ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

97 ರ ಅಜ್ಜಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು

|
Google Oneindia Kannada News

ಜೈಪುರ, ಜನವರಿ 18: ಚುನಾವಣೆಯಲ್ಲಿ ಮತ ಚಲಾಯಿಸಲು ಮತ್ತೊಬ್ಬರ ನೆರವು ಪಡೆಯುವಂತಹಾ ವಯಸ್ಸಿನಲ್ಲಿ ಅಜ್ಜಿಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಗೆಲುವನ್ನೂ ಸಾಧಿಸಿದ್ದಾರೆ.

ರಾಜಸ್ಥಾನದ ಸಿಕಾರ್‌ ವಿಭಾಗದ ಪುರಾಣ್‌ವಾಸ್ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 97 ವರ್ಷದ ವಿದ್ಯಾದೇವಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ಸದಸ್ಯೆ ತಸ್ಲೀಮಾ ಆಯ್ಕೆ ಸಾಧ್ಯತೆಮೈಸೂರು ಮೇಯರ್ ಚುನಾವಣೆ: ಜೆಡಿಎಸ್ ಸದಸ್ಯೆ ತಸ್ಲೀಮಾ ಆಯ್ಕೆ ಸಾಧ್ಯತೆ

ಪುರಾಣ್‌ವಾಸ್ ಗ್ರಾಮ ಪಂಚಾಯಿತಿ ಚುನಾವಣೆಗೆ 11 ಮಂದಿ ಸ್ಪರ್ಧಿಸಿದ್ದರು. ಮಹಿಳಾ ಮೀಸಲಾಗಿದ್ದ ಈ ಸ್ಥಾನಕ್ಕೆ 97 ವರ್ಷದ ವಿದ್ಯಾದೇವಿ ಮತ್ತು ಆರತಿ ಮೀನಾ ವಿರುದ್ಧ ಪೈಪೋಟಿ ಇತ್ತು. ಆದರೆ ಅಂತಿಮ ಜಯ ವಿದ್ಯಾದೇವಿ ಅವರದ್ದಾಗಿದೆ. ಆರತಿ ಮೀನಾ ಅವರನ್ನು 207 ಮತಗಳ ಅಂತರದಿಂದ ಸೋಲಿಸಿದ್ದಾರೆ.

97 Year Old Vidya Devi Won Gram Panchayat Elections

ಮೊದಲ ಬಾರಿಗೆ ವಿದ್ಯಾದೇವಿ ಚುನಾವಣೆಗೆ ಸ್ಪರ್ಧಿಸಿದ್ದು, ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದಾರೆ. ವಿದ್ಯಾದೇವಿ ಅವರ ಮಾವನವರು 25 ವರ್ಷಗಳ ಕಾಲ ಇದೇ ಗ್ರಾಮಕ್ಕೆ ಸರ್‌ಪಂಚ್ ಆಗಿ ಆಯ್ಕೆ ಆಗಿದ್ದರು. ವಿದ್ಯಾದೇವಿ ಪತಿ ಸಹ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದರು. ವಿದ್ಯಾದೇವಿ ಮಗ ಸಹ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದರು. ವಿದ್ಯಾದೇವಿ ಮೊಮ್ಮಗ ಸಹ ಜನಪ್ರತಿನಿಧಿ ಆಗಿದ್ದು, ಅವರು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದಾರೆ. ಈಗ ವಿದ್ಯಾದೇವಿ ಸಹ ಗೆದ್ದಿದ್ದಾರೆ.

ಮಹಾರಾಷ್ಟ್ರದ ಆರ್ ಎಸ್ ಎಸ್ ಗರ್ಭಗುಡಿಯಲ್ಲೇ ಮುಗ್ಗರಿಸಿದ ಬಿಜೆಪಿಮಹಾರಾಷ್ಟ್ರದ ಆರ್ ಎಸ್ ಎಸ್ ಗರ್ಭಗುಡಿಯಲ್ಲೇ ಮುಗ್ಗರಿಸಿದ ಬಿಜೆಪಿ

ವಿದ್ಯಾದೇವಿ ಅವರು ಗೆಲ್ಲುವ ಮೂಲಕ ಅತ್ಯಂತ ಹಿರಿಯ ಗ್ರಾಮ ಪಂಚಾಯಿತಿ ಸದಸ್ಯೆ ಎಂಬ ಹಿರಿಮೆಗೆ ಪಾತ್ರವಾಗಿದ್ದಾರೆ. 'ಗ್ರಾಮದ ಎಲ್ಲ ವಿಧವೆಯರಿಗೆ ಮತ್ತು ವಯಸ್ಸಾದವರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ ಮತ್ತು ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ಶ್ರಮಪಡುತ್ತೇನೆ' ಎಂದು ವಿದ್ಯಾದೇವಿ ಭರವಸೆ ನೀಡಿದ್ದಾರೆ.

97 ವರ್ಷ ವಯಸ್ಸಾಗಿದ್ದರೂ ಉತ್ಸಾಹದ ಚಿಲುಮೆಯಂತಿರುವ ವಿದ್ಯಾದೇವಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ಕಿ.ಮೀ ನಡೆದುಕೊಂಡೇ ಹೋಗಿದ್ದರು. ಪ್ರಚಾರ ಸಂದರ್ಭವನ್ನೂ ನಡೆದುಕೊಂಡೇ ಮಾಡಿದ್ದರಂತೆ.

English summary
In Rajasthan 97 year old Vidya Devi won in Gram Panchayat elections. She said 'i will work to empower village women'. 9
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X