ ಪೈಲಟ್ ಬೀಡುಬೀಟ್ಟಿದ್ದೇ ಕಾರಣವಾಗಿತ್ತು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕರೆದಿರುವ ಇಂದಿನ ಸಭೆಗೆ ಹಾಜರಾಗದಿರುವ ನಿರ್ಧಾರ ಕೈಗೊಂಡಿದ್ದಾರೆ.

ಇಂದಿನ ಸಭೆಗೆ ಹಾಜರಾಗುವಂತೆ ಕಾಂಗ್ರೆಸ್ ವಿಪ್ ಜಾರಿ ಮಾಡಿದ್ದರೂ ವಿಪ್ ಧಿಕ್ಕರಿಸಿ ಸಭೆಗೆ ಗೈರು ಹಾಜರಾಗುವ ನಿರ್ಣಯವನ್ನು ಸಚಿನ್ ಪೈಲಟ್ ಮಾಡಿದ್ದರು ಎನ್ನಲಾಗಿತ್ತು.

ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್ ಇದೀಗ ಬಿಜೆಪಿ ಸೇರುವ ಕುರಿತು ಎರಡನೇ ಬಾರಿ ಚರ್ಚೆ ಆರಂಭಗೊಂಡಿದೆ.

Recommended Video

Neeraj Chopraಗೆ ತರಬೇತಿ ನೀಡಿದ ಕನ್ನಡಿಗ Kashinath Naik ಯಾರು? | Oneindia Kannada

ಸಚಿನ್ ಪೈಲಟ್ ಅವರ ಬೇಡಿಕೆಗಳನ್ನು ಹಾಗಾದರೆ ಕಾಂಗ್ರೆಸ್ ಈಡೇರಿಸಲಿಲ್ಲವೇ, ಸಚಿನ್ ಪೈಲಟ್ ಕಾಂಗ್ರೆಸ್‌ಗೆ ಕೊಟ್ಟ ಅವಧಿ ಮುಗಿಯಿತೇ?, ಹಾಗಾದರೆ ಸಚಿನ್ ಪೈಲಟ್ ಬಿಜೆಪಿಗೆ ಸೇರುತ್ತಾರೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ.

English summary
BJP national vice president A P Abdullakutty on Sunday said Congress' Sachin Pilot is a good leader and he thinks that the former deputy chief minister of Rajasthan will join the BJP in the future
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X