ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನನ್ನು ರೈತನನ್ನಾಗಿ ಮಾಡಲು ಮಹಾನ್ ತ್ಯಾಗ ಮಾಡಿದ ತಾಯಿ

|
Google Oneindia Kannada News

ಜೈಪುರ, ನವೆಂಬರ್ 29: ಇಂದು ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು, ಲಕ್ಷಗಟ್ಟಲೇ ಸಂಬಳ ಬರಬಹುದು, ಆದರೆ ದುಡ್ಡು ಇದ್ದರೆ ತಿನ್ನಲಾಗುವುದಿಲ್ಲ, ನಮಗೆ ಶುದ್ದ ಗಾಳಿ, ನೀರು ಬೇಕೆ ಬೇಕು. ಇತ್ತೀಚಿಗೆ ಮಳೆ ಕೂಡಾ ಕಡಿಮೆಯಾಗಿದೆ. ಮನೆಯೊಳಗೆ ಬಿಸಿಲು ಬರದಂತೆ ಇರುತ್ತಿದ್ದೇವೆ, ನಾವು ಎಷ್ಟು ದುಡಿದರೆ ಏನು ಪ್ರಯೋಜನ?

ಹೀಗಾಗಿ ನಾವು ನಮ್ಮ ಮಗನಿಗೆ ಉತ್ತಮ ಜೀವನ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ರಾಜೇಂದ್ರ ದಂಪತಿ. 2016 ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟು ತನ್ನ ಜಮೀನಿನಲ್ಲಿ ಕೆಲಸ ಮಾಡತೊಡಗಿದರು.

ಹಳ್ಳಿ ಪರಿಸರ ಸುಂದರ

ಹಳ್ಳಿ ಪರಿಸರ ಸುಂದರ

ಮಗನಿಗಾಗಿ ಸರ್ಕಾರಿ ಸಂಬಳ ಬಿಟ್ಟ ತಾಯಿಯ ಕಥೆ ಇದು. ರಾಜಸ್ಥಾನದ ಮಹಾನ್ ತಾಯಿಯೊಬ್ಬರು ತನ್ನ ಮಗನನ್ನು ಕೃಷಿಕನನ್ನಾಗಿ ಮಾಡಲು 90 ಸಾವಿರದ ಸರ್ಕಾರಿ ಸಂಬಳ ಬಿಟ್ಟು ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದಾರೆ.

ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಅವರು ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಅವರು ಭಾರತೀಯ ರೈಲ್ವೇಯಲ್ಲಿ ನೌಕರನಾಗಿದ್ದು, ಇತ್ತ ಅವರ ಪತ್ನಿ ಚಂಚಲ್ ಅವರು ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

ಈ ಇಬ್ಬರೂ ಸೇರಿ ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿ ಅದರಲ್ಲಿಯೇ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್ ನಿಗೆ ಕೃಷಿಕನಾಗಲು ಹೇಳಿಕೊಡುತ್ತಿದ್ದಾರೆ.

ಪಾಕಿಸ್ತಾನದ 21 ಜನರಿಗೆ ಭಾರತೀಯ ಪೌರತ್ವ ನೀಡಿದ ರಾಜಸ್ಥಾನಪಾಕಿಸ್ತಾನದ 21 ಜನರಿಗೆ ಭಾರತೀಯ ಪೌರತ್ವ ನೀಡಿದ ರಾಜಸ್ಥಾನ

ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ

ತಾನು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದನ್ನು ಕೇಳಿ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು 'ಇದು ತಪ್ಪು ನಿರ್ಧಾರ' ಎಂದರು. ಆದರೆ ನನ್ನ ಮಗನಿಗೆ ಉತ್ತಮ ಮತ್ತು ಆರೋಗ್ಯಕರ ಕೊಡಿಸಬೇಕೆಂದು ನಿರ್ಧರಿಸಿದ್ದೇನೆ ಎಂದು ಅವರಿಗೆ ಹೇಳಿದೆ ಅಂದರು ಚಂಚಲ್.

2017 ರಲ್ಲಿ ಚಂಚಲ್ ತಮ್ಮ ಮಗನೊಂದಿಗೆ ಇಂಧೋರ್ ಗೆ ಶಿಫ್ಟ್ ಆಗಿದ್ದಾರೆ. ಅಲ್ಲಿ ಒಬ್ಬ ಸಾವಯುವ ಕೃಷಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.ಜಾನಕ್ ಪಾಲ್ಟಾ ಅವರಿಂದ ಕೃಷಿಯ ಬಗ್ಗೆ ಮಾಹಿತಿ ಹಾಗೂ ತರಬೇತಿಯನ್ನು ಪಡೆದಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸೊಲಾರ್ ಕುಕ್ಕಿಂಗ್ ಹಾಗೂ ಸೋಲಾರ್ ಡ್ರೈಯಿಂಗ್ ನ್ನು ಕಲಿತಿದ್ದಾರೆ.

ಸಾವಯುವ ಕೃಷಿ ಉತ್ತಮ

ಸಾವಯುವ ಕೃಷಿ ಉತ್ತಮ

ವಾತಾವರಣ ಬದಲಾಯಿಸದ್ದನ್ನು ತಮ್ಮ ಮಗ ಹೇಗೆ ಎದುರಿಸುತ್ತಾನೆ ಎಂದುಕೊಂಡಿದ್ದೇವು, ಆದರೆ ಅವನು ಈ ಬದಲಾವಣೆಯಿಂದ ಖುಷಿಯಾಗಿದ್ದಾನೆ. ಈಗ ಸಾವಯುವ ಕೃಷಿಯಿಂದ ಹಿಡಿದು ಎಲ್ಲಾ ಕೆಲಸದಲ್ಲಿಯೂ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಈ ಗ್ರಾಮದಲ್ಲಿ ಆತನಿಗೆ ತುಂಬಾ ಸ್ನೇಹಿತರು ಪರಿಚಯವಾಗಿದ್ದಾರೆ.

ರಾಜಸ್ತಾನದಲ್ಲಿ ಗೌಪ್ಯವಾಗಿ ಮಾಹಿತಿ ಪಡೆಯುವಾಗ ಸಿಕ್ಕಿಬಿದ್ದ ಪಾಕಿಸ್ತಾನಿ ಸ್ಪೈರಾಜಸ್ತಾನದಲ್ಲಿ ಗೌಪ್ಯವಾಗಿ ಮಾಹಿತಿ ಪಡೆಯುವಾಗ ಸಿಕ್ಕಿಬಿದ್ದ ಪಾಕಿಸ್ತಾನಿ ಸ್ಪೈ

ಗುರುಭಕ್ಷ್ ಈ ಗ್ರಾಮದ ತನ್ನ ಸ್ನೇಹಿತರಿಗೂ ಸಾವಯುವ ಕೃಷಿ ಮತ್ತು ಸೋಲಾರ್ ಕುಕ್ಕಿಂಗ್ ಬಗ್ಗೆ ಕಲಿಸುತ್ತಿದ್ದಾನೆ. ಅವರಿಂದಲೂ ಅವನು ಕಲಿಯುತ್ತಿದ್ದಾನೆ ಎಂದು ಹೇಳುತ್ತಾರೆ ಚಂಚಲ್.

ಮಕ್ಕಳಿಗೆ ಒತ್ತಡವಿರಬಾರದು

ಮಕ್ಕಳಿಗೆ ಒತ್ತಡವಿರಬಾರದು

ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷಗಟ್ಟಲೇ ದುಡ್ಡು ಸುರಿಯುತ್ತಿದ್ದಾರೆ, ಆದರೆ ಆ ಹಣವನ್ನು ಸಂಪಾದಿಸುವ ಭರದಲ್ಲಿ ತಮ್ಮ ಮಕ್ಕಳಿಗೆ ಸಮಯಗಳನ್ನು ನೀಡಲಾಗುತ್ತಿಲ್ಲ. ಅವರ ಸ್ವಾತಂತ್ರ್ಯವನ್ನು ನಾವು ಕಸಿದುಕೊಂಡಿದ್ದೇವೆ, ಅವರ ಬಾಲ್ಯವನ್ನು ಹಾಉ ಮಾಡುತ್ತಿದ್ದೇವೆ ಎಂದರು.

ನಾವು ಯಾವಾಗಲೂ ನಮ್ಮ ಮಗನಿಗೆ ಹೇಳುತ್ತಿರುತ್ತೇವೆ, ನೀನು ಯಾವ ರೇಸ್ ನಲ್ಲಿ ಇಲ್ಲ. ನೀನು ಯಾರನ್ನು ಹಿಂದಕ್ಕೆ ಹಾಕಬೇಕಿಲ್ಲ, ಕೇವಲ ನಿನ್ನ ವೇಗದಲ್ಲಿ ನೀನು ನಡೆಯಬೇಕು ಎಂದರು ರಾಜೇಂದ್ರ ಮತ್ತು ಚಂಚಲ್.

ತಾವು ಬೆಳೆಯುವ ತರಕಾರಿಯಿಂದಲೇ ಮನೆ ಅಡುಗೆ

ತಾವು ಬೆಳೆಯುವ ತರಕಾರಿಯಿಂದಲೇ ಮನೆ ಅಡುಗೆ

ಅದರ ಜೊತೆ ತಮ್ಮ ಮಗನಿಗೆ ತರಬೇತಿ ಕೊಡುತ್ತಿದ್ದಾರೆ, ಅಷ್ಟೇ ಅಲ್ಲದೇ ಮಗ ಗುರುಭಕ್ಷ್ ಗೆ ವಿಧ್ಯಾಭ್ಯಾಸವನ್ನು ಕಲಿಸುತ್ತಿದ್ದಾರೆ. ಮಾದರಿ ರೈತನಾಗಬೇಕೆಂದು ತಾಯಿ ಸರ್ಕಾರಿ ಕೆಲಸ ಬಿಟ್ಟಿರುವುದು ಎಲ್ಲರಿಗೂ ಮಾದರಿಯಾಗಿದೆ. ರಾಜೇಂದ್ರ ದಂಪತಿಯು ತಮ್ಮ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡುತ್ತಿದ್ದೇವೆ. ಅಲ್ಲದೇ ತಮ್ಮ ಜಮೀನಿನಲ್ಲಿ ಸಾವಯುವ ತರಕಾರಿಗಳನ್ನು ಬೆಳೆಯುತ್ತಿದ್ದೇವೆ, ಅದರಿಂದಲೇ ನಮ್ಮ ಮನೆಯಲ್ಲಿ ಅಡುಗೆ ಮಾಡಲಾಗುತ್ತದೆ ಎಂದರು. ರಾಜೇಂದ್ರ ಅವರು ಉದ್ಯೋಗದಲ್ಲಿಯೇ ಮುಂದುವರೆದಿದ್ದು, ಚಂಚಲ್ ಅವರೊಬ್ಬರೇ ಕೃಷಿಯನ್ನು ನೋಡಿಕೊಳ್ಳುತ್ತಿದ್ದಾರೆ.

English summary
This Is The Story Of a Mother Who Left a Government Salary For Her Son. A Mother In Rajasthan Is Working Hard On Her Farm To Raise Her Son As a Farmer, Leaving About 90 Thousands Of Government Salaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X