ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರ ಉರುಳುವ ಭಯ: ನೇರ ಪ್ರಧಾನಿ ಮೋದಿಗೆ ಪತ್ರ ಬರೆದ ಅಶೋಕ್ ಗೆಹ್ಲೋಟ್

|
Google Oneindia Kannada News

ಜೈಪುರ, ಜುಲೈ 22: ಸಚಿನ್ ಪೈಲಟ್ ಮತ್ತು ಅವರ ಬಣದ ಬಂಡಾಯದಿಂದ ತಬ್ಬಿಬ್ಬಾಗಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನೇರ ಪ್ರಧಾನಿ ಮೋದಿಗೆ ಪತ್ರವನ್ನು ಬರೆದಿದ್ದಾರೆ.

Recommended Video

ಟ್ಯಾಂಕರ್ ನಲ್ಲಿ ಇದ್ದ ಹಾಲನ್ನು ರಸ್ತೆಗೆ ಚೆಲ್ಲಿದ ಪ್ರತಿಭಟನಾಕಾರರು | Oneindia Kannada

"ನಮ್ಮ ಪಕ್ಷದ ಶಾಸಕರಿಗೆ ಹಣದ ಆಮಿಷವೊಡ್ದಿ ಸರಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ"ಎಂದು ಪತ್ರದಲ್ಲಿ ದೂರಿರುವ ಗೆಹ್ಲೋಟ್, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮತ್ತು ಇತರ ಬಿಜೆಪಿ ಮುಖಂಡರು 'ಡೀಲ್ ಕುದುರಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

35 ಕೋಟಿ ಆಫರ್: ಕಾಂಗ್ರೆಸ್ ಶಾಸಕನಿಗೆ ನೋಟಿಸ್ ನೀಡಿದ ಸಚಿನ್ ಪೈಲೆಟ್35 ಕೋಟಿ ಆಫರ್: ಕಾಂಗ್ರೆಸ್ ಶಾಸಕನಿಗೆ ನೋಟಿಸ್ ನೀಡಿದ ಸಚಿನ್ ಪೈಲೆಟ್

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾಗಿರುವ ಸರಕಾರವನ್ನು ಉರುಳಿಸುವ ಪ್ರಯತ್ನ ನಡೆಯುತ್ತದೆ. ಇದು ಜನಾದೇಶಕ್ಕೆ ಮಾಡುತ್ತಿರುವ ಬಹುದೊಡ್ಡ ಅವಮಾನ"ಎಂದು ಗೆಹ್ಲೋಟ್ ದೂರಿದ್ದಾರೆ.

Ashok Gehlot Writes To PM, Alleges Attempt To Topple Rajasthan Government

"ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಇದೇ ರೀತಿ ಪ್ರಜಾಪ್ರಭುತ್ವ ವಿರೋಧಿ ನಡೆಯಿಂದ ಸರಕಾರ ಪತನಗೊಂಡಿತು. ರಾಜಸ್ತಾನದಲ್ಲೂ ಅದೇ ಪ್ರಯತ್ನ ನಡೆಯುತ್ತಿದೆ"ಎಂದು ಅಶೋಕ್ ಗೆಹ್ಲೋಟ್, ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಜ್ಯೋತಿರಾದಿತ್ಯ ಸಿಂಧಿಯಾ ಹೇಗೆ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರಕಾರವನ್ನು ಉರುಳಿಸಿದರೋ, ಅದೇ ರೀತಿ ಸಚಿನ್ ಪೈಲಟ್, ರಾಜಸ್ಥಾನದಲ್ಲಿ ಆ ಕೆಲಸಕ್ಕೆ ಮುಂದಾಗಿದ್ದಾರೆ"ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರ ಅನರ್ಹತೆಯ ವಿಚಾರದ ಬಗ್ಗೆ ವಿಚಾರಣೆ ಪೂರ್ಣಗೊಂಡಿದ್ದು, ರಾಜಸ್ಥಾನ ಹೈಕೋರ್ಟ್ ಪ್ರಕರಣದ ತೀರ್ಪನ್ನು ಶುಕ್ರವಾರಕ್ಕೆ (ಜುಲೈ 24) ಕಾಯ್ದಿರಿಸಿದೆ.

English summary
Rajasthan CM Ashok Gehlot Writes To PM Modi, Alleges Attempt To Topple Rajasthan Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X