• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

4 ದಿನದಲ್ಲಿ ತನಿಖೆ, 5 ದಿನದಲ್ಲಿ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ

|

ಜೈಪುರ್ (ರಾಜಸ್ತಾನ), ಫೆಬ್ರವರಿ 12: ಇದೇ ತಿಂಗಳ 2ನೇ ತಾರೀಕು 4 ವರ್ಷದ ಬಾಲಕಿಯನ್ನು ಜೈಪುರ್ ನ ಜೆ.ಕೆ.ಲೊನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅದಕ್ಕೆ ಮೂರು ದಿನಗಳ ಹಿಂದೆ ಆಕೆ ಮೇಲೆ ಅತ್ಯಾಚಾರ ನಡೆಸಿದ್ದ ವ್ಯಕ್ತಿಯನ್ನು ಗುರುತಿಸಿದ್ದಳು. ಒಂದು ಕಾಗದದ ಮೇಲೆ ಅಂಟಿಸಿದ್ದ ಹೆಬ್ಬೆರಳು ಗಾತ್ರದ ಒಂಬತ್ತು ಫೋಟೋ ಪೈಕಿ ಅತ್ಯಾಚಾರ ನಡೆಸಿದ್ದು ಯಾರು ಎಂಬುದನ್ನು ಗುರುತಿಸಿದ್ದಳು.

ಐದು ದಿನಗಳ ನಂತರ ಆರೋಪಿಯನ್ನು ಗುರುತಿಸುವ ಈ ಪ್ರಕ್ರಿಯೆ ಕೋರ್ಟ್ ನಲ್ಲೂ ಪುನರಾವರ್ತನೆ ಆಯಿತು. ಆರೋಪಿಯನ್ನು ಮತ್ತೆ ಆಕೆ ಗುರುತಿಸಿದಳು. ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದರಲ್ಲಿ ರಾಜಸ್ತಾನ ಕೋರ್ಟ್ ದಾಖಲೆ ಬರೆದಿದೆ.

ಮೂವರು ಪಾದ್ರಿಗಳಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ:ಎಫ್ ಐಆರ್ ದಾಖಲು

ಸಿಕರ್ ಜಿಲ್ಲೆಯ ಕೋರ್ಟ್ ಪೋಕ್ಸೊ ಕಾಯ್ದೆ ಅಡಿಯ ಈ ಪ್ರಕರಣದ ವಿಚಾರಣೆಯನ್ನು ಐದು ದಿನದಲ್ಲಿ ಪೂರ್ಣಗೊಳಿಸಿದೆ. ಫೆಬ್ರವರಿ 11ರಂದು ಆರೋಪಿಗೆ ಸಾಯುವ ತನಕ ಜೀವಾವಧಿ ಜೈಲು ಶಿಕ್ಷೆ ನೀಡಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವರತನ್ ಶರ್ಮಾ ಹೇಳಿದ್ದಾರೆ.

ಫೆಬ್ರವರಿ ಐದನೇ ತಾರೀಕು ವಿಚಾರಣೆ ಶುರುವಾಯಿತು. ಸೋಮವಾರ ರಾತ್ರಿ ಪೂರ್ಣಗೊಂಡಿತು. ನ್ಯಾಯಾಧೀಶರು ಐದು ದಿನದೊಳಗೆ ಆರೋಪಿಯ ಹೇಯ ಕೃತ್ಯಕ್ಕೆ ಶಿಕ್ಷೆಯನ್ನು ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಹದಿನಾಲ್ಕು ವರ್ಷದ ಹಿಂದೆ ಜರ್ಮನಿ ಮಹಿಳೆ ಮೇಲೆ ಆಟೋರಿಕ್ಷಾ ಚಾಲಕ, ಆತನ ಸಹಚರ ಅತ್ಯಾಚಾರ ನಡೆಸಿದ್ದ ಆರೋಪದ ವಿಚಾರಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದ ಹನ್ನೊಂದು ದಿನದಲ್ಲಿ ಮುಗಿದಿತ್ತು.

ಮತ್ತೊಂದು ಪ್ರಕರಣದಲ್ಲಿ ಜರ್ಮನಿ ಮಹಿಳೆ ಮೇಲೆ ಒಡಿಶಾದ ಹಿರಿಯ ಐಪಿಎಸ್ ಅಧಿಕಾರಿ ಮಗ ಬಿಟ್ಟಿ ಮೊಹಂತಿ ಅತ್ಯಾಚಾರ ನಡೆಸಿದ ಪ್ರಕರಣದ ವಿಚಾರಣೆ ಹದಿನೈದು ದಿನದಲ್ಲಿ ಪೂರ್ಣಗೊಂಡಿತ್ತು.

ವಿಬ್‌ಗಯಾರ್‌ ಅತ್ಯಾಚಾರ ಪ್ರಕರಣ: 5 ವರ್ಷವಾದರೂ ಆರಂಭವಾಗದ ವಿಚಾರಣೆ

ಈಗಿನ ಪ್ರಕರಣದಲ್ಲಿ, ಮನೆಯಿದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಜನವರಿ ಮೂವತ್ತರಂದು ಎರಡು ಗಂಟೆ ನಂತರ ರಾತ್ರಿ ಒಂಬತ್ತರ ಸುಮಾರಿಗೆ ಸ್ಮಶಾನದ ಬಳಿ ಪತ್ತೆಯಾಗಿದ್ದಳು. ಕರಣ್ ಎಂಬ ವ್ಯಕ್ತಿಯ ಜತೆಗೆ ಆಕೆ ಕಂಡು ಬಂದಿದ್ದಳು. ಬಾಲಕಿಯ ದೇಹದಿಂದ ರಕ್ತ ಹೋಗುತ್ತಿತ್ತು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಕರಣ್ ಬಿದ್ದು ಗಾಯಗೊಂಡಿದ್ದ.

ಇಬ್ಬರನ್ನೂ ಆಸ್ಪತೆಗೆ ದಾಖಲಿಸಲಾಗಿತ್ತು. ಆರೋಪಿಯನ್ನು ಆ ನಂತರ ಬಾಲಕಿ ಗುರುತಿಸಿದ್ದಳು. ನಾಲ್ಕು ದಿನಗಳಲ್ಲಿ ಪೊಲೀಸರು ತನಿಖೆ ಮುಗಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On February 2, a 4-year-old girl lodged in Jaipur’s JK Lone Hospital identified the man who raped her 3 days ago, from nine mug shots pasted on a white sheet of paper. Five days later, the process was repeated in court, and she identified him again, proving it to be the most important evidence in the fastest trial in a rape case in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more