ಸ್ವಯಂ ಘೋಷಿತ ದೇವಮಾನವನ ವಿರುದ್ಧ 4 ಮಹಿಳೆಯರಿಂದ ಲೈಂಗಿಕ ಕಿರುಕುಳ ದೂರು
ಜೈಪುರ, ಅಕ್ಟೋಬರ್ 28: ಸ್ವಯಂ ಘೋಷಿತ ದೇವಮಾನವನ ವಿರುದ್ಧ ನಾಲ್ಕು ಮಹಿಳೆಯರು ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ.
ರಾಜಸ್ಥಾನದ ಬೂಂದಿಯಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಮಹಿಳೆಯರು ಸ್ವಯಂ ಘೋಷಿತ ದೇವಮಾನವನ ವಿರುದ್ಧ ದೂರು ನೀಡಿದ್ದಾರೆ.
'ದೇವಮಾನವ' ಡಾಟಿ ವಿರುದ್ಧ ರೇಪ್ ಕೇಸ್ ದಾಖಲಿಸಿದ ಸಿಬಿಐ
ಮಹಿಳೆಯರ ದೂರಿನ ಪ್ರಕಾರ ಆತನ ಬಳಿ ದೈವಶಕ್ತಿ ಇದ್ದು, ಯಾವುದೇ ಸಮಸ್ಯೆಯನ್ನಾದರೂ ಪರಿಹರಿಸುವ ಶಕ್ತಿ ಇದೆ ಎಂದು ಹೇಳಿಕೊಂಡಿದ್ದ. ಬಳಿಕ ಮಹಿಳೆಯರನ್ನು ಆಶ್ರಮಕ್ಕೆ ಕರೆಸಿಕೊಂಡುಲೈಂಗಿಕ ಕಿರುಕುಳ ನೀಡಿದ್ದ ಹಾಗೆಯೇ ಸಾಕಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.