ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ ಕಠಿಣ ಜೀವಾವಧಿ ಶಿಕ್ಷೆ

|
Google Oneindia Kannada News

ಜೈಪುರ, ಅಕ್ಟೋಬರ್ 06: ರಾಜಸ್ಥಾನದ ಅಳ್ವಾರ್‌ನಲ್ಲಿ 2019ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾರ್ ಸ್ಥಳೀಯ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಏಪ್ರಿಲ್ 26 ರಂದು ತಾನಗಾಜಿ ಅಳ್ವಾರ್ ಬೈಪಾಸ್‌ನ ಖಾಲಿ ನಿವೇಶನದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಪತಿಯ ಸಮ್ಮುಖದಲ್ಲೇ ನಾಲ್ವರು ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು.

ಇದೇ ಪ್ರಕರಣದಲ್ಲಿ ಘಟನೆಯ ವಿಡಿಯೋ ತುಣುಕನ್ನು ಚಿತ್ರೀಕರಿಸಿದ ಮತ್ತು ಪ್ರಸಾರ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯಡಿ ಒಬ್ಬ ಅಪರಾಧಿಗೆ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿತು.

ಅಳ್ವಾರ್ ಸಾಮೂಹಿಕ ಅತ್ಯಾಚಾರದ ಬಳಿಕ ಇನ್ನೂ 2 ಪ್ರಕರಣ ಬೆಳಕಿಗೆಅಳ್ವಾರ್ ಸಾಮೂಹಿಕ ಅತ್ಯಾಚಾರದ ಬಳಿಕ ಇನ್ನೂ 2 ಪ್ರಕರಣ ಬೆಳಕಿಗೆ

ಇವರಲ್ಲಿ ಹನ್ಸ್‌ರಾಜ್ ಸಾಯುವವರೆಗೂ ಶಿಕ್ಷೆ ಅನುಭವಿಸಲಿದ್ದಾರೆ. ಏಕೆಂದರೆ ಅವರು ಪುನರಾವರ್ತಿತವಾಗಿ ಅಪರಾಧ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ಪರ ವಕೀಲರು ಹೇಳಿದ್ದಾರೆ.

ಹನ್ಸ್‌ರಾಜ್ ಗುರ್ಜರ್, ಅಶೋಕ್ ಗುಜರ್, ಛೋಟೇಲಾಲ್ ಗುರ್ಜರ್ ಮತ್ತು ಇಂದ್ರಜ್ ಗುರ್ಜರ್ ಅವರುಗಳಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆವಿಧಿಸಿದೆ. ನ್ಯಾಯಾಲಯವು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಿಗಳಿಗೆ ದಂಡ ವಿಧಿಸಿದ್ದು, ಸಂತ್ರಸ್ತರಿಗೆ ಆ ದಂಡದ ಮೊತ್ತ ನೀಡಲಾಗುತ್ತದೆ.

ಗಂಡ-ಹೆಂಡತಿ ಬೆತ್ತಲೆ ಮಾಡಿ ಹಿಂಸೆ

ಗಂಡ-ಹೆಂಡತಿ ಬೆತ್ತಲೆ ಮಾಡಿ ಹಿಂಸೆ

ಗಂಡ ಹೆಂಡತಿಯನ್ನು ಸಂಪೂರ್ಣ ಬೆತ್ತಲೆ ಮಾಡಿ, ಗಂಡನಿಗೆ ಮಾರಣಾಂತಿಕವಾಗಿ ಥಳಿಸಿದ್ದಲ್ಲದೆ ಅವರ ಎದುರೇ ಹೆಂಡತಿಯ ಮೇಲೆ ಮೂರು ಗಂಟೆಗಳ ಕಾಲ ಅತ್ಯಾಚಾರ ಎಸಗಿದ ಘಟನೆ ಇಡೀ ದೇಶವನ್ನು ಮತ್ತೆ ಬೆಚ್ಚಿಬೀಳುವಂತೆ ಮಾಡಿತ್ತು.

ಮದುವೆ ಸಾಮಗ್ರಿಗಳನ್ನು ಖರೀದಿಸಲೆಂದು ಹೊರಗೆ ಹೋಗಿದ್ದ ದಂಪತಿಗಳ ಮೇಲೆ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದನ್ನು ವಿಡಿಯೋ ಮಾಡಿದ್ದಲ್ಲದೆ, ಹಣಕ್ಕಾಗಿ ಐವರು ದುರುಳರು ಬ್ಲಾಕ್ ಮೇಲ್ ಮಾಡಿದ ಘಟನೆ ಆಳ್ವಾರ್ ನಲ್ಲಿ ಏಪ್ರಿಲ್ 26ರಂದು ನಡೆದಿತ್ತು.
ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ

ಮರ್ಯಾದೆಗೆ ಅಂಜಿ ದೂರು ನೀಡಿರಲಿಲ್ಲ

ಮರ್ಯಾದೆಗೆ ಅಂಜಿ ಆ ದಂಪತಿಗಳು ಈ ತಲ್ಲಣಗೊಳಿಸುವಂಥ ಘಟನೆಯ ವಿವರಗಳನ್ನು ಪೊಲೀಸರಿಗೆ ನೀಡಿರಲಿಲ್ಲ. ಆದರೆ, ಯಾವಾಗ ಅತ್ಯಾಚಾರದ ವಿಡಿಯೋ ಮುಂದಿಟ್ಟುಕೊಂಡು ಹಣಕ್ಕಾಗಿ ಪೀಡಿಸಲು ಅತ್ಯಾಚಾರಿಗಳು ಆರಂಭಿಸಿದರೋ, ದಂಪತಿಗಳು ಪೊಲೀಸರಿಗೆ ಇದೀಗ ದೂರು ನೀಡಿದ್ದರು.

ನಿರ್ಜನ ಪ್ರದೇಶದಲ್ಲಿ ದಂಪತಿಯನ್ನ ಬೈಕಿನಿಂದ ಇಳಿಸಿದ್ದರು

ನಿರ್ಜನ ಪ್ರದೇಶದಲ್ಲಿ ದಂಪತಿಯನ್ನ ಬೈಕಿನಿಂದ ಇಳಿಸಿದ್ದರು

ಇಬ್ಬರನ್ನೂ ಕತ್ತಲಿರುವ ನಿರ್ಜನ ಸ್ಥಳದಲ್ಲಿ ಬೈಕಿನಿಂದ ಇಳಿಸಿ, ಬೈಕನ್ನುತಳ್ಳಿ, ಬಳಿಯಲ್ಲಿದ್ದ ಮರಳಿನ ದಿಬ್ಬದ ಬಳಿ ಎಳೆದೊಯ್ದಿದ್ದರು. ದಂಪತಿಗಳು ಬೆತ್ತಲಾಗುವಂತೆ ಮಾಡಿ ವಿಡಿಯೋ ಶೂಟ್ ಮಾಡಿದ್ದಾರೆ. ನಂತರ ಗಂಡನನ್ನು ಥಳಿಸಲು ಆರಂಭಿಸಿದ್ದಾರೆ. ಇದನ್ನು ಹೆಂಡತಿ ಪ್ರತಿರೋಧಿಸಿದಾಗ ಹಲ್ಲೆ ಮಾಡುವುದು ಇನ್ನೂ ಹೆಚ್ಚಾಗಿದೆ. ಆಗ ತನ್ನ ಗಂಡನನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹೆಂಡತಿ ಅವರಿಗೆ ಸಮರ್ಪಿಸಿಕೊಂಡಿದ್ದಳು.

ವಿಡಿಯೋ ಡಿಲೀಟ್‌ ಮಾಡಲು ಹಣದ ಬೇಡಿಕೆ

ವಿಡಿಯೋ ಡಿಲೀಟ್‌ ಮಾಡಲು ಹಣದ ಬೇಡಿಕೆ

ತಮ್ಮ ಬಳಿಯಿರುವ ವಿಡಿಯೋ ತೆಗೆದು ಹಾಕಬೇಕಿದ್ದರೆ ಕೂಡಲೆ 9 ಸಾವಿರ ರುಪಾಯಿ ನೀಡಬೇಕೆಂದು ಅತ್ಯಾಚಾರ ಎಸಗಿದ್ದವರಲ್ಲಿ ಒಬ್ಬ ಕರೆ ಮಾಡಲು ಆರಂಭಿಸಿದ್ದಾನೆ. ಹಣ ನೀಡದಿದ್ದರೆ ಅವರಿಬ್ಬರೂ ಬೆತ್ತಲಾಗಿದ್ದ ಮತ್ತು ಅತ್ಯಾಚಾರ ನಡೆಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದರು.

English summary
A local court in Alwar on Tuesday convicted and awarded rigorous life imprisonment to four people involved in the 2019 gangrape case in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X