ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಆಡಿಯೋ ಕ್ಲಿಪ್‌ ಪ್ರಕರಣ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

|
Google Oneindia Kannada News

ಜೈಪುರ, ಜುಲೈ 18: ರಾಜಸ್ಥಾನ ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆಗಲಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಶನಿವಾರ ಆಗ್ರಹಿಸಿದ್ದಾರೆ.

Recommended Video

Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿ ನಾಯಕರು ಉದ್ದೇಶಪೂರ್ವಕವಾಗಿ ಯತ್ನಿಸಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನದ ಕಾಂಗ್ರೆಸ್ ಬಂಡಾಯ ಶಾಸಕ ಭನ್ವರ್ ಲಾಲ್ ಶರ್ಮ ಮತ್ತು ಬಿಜೆಪಿ ನಾಯಕರ ನಡುವೆ ನಡೆದ ಸಂಭಾಷಣೆಯನ್ನು ಬಿಡುಗಡೆ ಮಾಡಿತ್ತು.

ಆಡಿಯೋ ಕ್ಲಿಪ್ ಕೇಸ್: ಕಾಂಗ್ರೆಸ್ ಆರೋಪ ಅಲ್ಲಗೆಳೆದ ಕೇಂದ್ರ ಸಚಿವಆಡಿಯೋ ಕ್ಲಿಪ್ ಕೇಸ್: ಕಾಂಗ್ರೆಸ್ ಆರೋಪ ಅಲ್ಲಗೆಳೆದ ಕೇಂದ್ರ ಸಚಿವ

ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ 'ರಾಜಸ್ಥಾನ ಸರ್ಕಾರವೂ ಫೋನ್ ಕದ್ದಾಲಿಕೆಯಲ್ಲಿ ತೊಡಗಿಕೊಂಡಿದೆಯೇ? ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕರು ಆಡಿಯೋ ಅಧಿಕೃತ ಎನ್ನುತ್ತಿದ್ದಾರೆ, ಮತ್ತೊಂದೆಡೆ ಎಫ್‌ಐಆರ್‌ನಲ್ಲಿ ಉದ್ದೇಶಪೂರ್ವಕ ಕತ್ಯ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಸರ್ಕಾರವೂ ಉತ್ತರಿಸಬೇಕಿದೆ' ಎಂದು ಪ್ರಶ್ನಿಸಿದ್ದಾರೆ.

'ರಾಜಸ್ಥಾನದಲ್ಲಿ ತುರ್ತು ಪರಿಸ್ಥಿತಿ ಇದೆಯೇ? ಎಲ್ಲಾ ರಾಜಕೀಯ ಪಕ್ಷಗಳನ್ನು ಈ ರೀತಿ ಗುರಿಯಾಗಿಸಲಾಗಿದೆಯೇ? ಫೋನ್ ಕದ್ದಾಲಿಕೆ ಮಾಡಲಾಗಿದೆಯೇ ಎಂದು ಸಿಬಿಐ ತನಿಖೆ ಆಗಲಿ ಎಂದು ನಾವು ಒತ್ತಾಯಿಸುತ್ತೇವೆ'' ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆಗ್ರಹಿಸಿದ್ದಾರೆ.

BJP Leader Sambit Patra demand to CBI inquiry on audio clip

ಶಾಸಕರ ಖರೀದಿ ಕುರಿತು ಸಂಭಾಷಣೆ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ (ಎಸ್‌ಒಜಿ) ಪೊಲೀಸರಿಗೆ ಕಾಂಗ್ರೆಸ್ ದೂರು ನೀಡಿದೆ. ಈ ದೂರಿನ ಅನ್ವಯ ಆರೋಪಿ ಸಂಜಯ್ ಜೈನ್‌ರನ್ನು ಶುಕ್ರವಾರ ಬಂಧಿಸಲಾಗಿತ್ತು.

English summary
BJP Leader Sambit Patra demand to CBI enquiry on purported audio clip about conspiracy to topple Rajasthan Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X