ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೆ ಸುದ್ದಿ: ರಾಜಸ್ಥಾನ ಸರ್ಕಾರದ ಅಧಿಕಾರಿಗಳಾದ ಐವರು ಸಹೋದರಿಯರು

|
Google Oneindia Kannada News

ಜೈಪುರ, ಜುಲೈ 15: ಮೂವರು ಸಹೋದರಿಯರು ಒಟ್ಟಿಗೆ ರಾಜಸ್ಥಾನ ಅಡ್ಮಿನಿಸ್ಟ್ರೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಈಗಾಗಲೇ ಅವರ ಇನ್ನಿಬ್ಬರು ಸಹೋದರಿಯರು ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಈಗ ಒಂದೇ ಕುಟುಂಬದ ಐವರು ಸಹೋದರಿಯರು ರಾಜ್ಯ ಸರ್ಕಾರದ ಅಧಿಕಾರಿಗಳಾಗಿರುವುದು ಸಂತಸದ ವಿಚಾರವಾಗಿದೆ.

ರಾಜ್ಯದಲ್ಲಿ ಇಂದಿನಿಂದ ದ್ವಿತೀಯು ಪಿಯುಗೆ ಆನ್‌ಲೈನ್ ತರಗತಿ ಶುರುರಾಜ್ಯದಲ್ಲಿ ಇಂದಿನಿಂದ ದ್ವಿತೀಯು ಪಿಯುಗೆ ಆನ್‌ಲೈನ್ ತರಗತಿ ಶುರು

ಈ ಕುರಿತು ಐಎಫ್‌ಎಸ್ ಅಧಿಕಾರಿ ಪರ್ವೀನ್ ಲಾಸ್ವಾನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ಫೋಟೊವನ್ನು ಕೂಡ ಶೇರ್ ಮಾಡಿದ್ದಾರೆ. ಹನುಮಾನ್‌ಗಢದ ಅನ್ಶು, ರೀತು ಹಾಗೂ ಸುಮನ್ ಈ ಮೂವರು ಸಹೋದರಿಯರು ಆರ್‌ಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದ ರೋಮಾ ಹಾಗೂ ಮಂಜು ಈಗಾಗಲೇ ಸರ್ಕಾರಿ ಹುದ್ದೆಯಲ್ಲಿದ್ದಾರೆ.

3 Sisters Cracked Rajasthan Administrative Service Exam Together

ಈ ಎಲ್ಲಾ ಸಹೋದರಿಯರು ರೈತ ಸಹದೇವ್ ಸಹರನ್ ಅವರ ಪುತ್ರಿಯರಾಗಿದ್ದಾರೆ. ಪರ್ವೀನ್ ಮಾಡಿರುವ ಟ್ವೀಟ್‌ನ್ನು ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಹಾಗೆಯೇ ಅಭಿನಂದನೆ ತಿಳಿಸಿದ್ದಾರೆ.

ಮಂಗಳವಾರ ಆರ್‌ಪಿಎಸ್‌ಸಿ2018ರ ಆರ್‌ಎಎಸ್ ಪರೀಕ್ಷೆಯ ಫಲಿತಾಂಶವನ್ನು ಹೊರಡಿಸಿತ್ತು. ಅದರಲ್ಲಿ ಮುಕ್ತಾ ರಾವ್ ಮೊದಲ ಸ್ಥಾನ ಪಡೆದರೆ, ಮನ್‌ಮೋಹನ್ ಶರ್ಮಾ, ಶಿವಕಾಶಿ ಕಂಡಾಲ್ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಫಲಿತಾಂಶವು ಆರ್‌ಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

English summary
Three sisters from Rajasthan's Hanumangarh have cracked the state's administrative examination, joining their two other sisters who were already officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X