ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸ ಗುಡಿಸುತ್ತಿದ್ದ ಮಹಿಳೆ ಈಗ ರಾಜಸ್ಥಾನದ ಜಿಲ್ಲಾಧಿಕಾರಿ!

|
Google Oneindia Kannada News

ಜೈಪುರ, ಜುಲೈ 17: ಮನಸ್ಸಿದ್ದರೆ ಮಾರ್ಗ, ಜಗತ್ತಿನಲ್ಲಿ ಅಸಾಧ್ಯವಾದ್ದು ಏನೂ ಇಲ್ಲ ಎಂದು ತೋರಿಸಿಕೊಟ್ಟವರು ಆಶಾ.

ಜೋಧಪುರ ಮಹಾನಗರ ಪಾಲಿಕೆಯ ಪೌರಕಾರ್ಮಿಕೆಯಾಗಿದ್ದಾಕೆ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿದ್ದು, ಶೀಘ್ರದಲ್ಲೇ ಅವರು ಜಿಲ್ಲಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ.

ಒಳ್ಳೆ ಸುದ್ದಿ: ರಾಜಸ್ಥಾನ ಸರ್ಕಾರದ ಅಧಿಕಾರಿಗಳಾದ ಐವರು ಸಹೋದರಿಯರುಒಳ್ಳೆ ಸುದ್ದಿ: ರಾಜಸ್ಥಾನ ಸರ್ಕಾರದ ಅಧಿಕಾರಿಗಳಾದ ಐವರು ಸಹೋದರಿಯರು

ಆಶಾ ಕಂದ್ರ ಸಾಧನೆ ಮಾಡಿದ ಮಹಿಳೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಇವರು ಜೋಧಪುರ ಮಹಾನಗರ ಪಾಲಿಕೆ ಅಡಿಯಲ್ಲಿ ಬೀದಿ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದರು.

Asha Kandra, A Sweeper From Rajasthan Is Now A Deputy Collector; Here Is Her Inspiring Story In kannada

ಇದೀಗ ಪ್ರತಿಷ್ಟಿತ ರಾಜ್ಯ ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದಾರೆ. ಎಂಟು ವರ್ಷಗಳ ಹಿಂದೆ ತನ್ನ ಗಂಡನಿಂದ ದೂರವಾದ ಆಶಾ, ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯ ಜೊತೆಯಲ್ಲೇ ಪದವಿ ಮುಗಿಸಿದರು. ನಂತರ ಎರಡು ವರ್ಷಗಳ ಹಿಂದೆ ರಾಜ್ಯ ನಾಗರೀಕ ಸೇವಾ ಪರೀಕ್ಷೆ ಎದುರಿಸಿದರು.

ಆದರೆ ಫಲಿತಾಂಶ ವಿಳಂಬವಾಯಿತು. ಆಗ ಆಶಾ ಪರೀಕ್ಷೆ ಬರೆದ ನಂತರ ಜೋಧಪುರ ಮುನ್ಸಿಪಾಲ್ ಕಾರ್ಪೋರೇಶನ್‍ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿದರು. ಏಕೆಂದರೆ ಇಬ್ಬರು ಮಕ್ಕಳ ಆರೈಕೆಯ ಜವಾಬ್ದಾರಿ ಆಕೆಯ ಮೇಲಿತ್ತು.

ನನ್ನ ಸುತ್ತಮುತ್ತಲಿನ ಜನರ ಅವಮಾನದ ಮಾತುಗಳೇ ನನಗೆ ಸ್ಪೂರ್ತಿ. ಜಾತೀಯತೆ ಇಲ್ಲ ಎನ್ನುತ್ತಾರೆ. ಆದರೆ ಅದನ್ನು ಅನುಭವಿಸಿದವರಿಗಷ್ಟೆ ಗೊತ್ತಾಗುತ್ತದೆ ಎಂದು ಹೇಳುವ ಆಶಾ, ಜನರ ಟೀಕೆ, ವ್ಯಂಗ್ಯಗಳೇ ನಾನು ಮೇಲೇರಲು ಕಾರಣವಾಯಿತು. ಸಮಾಜಕ್ಕೆ ಉತ್ತಮ ಕೆಲಸ ಮಾಡಬೇಕೆಂಬುದೇ ನನ್ನ ಗುರಿ ಎಂದು ಹೇಳಿದರು.

ಇತ್ತೀಚೆಗೆ ಪರೀಕ್ಷೆಯ ಫಲಿತಾಂಶವೂ ಹೊರಬಿತ್ತು, ಆಶಾ ಅವರ ಕಷ್ಟದ ದಿನಗಳು ಮುಗಿದು, ಖುಷಿಯ ಬದುಕು ಆರಂಭವಾಗಿದೆ.

ತಾನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ವಿಚಾರ ತಿಳಿದಾಗ ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆಶಾ ಅವರನ್ನು ರಾಜ್ಯದಲ್ಲಿ ಉಪಸಂಗ್ರಹಕಾರ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಮನಸ್ಸಲ್ಲಿ ಸಾಧಿಸುವ ಛಲ, ಗುರಿ, ದೃಢ ನಿಶ್ಚಯವಿದ್ದರೆ, ಸೋಲು ಹತ್ತಿರವೂ ಸುಳಿಯುವುದಿಲ್ಲ. ನಾನು ಕಸ ಗುಡಿಸುವ ಕೆಲಸದಲ್ಲಿ ಹಲವರಿಂದ ಅವಮಾನ ಅನುಭವಿಸಿದೆ.

ನಿಮ್ಮ ತಂದೆ ಜಿಲ್ಲಾಧಿಕಾರಿಯಾ? ಇಲ್ಲಿ ಯಾಕೆ ನಿಂತುಕೊಂಡಿದ್ದೀಯಾ? ಇಲ್ಲೇನು ನಿನಗೆ ಕೆಲಸ. ಹೀಗೆ ನಾನಾ ರೀತಿಯಲ್ಲಿ ಅವಮಾನಿಸಿದರು. ಆದರೆ ನಾನು ಎಲ್ಲಾ ಅವಮಾನಗಳನ್ನು ಎದುರಿಸಿ ಜಿಲ್ಲಾಧಿಕಾರಿಯಾಗುತ್ತಿದ್ದೇನೆ ಎಂದು ಆಶಾ ಹೇಳಿದ್ದಾರೆ.

English summary
Asha appeared for the Rajasthan Civil Service Examinations two years ago, but the result was postponed owing to the Covid-19 pandemic. She landed a job in Jodhpur Municipal Corporation as a sweeper twelve days after appearing for the competitive exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X