• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲೆಯ ಸಾಕ್ಷ್ಯವನ್ನು ನಾಶಪಡಿಸಿದ ಮಂಗ- ಕೋತಿ ಮೇಲೆ ಖಾಕಿ ಆರೋಪ

|
Google Oneindia Kannada News

ಜೈಪುರ ಮೇ 05: ಸಾಮಾನ್ಯವಾಗಿ ಆರೋಪಿಗಳ ಸಂಬಂಧಿಕರು, ಸುಪಾರಿ ಕೊಟ್ಟವರು ಸಾಕ್ಷ್ಯಗಳನ್ನು ನಾಶ ಮಾಡುವುದನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಆದರೆ, ಯಾವುದೇ ಪ್ರಾಣಿಯು ಕೊಲೆಯ ಸಾಕ್ಷ್ಯವನ್ನು ನಾಶಪಡಿಸಬಹುದೇ? ಇದನ್ನು ಕೇಳಿ ನೀವು ಶಾಕ್ ಆಗಿರಬಹುದು. ಆದರೆ ಇದು ಸತ್ಯ. ರಾಜಸ್ಥಾನದಲ್ಲಿ ಕೋತಿಯೊಂದು ಆರೋಪಿಯ ಸಾಕ್ಷ್ಯಗಳನ್ನು ನಾಶ ಮಾಡಿದೆ. ಕಠಿಣ ಪರಿಶ್ರಮದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದರೆ ಕೋತಿಯೊಂದು ಪೊಲೀಸರಿಗೆ ಚಳ್ಳೇಹಣ್ಣು ತಿನಿಸಿದೆ.

ಅಂದಹಾಗೆ ಅಪರಾಧ ಎಸಗುವ ವ್ಯಕ್ತಿ ಅಥವಾ ಸಾಕ್ಷ್ಯ ನಾಶಪಡಿಸುವವನೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯೇ. ಆದರೆ ಪ್ರಾಣಿಯು ಮಾನವ ಅಪರಾಧದ ಸಾಕ್ಷ್ಯವನ್ನು ನಾಶಪಡಿಸಿದರೆ ಏನು ಮಾಡುವುದು? ಇಂತಹದೊಂದು ಪಜೀತಿಗೆ ರಾಜಸ್ಥಾನದ ಪೊಲೀಸರು ಸಿಲುಕಿದ್ದಾರೆ. ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಈ ರೀತಿಯ ಘಟನೆ ನಡೆದಿದ್ದು, ಕೊಲೆ ಪ್ರಕರಣದಲ್ಲಿ ಸಂಗ್ರಹಿಸಲಾದ ಸಾಕ್ಷ್ಯಗಳ ಬಗ್ಗೆ ಕೋತಿಯೊಂದು ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ. ಮಂಗವೊಂದು ಕೊಲೆಯಾದ ಆರೋಪಿ ಪ್ರಕರಣದಲ್ಲಿ ಸಂಗ್ರಹಿಸಲಾದ ಆಯುಧ (ರಕ್ತದ ಕಲೆ ಇರುವ ಚಾಕು) ಸೇರಿದಂತೆ ಹಲವು ಪ್ರಮುಖ ಸಾಕ್ಷ್ಯಗಳಿರುವ ಕಿಟ್‌ನ್ನು ಹೊತ್ತೋಯ್ದಿದೆ.

ಮಹಾರಾಷ್ಟ್ರ: 250 ನಾಯಿಗಳನ್ನು ಕೊಂದು ಸೇಡು ತೀರಿಸಿಕೊಂಡ ಕೋತಿಗಳುಮಹಾರಾಷ್ಟ್ರ: 250 ನಾಯಿಗಳನ್ನು ಕೊಂದು ಸೇಡು ತೀರಿಸಿಕೊಂಡ ಕೋತಿಗಳು

ಪೊಲೀಸರಿಂದ ನ್ಯಾಯಾಲಯದಲ್ಲಿ ಆಶ್ಚರ್ಯಕರ ಹೇಳಿಕೆ

ಪೊಲೀಸರಿಂದ ನ್ಯಾಯಾಲಯದಲ್ಲಿ ಆಶ್ಚರ್ಯಕರ ಹೇಳಿಕೆ

ರಾಜಸ್ಥಾನ ಪೊಲೀಸರು ಜೈಪುರದ ಕೆಳ ನ್ಯಾಯಾಲಯದಲ್ಲಿ ಈ ಬಗ್ಗೆ ತಿಳಿಸಿದಾಗ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ರಾಜಸ್ಥಾನ ಪೊಲೀಸರ ಪ್ರಕಾರ, ಸೆಪ್ಟೆಂಬರ್ 2016 ರಲ್ಲಿ ಶಶಿಕಾಂತ್ ಶರ್ಮಾ ಎಂಬ ವ್ಯಕ್ತಿಯನ್ನು ಚಂದ್ವಾಜಿ ಎಂಬ ಆರೋಪಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊಲೆ ಮಾಡಿದ್ದನು. ಶವ ಪತ್ತೆಯಾದ ನಂತರ, ಮೃತರ ಸಂಬಂಧಿಕರು ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಜೈಪುರ-ದೆಹಲಿ ಹೆದ್ದಾರಿಯನ್ನು ತಡೆದರು. ಘಟನೆ ನಡೆದ ಐದು ದಿನಗಳ ನಂತರ ಪೊಲೀಸರು ಚಂದವಾಜಿ ನಿವಾಸಿಗಳಾದ ರಾಹುಲ್ ಕಂಡೇರಾ ಮತ್ತು ಮೋಹನ್ ಲಾಲ್ ಕಂಡೇರಾ ಅವರನ್ನು ಬಂಧಿಸಿದ್ದಾರೆ.

ಕೋತಿ ಮೇಲೆ ಪೊಲೀಸ್ ಆರೋಪ

ಕೋತಿ ಮೇಲೆ ಪೊಲೀಸ್ ಆರೋಪ

ಕೊಲೆ ಆರೋಪದಡಿ ಇಬ್ಬರನ್ನೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಲಯಕ್ಕೆ ಸಾಕ್ಷ್ಯಗಳನ್ನು ಹಾಜರುಪಡಿಸುವ ಸಮಯ ಬಂದಾಗ, ಕೊಲೆಯ ಸಾಕ್ಷ್ಯವನ್ನು ಕೋತಿ ಕದ್ದಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಸಾಕ್ಷಿಯಾಗಿರುವ ಚಾಕುವನ್ನು ಸಹ ಕೋತಿ ತೆಗೆದುಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

15 ಪ್ರಮುಖ ಸಾಕ್ಷ್ಯಗಳನ್ನು ಕದ್ದ ಕೋತಿ

15 ಪ್ರಮುಖ ಸಾಕ್ಷ್ಯಗಳನ್ನು ಕದ್ದ ಕೋತಿ

ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಬ್ಯಾಗ್‌ನಲ್ಲಿ ಇರಿಸಲಾಗಿದ್ದು, ಅದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ ಚಾಕು ಹೊರತುಪಡಿಸಿ 15 ಪ್ರಮುಖ ಸಾಕ್ಷ್ಯಗಳನ್ನು ಇಡಲಾಗಿತ್ತು. ಗೋದಾಮಿನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ಸಾಕ್ಷ್ಯ ತುಂಬಿದ ಚೀಲವನ್ನು ಮರದ ಕೆಳಗೆ ಇಡಲಾಗಿತ್ತು. ನಂತರ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಪೊಲೀಸರನ್ನು ಕೇಳಿದಾಗ, ಕೋತಿಯು ಚೀಲವನ್ನು ಕದ್ದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರು ಈ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಲಿಖಿತವಾಗಿ ಸಲ್ಲಿಸಿದ್ದಾರೆ.

ಸಾಕ್ಷ್ಯವನ್ನು ಕದ್ದ ಕೋತಿಗೆ ಶಿಕ್ಷೆ ಇದಿಯಾ?

ಸಾಕ್ಷ್ಯವನ್ನು ಕದ್ದ ಕೋತಿಗೆ ಶಿಕ್ಷೆ ಇದಿಯಾ?

ಅಪರಾಧ ಎಸಗುವ ವ್ಯಕ್ತಿ ಅಥವಾ ಸಾಕ್ಷ್ಯ ನಾಶಪಡಿಸುವವನೂ ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯೇ. ಆದರೆ ಪ್ರಾಣಿಯು ಮಾನವ ಅಪರಾಧದ ಸಾಕ್ಷ್ಯವನ್ನು ನಾಶಪಡಿಸಿದರೆ ಅದಕ್ಕೆ ಶಿಕ್ಷೆ ಅಥವಾ ಅದರ ವಿರುದ್ಧ ಕ್ರಮವೇನು ಎನ್ನುವು ಯಾರಿಗೂ ತಿಳಿದಿಲ್ಲ. ಇದನ್ನು ಪೊಲೀಸರ ನಿರ್ಲಕ್ಷ್ಯ ಎಂದು ಪರಿಗಣಿಸಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಕೋತಿ ಪೊಲೀಸರನ್ನು ಪಜೀತಿಗೆ ಸಿಲುಕಿಸಿದ್ದಂತು ಸತ್ಯ.

English summary
A bizarre incident in which a monkey destroyed evidence of murder has taken place in Jaipur, Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X