ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪುರ್ ಶರ್ಮಾ ತಲೆಕಡಿಯಿರಿ ಮನೆ, ಆಸ್ತಿ ಬಹುಮಾನ ಪಡೆಯಿರಿ ಎಂದ ವ್ಯಕ್ತಿ: ವಿಡಿಯೋ

|
Google Oneindia Kannada News

ಜೈಪುರ, ಜುಲೈ 05: ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ವ್ಯಕ್ತಿಯೊಬ್ಬ ಪ್ರವಾದಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಶಿರಚ್ಛೇದ ಮಾಡುವವರಿಗೆ ತನ್ನ ಮನೆ ಮತ್ತು ಆಸ್ತಿಯನ್ನು ನೀಡುವುದಾಗಿ ವಿಡಿಯೋ ಮಾಡಿದ್ದಾನೆ. ವಿಡಿಯೋ ಈಗ ವೈರಲ್ ಆಗಿದೆ.

ವಿಡಿಯೋ ಮಾಡಿದ ವ್ಯಕ್ತಿಯನ್ನು ಸಲ್ಮಾನ್ ಚಿಸ್ತಿ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಆರೋಪಿ ಸಲ್ಮಾನ್ ಚಿಸ್ತಿ, "ನಾನು ನನ್ನ ದೇವರು, ತಾಯಿ ಮತ್ತು ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ, ನೂಪುರ್ ಶರ್ಮಾ ಶಿರಚ್ಛೇದ ಮಾಡುವ ಯಾರಿಗಾದರೂ ನಾನು ಮನೆ ಮತ್ತು ಆಸ್ತಿಯನ್ನು ನೀಡುತ್ತೇನೆ" ಎಂದು ಹೇಳಿಕೆ ನೀಡಿದ್ದಾನೆ.

ನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪನೂಪುರ್ ವಿರುದ್ಧದ ಸುಪ್ರೀಂ ಹೇಳಿಕೆಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ಆಕ್ಷೇಪ

ವೀಡಿಯೊ ವೈರಲ್ ಆದ ನಂತರ, ಅಜ್ಮೀರ್ ಐಟಿ ವಿಭಾಗದ ಪೊಲೀಸರು, ಐಪಿಸಿ 153-ಎ (ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ajmer Man Offer House And Property Reward For Who Beheads Nupur Sharma

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಲ್ಮಾನ್ ಚಿಸ್ತಿ ತಲೆಮರೆಸಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆರೋಪಿ ಸಲ್ಮಾನ್ ಚಿಸ್ತಿ ಕ್ರಿಮಿಮನ್ ಹಿನ್ನಲೆಯುಳ್ಳವನಾಗಿದ್ದು, ಮದ್ಯವ್ಯಸನಿಯಾಗಿದ್ದಾನೆ ಎಂದು ಸಾಂಗ್ವಾನ್ ಹೇಳಿದ್ದಾರೆ. ವಿಡಿಯೋ ಮಾಡಿದಾಗಲೂ ಆತ ಮದ್ಯಪಾನ ಮಾಡಿರುವವನಂತೆ ಕಾಣಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದಲ್ಲಿ ನಾಲ್ವರ ಬಂಧನ

ಜೂನ್ 28 ರಂದು, ಬಂಧಿತರಾದ ಮೊಹಮ್ಮದ್ ರಿಯಾಜ್ ಅಖ್ತರಿ ಮತ್ತು ಗೋಶ್ ಮೊಹಮ್ಮದ್, ಟೈಲರ್ ಕನ್ಹಯ್ಯಾ ಲಾಲ್‌ನನ್ನು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನ ಮಾಡಿದ್ದಾನೆಂದು ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಲಾಗಿತ್ತು. ಉದಯಪುರದಲ್ಲಿ ಕೋಮು ಉದ್ವಿಗ್ನತೆ ಉಂಟುಮಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಜೈಪುರ್ ಕೋರ್ಟ್ ಬಳಿ ಕನ್ಹಯ್ಯಾ ಲಾಲ್ ಹಂತಕರ ಮೇಲೆ ದಾಳಿಜೈಪುರ್ ಕೋರ್ಟ್ ಬಳಿ ಕನ್ಹಯ್ಯಾ ಲಾಲ್ ಹಂತಕರ ಮೇಲೆ ದಾಳಿ

ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಉದಯಪುರ ಪ್ರಕರಣವನ್ನು ಈಗ ಎನ್‌ಐಎ ತನಿಖೆ ನಡೆಸುತ್ತಿದ್ದು, ಇನ್ನೂ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋ ಹಂಚಿಕೊಂಡವರನ್ನು ಬಂಧಿಸಿದ ಪೊಲೀಸರು

ಏತನ್ಮಧ್ಯೆ, ಉದಯಪುರ ಘಟನೆಯ ವೀಡಿಯೊವನ್ನು ಪ್ರಸಾರ ಮಾಡಿದ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯಲ್ಲಿ ಐವರನ್ನು ಬಂಧಿಸಲಾಗಿದೆ.

ಸಿರಾಜುದ್ದೀನ್ ಹುಸೇನ್ (36) ಎಂಬಾತನನ್ನು ಉದಯಪುರದ ಕೊಲೆ ಘಟನೆಯ ವಿಡಿಯೋ ಪ್ರಸಾರ ಮಾಡಿದ್ದಕ್ಕಾಗಿ ಹನುಮಾನ್‌ಗಢ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತರ್ಸೆಮ್ ಪುರಿಯನ್ನು ಸಂಗಾರಿಯಾ ಪೊಲೀಸ್ ಠಾಣೆಯಲ್ಲಿ, ರಾಜ್‌ಕುಮಾರ್ ಜಟ್ ಮತ್ತು ಮೊಹಮ್ಮದ್ ಶಕುರ್ ಅವರನ್ನು ಸದರ್ ಪೊಲೀಸ್ ಠಾಣೆಯಲ್ಲಿ ಮತ್ತು ಪವನ್ ಕುಮಾರ್ ಅವರನ್ನು ನೋಹರ್ ಪೊಲೀಸ್ ಠಾಣೆಯಿಂದ ಬಂಧಿಸಲಾಗಿದ್ದು, ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಶಸ್ತ್ರಾಸ್ತ್ರಗಳೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಉದಯಪುರದಲ್ಲಿ ಕೊಲೆ ಆರೋಪಿಗಳು ಬಿಡುಗಡೆ ಮಾಡಿದ ಘಟನೆಯ ವೀಡಿಯೊವನ್ನು ಪ್ರಸಾರ ಮಾಡದಂತೆ ರಾಜ್ಯ ಪೊಲೀಸರು ಜನರನ್ನು ಕೇಳಿದ್ದಾರೆ.

Recommended Video

ಆಧಾರ್ ಕಾರ್ಡ್ ನಿಂದ 2 ವರ್ಷಗಳಾದ್ಮೇಲೆ ಹೆತ್ತವರನ್ನು ಸೇರಿದ ಯುವತಿಯ ಕಥೆ ಹೇಳಿದ PM ಮೋದಿ | OneIndia Kannada

English summary
Man offer the house and property to anyone who beheads Nupur Sharma, After the video went viral, the Ajmer police lodged a case under IT sections, IPC 153-A and other relevant sections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X