ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರೌಲಿಯಲ್ಲಿ ಬಿಜೆಪಿ ನ್ಯಾಯ ಯಾತ್ರೆ: ಗೆಹ್ಲೋಟ್ ಸರ್ಕಾರ ವಿರುದ್ಧ ತೇಜಸ್ವಿ ಆರೋಪ

|
Google Oneindia Kannada News

ಕರೌಲಿ ಏಪ್ರಿಲ್ 13: ಕರೌಲಿ ಕಡೆಗೆ ಹೊರಟಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನ್ಯಾಯ ಯಾತ್ರೆಯನ್ನು ರಾಜಸ್ಥಾನ ಸರ್ಕಾರ ತಡೆದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಂಸದ ತೇಜಸ್ವಿ ಸೂರ್ಯ ಅವರು ಏಪ್ರಿಲ್ 2 ರ ಹಿಂಸಾಚಾರದ ಸ್ಥಳ ರಾಜಸ್ಥಾನದ ಕರೌಲಿ ಕಡೆಗೆ ಇಂದು 'ನ್ಯಾಯ ಯಾತ್ರೆ' ನಡೆಸಿದರು. ಬಿಜೆಪಿಯ 'ನ್ಯಾಯ ಯಾತ್ರೆ' ಕರೌಲಿ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ. ಯಾತ್ರೆಯ ನೇತೃತ್ವ ವಹಿಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ವೇಳೆ, "ಗೆಹ್ಲೋಟ್ ಸರ್ಕಾರ ನಮ್ಮನ್ನು ಅಕ್ರಮವಾಗಿ ಬಂಧಿಸಲು ಪ್ರಯತ್ನಿಸಿದೆ" ಎಂದು ಆರೋಪಿಸಿದ್ದಾರೆ.

ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗದಂತೆ ತಡೆಯಲಾಗುತ್ತಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ತೇಜಸ್ವಿ ಸೂರ್ಯ ಅವರು ನಾವು ಕರೌಲಿಯಿಂದ 40 ಕಿಮೀ ದೂರದಲ್ಲಿದ್ದೇವೆ. ಇಲ್ಲಿ ಯಾವುದೇ ಸೆಕ್ಷನ್ 144 ಜಾರಿಯಾಗಿಲ್ಲ. ಆದರೂ ನಮ್ಮನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಗೆಹ್ಲೋಟ್ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆರೋಪಗಳ ಸುರಿಮಳೆ ಸುರಿಸಿದ್ದಾರೆ.

ಕರೌಲಿ ಹಿಂಸಾಚಾರ: ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆಕರೌಲಿ ಹಿಂಸಾಚಾರ: ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ

ಯುಗಾದಿ ರ್‍ಯಾಲಿ ವೇಳೆ ಘಟನೆ

ಯುಗಾದಿ ರ್‍ಯಾಲಿ ವೇಳೆ ಘಟನೆ

ಹಿಂದೂ ಹೊಸ ವರ್ಷ ಯುಗಾದಿಯನ್ನು ಆಚರಿಸಲು ಕರೌಲಿಯಲ್ಲಿ ಮೋಟಾರ್ ಸೈಕಲ್ ರ್‍ಯಾಲಿ ಮಾಡುವ ವೇಳೆ ಮುಸ್ಲಿಂ ಗಲ್ಲಿಯಲ್ಲಿ ಈ ಹಿಂಸಾಚಾರ ಭುಗಿಲೆದ್ದಿದೆ. ನವ ಸಂವತ್ಸರ ಯುಗಾದಿಯಂದು (ಹಿಂದೂ ಹೊಸ ವರ್ಷ) ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಜರಂಗದಳ ಸೇರಿದಂತೆ ಬಲಪಂಥೀಯ ಸಂಘಟನೆಗಳು ರ್‍ಯಾಲಿಯನ್ನು ಕೈಗೊಂಡಿದ್ದವು. ಈ ವೇಳೆ ಧ್ವಜ ಮೆರವಣಿಗೆ ಕೂಡ ನಡೆಸಲಾಯಿತು. ಈ ಬೈಕ್ ರ್‍ಯಾಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಸಾಗುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ. ಇದು ಹಿಂಚಾಸಾರಕ್ಕೆ ತಿರುಗಿ ಉದ್ರಿಕ್ತರು ಶನಿವಾರ(ಏಪ್ರಿಲ್ 3) ಅಂಗಡಿ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಈ ವೇಳೆ 8 ಪೊಲೀಸರು ಸೇರಿದಂತೆ 11 ಮಂದಿ ಗಾಯಗೊಂಡಿದ್ದರು.

ಏಪ್ರಿಲ್ 12 ರವರೆಗೆ ಕರ್ಫ್ಯೂ

ಏಪ್ರಿಲ್ 12 ರವರೆಗೆ ಕರ್ಫ್ಯೂ

ಹಿಂಸಾಚಾರ ಪೀಡಿತ ರಾಜಸ್ಥಾನದ ಕರೌಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಗಣಿಸಿ ಏಪ್ರಿಲ್ 12ರವರೆಗೆ ಕರ್ಫ್ಯೂ ವಿಧಿಸಲಾಗಿತ್ತು. ಈ ವೇಳೆ ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಎರಡು ಗಂಟೆಗಳ ವಿಶ್ರಾಂತಿ ನೀಡಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ ಯಾವುದೇ ಹೆಚ್ಚಿನ ವಿಶ್ರಾಂತಿ ನೀಡಿರಲಿಲ್ಲ. ಕೇಂದ್ರ ಮತ್ತು ರಾಜಸ್ಥಾನದ ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳನ್ನು ತೆರೆಯಲಾಗಿತ್ತು. ಜೊತೆಗೆ ನೌಕರರು ಗುರುತಿನ ಚೀಟಿಗಳನ್ನು ತೋರಿಸಿದ ನಂತರ ತಮ್ಮ ಕಚೇರಿಗಳನ್ನು ತಲುಪಬಹುದಾಗಿತ್ತು. ಈ ವೇಳೆ ನಡೆದಿದ್ದ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸುರಕ್ಷಿತವಾಗಿ ತೆರಳು ಜಿಲ್ಲಾಡಳಿತ ವ್ಯವಸ್ಥೆ ಮಾಡಿತು. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ತೋರಿಸಿದ ನಂತರ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

13 ಆರೋಪಿಗಳ ವಿರುದ್ಧ ಪ್ರಕರಣ

13 ಆರೋಪಿಗಳ ವಿರುದ್ಧ ಪ್ರಕರಣ

ಕರ್ಫ್ಯೂ ಆದೇಶ ಉಲ್ಲಂಘಿಸಿದ್ದಕ್ಕಾಗಿ 13 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 33 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ 21 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋಮು ಹಿಂಸಾಚಾರದ ನಂತರ ಪೊಲೀಸರು 46 ಜನರನ್ನು ಬಂಧಿಸಿ ವಿಚಾರಣೆಗಾಗಿ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಳಾಗಿದೆ. ಬಂಧಿತ 13 ಜನರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಅವರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿತ್ತು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿನಂದನೆ

ಈ ಹಿಂಸಾಚಾರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಮನವೀಯತೆ ಮೆರದಿದ್ದಾರೆ. ಶನಿವಾರ ಕರೌಲಿಯಲ್ಲಿ ನಡೆದ ಗಲಭೆಯಲ್ಲಿ ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಮನೆಯೊಂದರಲ್ಲಿ ಮೂವರು ಮಹಿಳೆಯರು ಮತ್ತು ಒಂದು ಮಗು ಸಿಕ್ಕಿಬಿದ್ದಿದ್ದರು. ಅವರು ಬೆಂಕಿಯಿಂದ ಬದುಕುಳಿಯುವ ಭರವಸೆಯನ್ನು ಕಳೆದುಕೊಂಡಿದ್ದರು. ಆದರೆ ಶರ್ಮಾ ಅವರು ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು. ಬೆಂಕಿ ಹೊತ್ತಿಕೊಂಡ ಮನೆಯಿಂದ ಪುಟ್ಟ ಮಗು ಸೇರಿ ನಾಲ್ವರನ್ನು ರಕ್ಷಿಸಿದ ಕರೌಲಿ ಕೊಟ್ವಾಲಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ನೇತ್ರೇಶ್ ಶರ್ಮಾ (31) ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಭಿನಂದಿಸಿದ್ದಾರೆ. ಗೆಹ್ಲೋಟ್ ಅವರು ಶರ್ಮಾ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಹೆಡ್ ಕಾನ್‌ಸ್ಟೆಬಲ್ ಆಗಿ ಬಡ್ತಿ ನೀಡುವುದಾಗಿ ಘೋಷಿಸಿದ್ದಾರೆ.

Recommended Video

ಸಂತೋಷ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ರಾಜೀನಾಮೆ ಕೊಡ್ತಾರಾ? | Oneindia Kannada
ಮಾರ್ಗಮಧ್ಯೆ ತಡೆಹಿಡಿದ ಪೊಲೀಸರು

ಮಾರ್ಗಮಧ್ಯೆ ತಡೆಹಿಡಿದ ಪೊಲೀಸರು

ಕರೌಲಿಗೆ ಇಂದು ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಲು ತೆರಳಿದ್ದರು. ಸಂಸದ ತೇಜಸ್ವಿ ಸೂರ್ಯ ಆಯೋಜಿಸಿದ್ದ ನ್ಯಾಯ ಯಾತ್ರೆಯಲ್ಲಿ ನೂರಾರು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು. ಆದರೆ "ಗೆಹ್ಲೋಟ್ ಸರ್ಕಾರವು ನಮ್ಮನ್ನು ಅಕ್ರಮವಾಗಿ ಬಂಧಿಸಲು ಪ್ರಯತ್ನಿಸಿದೆ. ಮೆರವಣಿಗೆ ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕು ಎಂದು ಅವರು ಪ್ರತಿಭಟಿಸಿದ್ದೇವೆ" ಎಂದು ಹೇಳಿದರು.


"ಪಿಎಫ್‌ಐಗೆ ಮೆರವಣಿಗೆ ನಡೆಸಲು ಕಾಂಗ್ರೆಸ್ ಅನುಮತಿ ನೀಡುತ್ತದೆ. ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗೆ ಮೆರವಣಿಗೆ ಮಾಡಲು ಅವಕಾಶ ನೀಡಬಹುದು. ಆದರೆ ಯುವ ಮೋರ್ಚಾ ಶಾಂತಿಯುತವಾಗಿ ಮೆರವಣಿಗೆ ನಡೆಸಲು ಸಾಧ್ಯವಿಲ್ಲವೇ? ಈ ರಾಜ್ಯದಲ್ಲಿ ಏನಾಗುತ್ತಿದೆ?" ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದಾರೆ.

English summary
Karauli violence: MP Tejasvi Surya says Rajasthan's government had blocked the Bharatiya Janata Party's (BJP) nyay yatra headed towards Karauli. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X