ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಹಯ್ಯಾ ಕುಟುಂಬಕ್ಕೆ 1 ಕೋಟಿ ಆರ್ಥಿಕ ನೆರವು ಘೋಷಿಸಿದ ಬಿಜೆಪಿ ನಾಯಕ

|
Google Oneindia Kannada News

ಜೈಪುರ, ಜುಲೈ 3: ರಾಜಸ್ಥಾನದ ಉದಯಪುರದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಟೈಲರ್ ಕನ್ಹಯ್ಯಾ ಲಾಲ್ ಅವರ ಕುಟುಂಬ ಸದಸ್ಯರನ್ನು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭೇಟಿಯಾಗಿ 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.

ಕನ್ಹಯ್ಯಾ ಲಾಲ್ ಅಂಗಡಿಯಲ್ಲಿ ಬರ್ಬರವಾಗಿ ಹತ್ಯೆಯಾದ ನಂತರ ಮಿಶ್ರಾ ನಿಧಿಸಂಗ್ರಹಣೆಯನ್ನು ಪ್ರಾರಂಭಿಸಿದ್ದರು.

ಉದಯಪುರ ಮಾದರಿಯಲ್ಲೇ ಅಮರಾವತಿಯಲ್ಲೂ ಹತ್ಯೆ: ತನಿಖೆಗೆ ಆದೇಶಿದ ಗೃಹ ಇಲಾಖೆಉದಯಪುರ ಮಾದರಿಯಲ್ಲೇ ಅಮರಾವತಿಯಲ್ಲೂ ಹತ್ಯೆ: ತನಿಖೆಗೆ ಆದೇಶಿದ ಗೃಹ ಇಲಾಖೆ

ಕನ್ಹಯ್ಯಾ ಲಾಲ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮತ್ತು ಅವರ ನಿವಾಸದಲ್ಲಿ ಅವರ ಕುಟುಂಬವನ್ನು ಭೇಟಿಯಾದ ನಂತರ ಮಿಶ್ರಾ ಸುದ್ದಿಗಾರರೊಂದಿಗೆ ಮಾತನಾಡಿ, "ನಿಧಿ ಸಂಗ್ರಹದ ಮೂಲಕ 1 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದೇನೆ ಆದರೆ ಈಗಾಗಲೇ 1 ಕೋಟಿ 70 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ ಮತ್ತು ಜನರು ಇನ್ನೂ ಕೊಡುಗೆ ನೀಡುತ್ತಿದ್ದಾರೆ" ಎಂದು ಹೇಳಿದ್ದಾರೆ.

BJP Leader Kapil Mishra Announced Rs 1 Financial Assistance For Kanhaiya Lal Family

"ಕನ್ಹಯ್ಯಾ ಲಾಲ್ ಕುಟುಂಬಕ್ಕೆ 1 ಕೋಟಿ ರೂ.ಗಳನ್ನು ವರ್ಗಾಯಿಸಲಾಗುವುದು. ಇದನ್ನು ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮರುಪಾವತಿ ಮತ್ತು ಅವರ ಪುತ್ರರ ವ್ಯಾಸಂಗಕ್ಕಾಗಿ ಬಳಸಲಾಗುತ್ತದೆ. ಕನ್ಹಯ್ಯಾ ಲಾಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರ್‌ಗೆ 25 ಲಕ್ಷ ರೂಪಾಯಿ ನೀಡಲಾಗುವುದು" ಎಂದು ತಿಳಿಸಿದ್ದಾರೆ.

ಉದಯ್‌ಪುರ: ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಕನ್ಹಯ್ಯಾ ಹಂತಕರು ಉದಯ್‌ಪುರ: ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಕನ್ಹಯ್ಯಾ ಹಂತಕರು

ಉಮೇಶ್‌ ಪ್ರಹ್ಲಾದರಾವ್‌ಗೆ 30 ಲಕ್ಷ ರು ನೆರವು; ಬುಧವಾರ ರಾಜ್‌ಸಮಂದ್ ಜಿಲ್ಲೆಯಲ್ಲಿ ಧಾರ್ಮಿಕ ಸ್ಥಳದತ್ತ ತೆರಳುತ್ತಿದ್ದ ಪ್ರಕ್ಷುಬ್ಧ ಗುಂಪನ್ನು ಪೊಲೀಸರು ತಡೆಯಲು ಯತ್ನಿಸಿದಾಗ ಗುಂಪೊಂದು ನಡೆಸಿದ ಕಲ್ಲುತೂರಾಟದಲ್ಲಿ ಗಾಯಗೊಂಡಿದ್ದ ಕಾನ್‌ಸ್ಟೇಬಲ್ ಸಂದೀಪ್‌ಗೆ 5 ಲಕ್ಷ ರುಪಾಯಿ ನೀಡುತ್ತದೆ.

BJP Leader Kapil Mishra Announced Rs 1 Financial Assistance For Kanhaiya Lal Family

ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್‌ಗೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ ಎಂದು ಹೇಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡುವ ಮೊದಲು ಇಬ್ಬರು ವ್ಯಕ್ತಿಗಳು ಕನ್ಹಯ್ಯಾ ಲಾಲ್‌ನನ್ನು ಆತನ ಅಂಗಡಿಯಲ್ಲಿ ಕೊಲೆ ಮಾಡಿದ್ದರು.

ಮಹಾರಾಷ್ಟ್ರದ ಅಮರಾವತಿಯಲ್ಲಿ ಹತ್ಯೆಗೀಡಾದ ಉಮೇಶ್ ಪ್ರಹ್ಲಾದರಾವ್ ಕೋಲ್ಹೆ ಅವರ ಕುಟುಂಬಕ್ಕೂ 30 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಕಪಿಲ್ ಮಿಶ್ರಾ ಹೇಳಿದ್ದಾರೆ.

ಪರಿಸ್ಥಿತಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ಉದಯಪುರದಲ್ಲಿ ಭಾನುವಾರ 10 ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಯಿತು. ಆದರೆ, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.

ಮಂಗಳವಾರ ಟೈಲರ್ ಕನ್ಹಯ್ಯಾ ಲಾಳ್ ಹತ್ಯೆ ಮತ್ತು ಹಿಂಸಾಚಾರದ ಘಟನೆಗಳ ನಂತರ ಉದಯಪುರದ ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

''ನಗರದಲ್ಲಿ ಪರಿಸ್ಥಿತಿ ಸಹಜವಾಗುತ್ತಿದೆ. ಹೀಗಾಗಿ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲು ನಿರ್ಧರಿಸಲಾಗಿದೆ" ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Recommended Video

Jasprit Bumrah ಮಾಡಿದ ವಿಶ್ವ ದಾಖಲೆಗೆ Sachin Tendulkar ಶಾಕ್!! | *Cricket | OneIndia Kannada

English summary
After paying floral tributes to Kanhaiya Lal and meeting his family at his residence in Rajasthan’s Udaipur, BJP Leader Kapil Mishra announced financial assistance of Rs 1 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X