• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವಾಸಮತ ಗೆದ್ದ ಅಶೋಕ್ ಗೆಹ್ಲೋಟ್ ಸರ್ಕಾರ; ಬಿಜೆಪಿಗೆ ಮುಖಭಂಗ

|

ಜೈಪುರ, ಆಗಸ್ಟ್ 14 : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ವಿಶ್ವಾಸಮತ ಗೆದ್ದಿದೆ. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಿತ್ತು.

ಶುಕ್ರವಾರ ರಾಜಸ್ಥಾನ ವಿಧಾನಸಭೆ ಕಲಾಪ ಆರಂಭವಾಗಿತ್ತು. ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಮೊದಲ ದಿನದ ಅಧಿವೇಶನದಲ್ಲಿಯೇ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಿತ್ತು. ಆದರೆ, ಸರ್ಕಾರ ವಿಶ್ವಾಸಮತ ಗೆದ್ದಿದೆ.

ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದ ಬಿಜೆಪಿ!

ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್, "ಸರ್ಕಾರ ಬಹುಮತವನ್ನು ಗೆದ್ದಿದೆ. ಸರ್ಕಾರ ಬೀಳಿಸಲು ಪ್ರತಿಪಕ್ಷ ಮಾಡಿದ ಅನೇಕ ಪ್ರಯತ್ನಗಳು ವಿಫಲವಾಗಿವೆ. ಜನರೂ ಸಹ ಸರ್ಕಾರದ ಪರವಾಗಿದ್ದಾರೆ" ಎಂದರು.

ರಾಜಸ್ಥಾನದಲ್ಲಿ ಮತ್ತೆ 'ಕೈ' ಜೋಡಿಸಿದ ಗೆಹ್ಲೋಟ್ ಮತ್ತು ಪೈಲಟ್!

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಬಂಡಾಯದ ಬಾವುಟ ಹಾರಿಸಿದ್ದರು. 18 ಶಾಸಕರು ಸಚಿನ್ ಪೈಲೆಟ್ ಜೊತೆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದ ಕಾರಣ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು.

ಜೈಪುರಕ್ಕೆ ಸಚಿನ್ ಪೈಲೆಟ್ ವಾಪಸ್; ಹೇಳಿದ್ದು ಒಂದೇ ಮಾತು!

125 ಶಾಸಕರ ಬೆಂಬಲ

125 ಶಾಸಕರ ಬೆಂಬಲ

ರಾಜಸ್ಥಾನ ವಿಧಾನಸಭೆಯ ಬಲ 200. ಸರ್ಕಾರ ಬಹುಮತ ಸಾಬೀತು ಮಾಡಲು ಅಗತ್ಯವಿದ್ದ ಮ್ಯಾಜಿಕ್ ನಂಬರ್ 101. ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ 125 ಶಾಸಕರು ಬೆಂಬಲ ಸೂಚಿಸಿದ್ದಾರೆ. ಅವಿಶ್ವಾಸ ನಿರ್ಣಮ ಮಂಡನೆ ಮಾಡಿದ್ದ ಪ್ರತಿಪಕ್ಷ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.

ಪ್ರತಿಪಕ್ಷ ಬಿಜೆಪಿಯಲ್ಲಿ 72 ಶಾಸಕರು

ಪ್ರತಿಪಕ್ಷ ಬಿಜೆಪಿಯಲ್ಲಿ 72 ಶಾಸಕರು

ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ 72 ಶಾಸಕರ ಬಲ ಹೊಂದಿದೆ. ಮೈತ್ರಿಕೂಟದ ಇತರ ಮೂವರು ಶಾಸಕರು ಬಿಜೆಪಿ ಜೊತೆ ಇದ್ದರು. ಗುರುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.

ಬಿಎಸ್‌ಪಿಯ 6 ಶಾಸಕರ ಬಲ

ಬಿಎಸ್‌ಪಿಯ 6 ಶಾಸಕರ ಬಲ

ರಾಜಸ್ಥಾನದಲ್ಲಿ 6 ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿದ್ದಾರೆ. ಇದನ್ನು ಬಿಜೆಪಿ ರಾಜಸ್ಥಾನ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಯಾವುದೇ ಮಧ್ಯಂತರ ಆದೇಶ ಇಲ್ಲದ ಕಾರಣ ಬಿಎಸ್‌ಪಿ ಶಾಸಕರು ಆಡಳಿತ ಪಕ್ಷದ ಸಾಲಿನಲ್ಲಿಯೇ ಕುಳಿತು ಸರ್ಕಾರದ ಪರವಾಗಿ ಮತದಾನ ಮಾಡಿದರು.

ಸಚಿನ್ ಪೈಲೆಟ್ ಬಣದ ಬೆಂಬಲ

ಸಚಿನ್ ಪೈಲೆಟ್ ಬಣದ ಬೆಂಬಲ

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ಭಿನ್ನಮತ ಶಮನವಾಗಿದೆ. ಸಚಿನ್ ಪೈಲೆಟ್ ಮತ್ತು ಅವರ ಬಣದ 18 ಶಾಸಕರು ಸರ್ಕಾರದ ಪರವಾಗಿ ಇಂದು ಮತದಾನ ಮಾಡಿದರು. ಸಚಿನ್ ಪೈಲೆಟ್ ಬಣದ ಶಾಸಕರ ಬೆಂಬಲ ಇಲ್ಲದಿದ್ದರೂ ಸರ್ಕಾರಕ್ಕೆ 104 ಶಾಸಕರ ಬಲವಿತ್ತು ಎಂದು ಕಾಂಗ್ರೆಸ್ ಹಿಂದೆಯೇ ಹೇಳಿತ್ತು.

English summary
Ashok Gehlot lead Congress government in Rajasthan wins vote of confidence in the state assembly. BJP moved no confidence motion against Congress government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X