ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಬಿಕ್ಕಟ್ಟಿನ ನಡುವೆ ರಾಜಸ್ಥಾನದಲ್ಲಿ ಕೊರೊನಾ ಸ್ಥಿತಿ ಹೇಗಿದೆ?

|
Google Oneindia Kannada News

ಜೈಪುರ, ಜುಲೈ 24: ಇಡೀ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ರಾಜ್ಯ ಸರ್ಕಾರಗಳು ಸಹ ಸಂಪೂರ್ಣವಾಗಿ ಕೊವಿಡ್ ನಿಯಂತ್ರಣದ ಕಡೆ ಹೆಚ್ಚು ಗಮನ ನೀಡುತ್ತಿವೆ. ಆದರೆ, ಕಳೆದ 20 ದಿನಗಳಿಂದ ರಾಜಸ್ಥಾನದಲ್ಲಿ ಮಾತ್ರ ಕೊರೊನಾ ವೈರಸ್‌ಗಿಂತ ಹೆಚ್ಚು ರಾಜಕೀಯವೇ ಸದ್ದು ಮಾಡ್ತಿದೆ.

ಸರ್ಕಾರವನ್ನು ಉರುಳಿಸಲು ವಿಪಕ್ಷ ಬಿಜೆಪಿ ಯತ್ನಿಸುತ್ತಿದ್ದರೆ, ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹೋರಾಡುತ್ತಿದೆ. ಈ ನಡುವೆ ಕೆಲವು ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಬೆಳವಣಿಗೆಗಳನ್ನು ಅವಲೋಕಿಸುತ್ತಿದ್ದಾರೆ.

ಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟ

ಈ ಮಧ್ಯೆ ರಾಜಸ್ಥಾನದಲ್ಲಿ ಕೊವಿಡ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

375 New Covid19 Positive Cases Reported In Rajasthan Today

ಶುಕ್ರವಾರ ಮಧ್ಯಾಹ್ನ ರಾಜಸ್ಥಾನ ಆರೋಗ್ಯ ಇಲಾಖೆ ಕೊರೊನಾ ಕುರಿತಂತೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 375 ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,595ಕ್ಕೆ ಏರಿದೆ. ಅದರಲ್ಲಿ 9,125 ಕೇಸ್‌ಗಳು ಸಕ್ರಿಯವಾಗಿದ್ದು, ಇದುವರೆಗೂ 598 ಮಂದಿ ಸಾವನ್ನಪ್ಪಿದ್ದಾರೆ.

ರಾಜಸ್ಥಾನದ ಪೈಕಿ ಜೋಧ್‌ಪುರದಲ್ಲಿ 5398 ಕೇಸ್, ಜೈಪುರದಲ್ಲಿ 4658 ಪ್ರಕರಣ, ಅಲ್ವಾರ್‌ನಲ್ಲಿ 2451 ಕೇಸ್, ಭಾರತ್‌ಪುರದಲ್ಲಿ 2281 ಕೇಸ್, ಪಾಲಿಯಲ್ಲಿ 2204 ಕೇಸ್ ದಾಖಲಾಗಿದೆ. ಇನ್ನು ಭಾರತದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿರುವ ರಾಜ್ಯಗಳ ಪಟ್ಟಿಯಲ್ಲಿ ರಾಜಸ್ಥಾನ 10ನೇ ಸ್ಥಾನದಲ್ಲಿದೆ.

ಅಂದ್ಹಾಗೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯಸಭಾ ಸಂಸದೆ ಕಿರೋದಿ ಲಾಲ್ ಮೀನಾ ಅವರಿಗೆ ಕೊರೊನಾ ವೈರಸ್ ತಗುಲಿರುವುದು ಇಂದು ದೃಢವಾಗಿದೆ. ಪ್ರಸ್ತುತ, ಮೀನಾ ಅವರನ್ನು ಜೈಪುರದ ಮಹಾತ್ಮ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

English summary
375 new COVID19 positive cases and 4 deaths have been reported in Rajasthan. Total number of cases stands at 33,595.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X