• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್‌ ಬಳಿಕ ರಾಜಸ್ತಾನದತ್ತ ಕಾಂಗ್ರೆಸ್‌ ಗಮನ: ರಾಹುಲ್‌, ಪ್ರಿಯಾಂಕ, ಸಚಿನ್‌ ಭೇಟಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 24: ಪಂಜಾಬ್‌ನ ಬಳಿಕ ಕಾಂಗ್ರೆಸ್‌ ಹೈಕಮಾಂಡ್‌ ಈಗ ರಾಜಸ್ತಾನದಲ್ಲಿ ತನ್ನ ಪಕ್ಷದೊಳಗಿನ ಬಿಕ್ಕಟ್ಟನ್ನು ಸರಿ ಮಾಡುವ ಯತ್ನದಲ್ಲಿ ತೊಡಗಿದೆ. ಮಾಜಿ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ, ವಯನಾಡು ಸಂಸದ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಮುಖಂಡೆ ಪ್ರಿಯಾಂಕಾ ಗಾಂಧಿಯನ್ನು ರಾಜಸ್ತಾನ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಇಂದು ಭೇಟಿಯಾಗಿದ್ದು, ಈ ವಾರದಲ್ಲಿ ನಡೆದ ಎರಡನೇ ಭೇಟಿ ಇದಾಗಿದೆ.

ಗುಜರಾತ್‌ ಕಾಂಗ್ರೆಸ್‌ನ ಮುಖಂಡತ್ವವನ್ನು ಸಚಿನ್ ಪೈಲಟ್‌ ವಹಿಸಿಕೊಳ್ಳಬೇಕು ಎಂದು ರಾಹುಲ್‌ ಗಾಂಧಿಯ ಅಭಿಪ್ರಾಯ ಎಂದು ಹೇಳಲಾಗಿದೆ. ಗುಜರಾತ್‌ನಲ್ಲಿ ಮುಂದೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕಾಂಗ್ರೆಸ್‌ ನಾಯಕತ್ವವು ಸಚಿನ್ ಪೈಲಟ್‌ ಗುಜರಾತ್‌ನ ನಾಯಕತ್ವ ವಹಿಸಬೇಕು ಎಂದು ಅಭಿಪ್ರಾಯಿಸಿದೆ ಎಂದು ಹೇಳಲಾಗುದೆ.

ಸಚಿನ್ ಪೈಲಟ್ ಭವಿಷ್ಯದಲ್ಲಿ ಬಿಜೆಪಿ ಸೇರಬಹುದು: ಬಿಜೆಪಿ ಉಪಾಧ್ಯಕ್ಷ ಅಬ್ದುಲ್ಲಾಕುಟ್ಟಿಸಚಿನ್ ಪೈಲಟ್ ಭವಿಷ್ಯದಲ್ಲಿ ಬಿಜೆಪಿ ಸೇರಬಹುದು: ಬಿಜೆಪಿ ಉಪಾಧ್ಯಕ್ಷ ಅಬ್ದುಲ್ಲಾಕುಟ್ಟಿ

ಆದರೆ ಈ ನಡುವೆ ಸಚಿನ್‌ ಪೈಲಟ್‌ ಮಾತ್ರ ರಾಜಸ್ತಾನದ ಮುಖ್ಯಮಂತ್ರಿಯಾಗಿ ಮಾಡುವ ಆಶ್ವಾಸನೆಯನ್ನೇ ಬೆನ್ನತ್ತಿದ್ದಾರೆ ಎಂದು ಹೇಳಲಾಗಿದೆ. ವಾರದಲ್ಲೇ ಎರಡು ಬಾರಿ ನಡೆದಿರುವ ಈ ಸಭೆಯು ರಾಜಸ್ತಾನ ರಾಜಕೀಯದಲ್ಲಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ.

ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ, ರಾಜಕೀಯ ಅಸಮಾಧಾನಗಳನ್ನು ಸರಿಪಡಿಸಿ ಪಂಜಾಬ್‌ನಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿಸಿದ ನಂತರ ಈಗ ಕಾಂಗ್ರೆಸ್ ತನ್ನ ದೃಷ್ಟಿಯನ್ನು ರಾಜಸ್ತಾನದತ್ತ ನೆಟ್ಟಿದೆ. ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜೊತೆಗೆ ಸಚಿನ್‌ ಪೈಲಟ್‌ ಸುಮಾರು 45 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಮಾತುಕತೆಯಲ್ಲಿ ಸಚಿನ್ ಪೈಲಟ್‌ ಕಾಂಗ್ರೆಸ್‌ ಗುಜರಾತ್‌ನ ಜವಾಬ್ದಾರಿಯನ್ನು ಹೊತ್ತು ಕೊಳ್ಳಲು ಒಪ್ಪಿಕೊಂಡಿದ್ದಾರೆಯೇ ಎಂದು ತಿಳಿದು ಬಂದಿಲ್ಲ. ಆದರೆ 70 ವರ್ಷದ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿ ಆಗಿರುವ ರಾಜಸ್ತಾನದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ದರಾಗಿದ್ದಾರೆ ಎಂದು ಹೇಳಲಾಗಿದೆ.

ರಾಜಸ್ತಾನ ಸರ್ಕಾರದಲ್ಲಿ ಇರುವ ತನ್ನ ಪರವಾದ ಸಚಿವರುಗಳನ್ನು ಸಚಿನ್‌ ಪೈಲಟ್‌ ಹುಡುಕುತ್ತಿದ್ದಾರೆ. ಈ ಮೂಲಕ ನಾಯಕತ್ವ ಪಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿದೆ. ಈ ವಿಚಾರವು ಕೂಡಾ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಚರ್ಚೆ ನಡೆದಿರಬಹುದು ಎಂದು ಹೇಳಲಾಗಿದೆ. ಸಚಿನ್‌ ಪೈಲಟ್‌ ಪರವಾಗಿ ಇರುವವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂಬ ವಿಚಾರದಲ್ಲಿ ಹಿಂದೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅಶೋಕ್‌ ಗೆಹ್ಲೋಟ್‌ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಸಚಿನ್‌ ಪೈಲಟ್‌ ಪರವಾಗಿ ಈ ವಿಸ್ತರಣೆಯನ್ನು ಮಾಡಲು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮಾತ್ರ ಒಪ್ಪಿಗೆ ಸೂಚಿಸಿಲ್ಲ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ಅಜಯ್ ಮಾಕೇನ್ ಅಗ್ನಿ ಪರೀಕ್ಷೆ! ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ಅಜಯ್ ಮಾಕೇನ್ ಅಗ್ನಿ ಪರೀಕ್ಷೆ!

2018 ರ ವೇಳೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಶೋಕ್‌ ಗೆಹ್ಲೋಟ್‌, 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಮುಖ್ಯಮಂತ್ರಿಯಾದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ನಿರ್ಧಾರ ಕೈಗೊಳ್ಳುವುದು ಭಾರೀ ಇಕ್ಕಟ್ಟಿನ ಸಂದರ್ಭವಾಗಿತ್ತು. ಇದೇ ಸಂದರ್ಭದಲ್ಲಿ ಸಚಿನ್‌ ಪೈಲಟ್‌ ಕೂಡಾ ಸರ್ಕಾರದ ಉನ್ನತ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಸಚಿನ್‌ ಪೈಲಟ್‌ಗೆ ಮಾತ್ರ ಕಾಂಗ್ರೆಸ್‌ ಪಕ್ಷವನ್ನು ಪುನರ್‌ ನಿರ್ಮಾಣ ಮಾಡಿದ ಹೆಗ್ಗಳಿಕೆ ಇದೆ. 2013 ರ ರಾಜ್ಯ ಚುನಾವಣೆಯಲ್ಲಿ ಪಕ್ಷ ಸೋತ ಬಳಿಕ ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಸಚಿನ್‌ ಪೈಲಟ್‌ರನ್ನು ಮಾಡಲಾಯಿತು.

(ಒನ್‌ ಇಂಡಿಯಾ ಸುದ್ದಿ)

English summary
After Punjab Congress Focus On Rajasthan: Rahul Gandhi, Priyanka Meet Sachin Pilot. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X