ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜ್ಮೇರ್ ಸೆಂಟ್ರಲ್ ಜೈಲಿನಲ್ಲಿ ಕೈದಿಗಳ 'ವಿಐಪಿ' ವ್ಯವಸ್ಥೆಗೆ ತಿಂಗಳಿಗೆ ಜಸ್ಟ್ 8 ಲಕ್ಷ

|
Google Oneindia Kannada News

ಜೈಪುರ್, ಸೆಪ್ಟೆಂಬರ್ 24: ರಾಜಸ್ಥಾನದ ಅಜ್ಮೇರ್ ಸೆಂಟ್ರಲ್ ಜೈಲಿನಲ್ಲಿ ಪ್ರತಿ ಬ್ಯಾರಕ್ ನಲ್ಲೂ ಒಂದೊಂದು ಕೋಣೆಯಲ್ಲಿ ಕೈದಿಗಳಿಗೆ 'ವಿಐಪಿ ವ್ಯವಸ್ಥೆ' ಮಾಡಲಾಗಿತ್ತಂತೆ. ಈ ಬಗ್ಗೆ ಭ್ರಷ್ಟಾಚಾರ ವಿರೋಧಿ ದಳವು (ಎಸಿಬಿ) ಮಾಹಿತಿ ಬಹಿರಂಗ ಮಾಡಿದೆ. ತನಿಖೆ ವೇಳೆ ಗೊತ್ತಾದ ಸಂಗತಿಯನ್ನು ಕೇಳಿದರೆ ಎಂಥವರೂ ದಂಗಾಗುತ್ತಾರೆ.

ಬ್ಯಾರಕ್ ಒಂದರಿಂದ ಹದಿನೈದರಲ್ಲಿ ವಿಐಪಿ ಕೋಣೆಯಿದ್ದು, ದುಡ್ಡಿನ ಕುಳಗಳಿಗೆ ಇವುಗಳಲ್ಲಿ ಸ್ಥಾನ ದೊರೆಯುತ್ತಿದ್ದವು. ಅಂಥ ವಿಐಪಿ ಕೋಣೆಗಳ ಬಳಿ ಸೀಮೆಸುಣ್ಣದಿಂದ ಗುರುತು ಮಾಡಲಾಗಿತ್ತು. ಇದರ ಒಳಗಿರುವ ಕೈದಿಗಳಿಗೆ ಸ್ವಚ್ಛವಾಗಿರುವ ಕೋಣೆ, ವಿಶೇಷ ಊಟ, ಸ್ವಚ್ಛವಾದ ಬಟ್ಟೆ ಇತ್ಯಾದಿ ಸವಲತ್ತು ಸಿಗುತ್ತಿತ್ತು.

ರಾಜ್ಯದಲ್ಲಿರುವ ಮತ್ತೊಂದು ಫೈವ್ ಸ್ಟಾರ್ ಜೈಲು ಯಾವುದು ಗೊತ್ತಾ?ರಾಜ್ಯದಲ್ಲಿರುವ ಮತ್ತೊಂದು ಫೈವ್ ಸ್ಟಾರ್ ಜೈಲು ಯಾವುದು ಗೊತ್ತಾ?

ಈ ವಿಐಪಿ ಕೋಣೆಗಳಿಗೆ ಕೈದಿಗಳು ತಿಂಗಳಿಗೆ ಎಂಟು ಲಕ್ಷ ರುಪಾಯಿ ಪಾವತಿಸುತ್ತಿದ್ದರು. ದಲ್ಲಾಳಿ ರೀತಿಯಲ್ಲಿ ಕೆಲಸ ಮಾಡುವ ಜೈಲಿನ ಸಿಬ್ಬಂದಿಯೊಬ್ಬ ಕೈದಿಗಳ ಸಂಬಂಧಿಕರ ಬಳಿ, ಅಂದರೆ ಜೈಲಿನ ಹೊರಗೆ ಇರುವವರಿಂದ ಪ್ರತಿ ತಿಂಗಳು ಎಂಟು ಲಕ್ಷ ರುಪಾಯಿ ವಸೂಲಿ ಮಾಡಿಕೊಂಡು ಬರುತ್ತಿದ್ದ. ಈ ರೀತಿ ತಿಂಗಳ ಮೊತ್ತವನ್ನು ಕೆಲವರು ನಗದು ನೀಡಿದ್ದರೆ, ಮತ್ತೆ ಕೆಲವರು ಆನ್ ಲೈನ್ ನಲ್ಲಿ ಟ್ರಾನ್ಸ್ ಫಾರ್ ಮಾಡುತ್ತಿದ್ದರಂತೆ ಎನ್ನುತ್ತಾರೆ ಅಧಿಕಾರಿಗಳು.

Ajmer Central Jail VIP Room For Inmates Was Available At 8 Lakh Per Month

ಹಗರಣದಲ್ಲಿ ಭಾಗಿ ಆಗಿರುವ ಸಿಬ್ಬಂದಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಧಿಕಾರಿಗಳು ಕೇಳಿದ್ದು, ಹದಿನೆಂಟು ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಕೈದಿಗಳ ಸಂಬಂಧಿಕರು ತಂಬಾಕು, ಸಿಗರೇಟ್ ಮತ್ತಿತರ ವಸ್ತುಗಳಿಗೆ ಪ್ರತ್ಯೇಕ ದರ ನೀಡಿದ್ದಾರೆ.

ಒಂದು ಪ್ಯಾಕೆಟ್ ಸಿಗರೇಟ್ ಹನ್ನೆರಡರಿಂದ ಹದಿನೈದು ಸಾವಿರ, ಒಂದು ಪ್ಯಾಕೆಟ್ ತಂಬಾಕಿಗೆ ಮುನ್ನೂರರಿಂದ ಐನೂರು ರುಪಾಯಿ ವಸೂಲಿ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಹನ್ನೆರಡು ಮಂದಿಯನ್ನು ಬಂಧಿಸಲಾಗಿದೆ.

English summary
ACB revealed that, Rajasthan's Ajmer central jail VIP room for inmates available at 8 lakh per month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X