• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ಬಿಕ್ಕಟ್ಟು; ಕಾಂಗ್ರೆಸ್ ಶಾಸಕರು ಇರುವ ಹೋಟೆಲ್ ಬದಲು

|

ಜೈಪುರ, ಜುಲೈ 31 : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬೆಂಬಲಿಗ ಶಾಸಕರನ್ನು ಬೇರೆ ಹೋಟೆಲ್‌ಗೆ ಸ್ಥಳಾಂತರ ಮಾಡಲಿದ್ದಾರೆ. 100ಕ್ಕೂ ಅಧಿಕ ಶಾಸಕರು ಜೈಪುರದ ಬಳಿಯ ಹೋಟೆಲ್‌ನಲ್ಲಿ ಪ್ರಸ್ತುತ ವಾಸ್ತವ್ಯ ಹೂಡಿದ್ದಾರೆ.

ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಂದು ಆರಂಭವಾಗಲಿದೆ. ಅಲ್ಲಿಯ ತನಕ ಎಲ್ಲಾ ಶಾಸಕರು ಹೋಟೆಲ್‌ನಲ್ಲಿಯೇ ಇರಲಿದ್ದಾರೆ. ಕುದುರೆ ವ್ಯಾಪಾರದ ಭೀತಿ ಹಿನ್ನಲೆಯಲ್ಲಿ ಶಾಸಕರನ್ನು ಬೇರೆ ಹೋಟೆಲ್‌ಗೆ ಕರೆದುಕೊಂಡು ಹೋಗಲಾಗುತ್ತದೆ.

ವಿಧಾನಸಭೆ ಅಧಿವೇಶನ ನಡೆಸಲು ರಾಜಸ್ಥಾನ ರಾಜ್ಯಪಾಲರ ಒಪ್ಪಿಗೆ

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವಿನ ಅಸಮಾಧಾನ ಭುಗಿಲೆದ್ದ ಬಳಿ ಎಲ್ಲಾ ಶಾಸಕರು ಹೋಟೆಲ್‌ನಲ್ಲಿಯೇ ಇದ್ದಾರೆ. ಸಚಿನ್ ಪೈಲೆಟ್ ತಮ್ಮ ಬಣದ ಶಾಸಕರ ಜೊತೆ ಹರ್ಯಾಣದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ!

ರಾಜ್ಯಪಾಲರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ವಿಶ್ವಾಸಮತ ಸಾಬೀತು ಮಾಡುವಂತೆ ಸೂಚನೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ. ಅಧಿವೇಶನ ಆರಂಭವಾಗುವ ತನಕ ಶಾಸಕರು ಹೋಟೆಲ್‌ನಲ್ಲಿಯೇ ಇರಲಿದ್ದಾರೆ.

ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ

ಸಿಎಲ್‌ಪಿ ಸಭೆಯ ಬಳಿಕ ತೀರ್ಮಾನ

ಸಿಎಲ್‌ಪಿ ಸಭೆಯ ಬಳಿಕ ತೀರ್ಮಾನ

ಹೋಟೆಲ್‌ನಲ್ಲಿ ಇರುವ ಶಾಸಕರ ಜೊತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಿಗೆ ಆಗಸ್ಟ್‌ 14ರ ತನಕ ಹೋಟೆಲ್‌ನಲ್ಲಿಯೇ ಇರಲು ಸೂಚನೆ ನೀಡಲಾಗಿದೆ. ಇಂದು ಎಲ್ಲರನ್ನೂ ಬೇರೆ ಹೋಟೆಲ್‌ಗೆ ಕರೆದುಕೊಂಡು ಹೋಗಲಾಗುತ್ತದೆ.

ಶಾಸಕರನ್ನು ಸೆಳೆಯಲು ಪ್ರಯತ್ನ

ಶಾಸಕರನ್ನು ಸೆಳೆಯಲು ಪ್ರಯತ್ನ

"ಆಗಸ್ಟ್ 14ರಿಂದ ವಿಧಾನಸಭೆ ಅಧಿವೇಶನ ಎಂದು ಘೋಷಣೆ ಮಾಡಿದ ಬಳಿಕ ಬಿಜೆಪಿ ಮತ್ತು ಸಚಿನ್ ಪೈಲೆಟ್ ಬಣದವರು ಶಾಸಕರನ್ನು ಸೆಳೆಯಲು ಪ್ರಯತ್ನ ಹೆಚ್ಚಿಸಿದ್ದಾರೆ" ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ವಿಶ್ವಾಸಮತಯಾಚನೆ

ವಿಶ್ವಾಸಮತಯಾಚನೆ

ಅಶೋಕ್ ಗೆಹ್ಲೋಟ್ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಮಾಡಲು ಮುಂದಾಗಿದ್ದಾರೆ. ಅಶೋಕ್ ಗೆಹ್ಲೋಟ್ ಬಣದಲ್ಲಿ 102 ಶಾಸಕರು ಇದ್ದಾರೆ ಎಂದು ತಿಳಿದುಬಂದಿದೆ. ಸಚಿನ್ ಪೈಲೆಟ್ ಜೊತೆ 21 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಬಿಎಸ್‌ಪಿ ಶಾಸಕರ ಕಥೆ ಏನು?

ಬಿಎಸ್‌ಪಿ ಶಾಸಕರ ಕಥೆ ಏನು?

6 ಬಿಎಸ್‌ಪಿ ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಂಡಿರುವುದನ್ನು ಬಿಜೆಪಿ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಹೈಕೋರ್ಟ್ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 11ಕ್ಕೆ ವಿಚಾರಣೆ ಮತ್ತೆ ನಡೆಯಲಿದೆ. ಶಾಸಕರು ಗೆಹ್ಲೋಟ್ ಸರ್ಕಾರ ಬೆಂಬಲಿಸಲಿದ್ದಾರೆಯೇ? ಕಾದು ನೋಡಬೇಕು.

English summary
More than 100 Rajasthan Congress MLAs who have been staying at a hotel near Jaipur are likely to be moved to another city by a special flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X