ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಬಿಕ್ಕಟ್ಟು; ಕೊನೆಗೂ ಮೌನ ಮುರಿದ ಸಚಿನ್ ಪೈಲೆಟ್

|
Google Oneindia Kannada News

ಜೈಪುರ, ಆಗಸ್ಟ್ 10 : "ನಾವು ಎತ್ತಿದ ಎಲ್ಲಾ ವಿಚಾರಗಳ ಬಗ್ಗೆ ಸೋನಿಯಾ ಗಾಂಧಿ ಅವರು ವಿವರಣೆ ಪಡೆದಿದ್ದಾರೆ. ನಮಗೆ ಯಾವುದೇ ಸ್ಥಾನಮಾನ ಬೇಡ. ಸ್ಥಾನಮಾನ ಕೊಡುವುದು ವಾಪಸ್ ತೆಗೆದುಕೊಳ್ಳುವುದು ಪಕ್ಷಕ್ಕೆ ಬಿಟ್ಟಿದ್ದು" ಎಂದು ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಹೇಳಿದರು.

Recommended Video

ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ | Oneindia Kannada

ಸೋಮವಾರ ದೆಹಲಿಯಲ್ಲಿ ಮಾತನಾಡಿದ ಅವರು, "ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮೂವರು ಸದಸ್ಯರ ಸಮಿತಿ ರಚನೆ ಮಾಡಿದ ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ" ಎಂದರು.

ಸಚಿನ್, ರಾಹುಲ್ ಗಾಂಧಿ ಭೇಟಿ; ಕಾಂಗ್ರೆಸ್ ಪತ್ರಿಕಾ ಪ್ರಕಟಣೆ ಸಚಿನ್, ರಾಹುಲ್ ಗಾಂಧಿ ಭೇಟಿ; ಕಾಂಗ್ರೆಸ್ ಪತ್ರಿಕಾ ಪ್ರಕಟಣೆ

"18 ರಿಂದ 20 ವರ್ಷ ರಾಜ್ಯದಲ್ಲಿ ಪಕ್ಷಕ್ಕಾಗಿ ನಾವು ದುಡಿದಿದ್ದೆವೆ. ನಮಗೆ ನಮ್ಮ ಸ್ವಾಭಿಮಾನ ಉಳಿಯಬೇಕಿದೆ. ಐದು ವರ್ಷಗಳ ಕಠಿಣ ಪರಿಶ್ರಮದ ಬಳಿಕ ನಾವು ರಾಜಸ್ಥಾನದಲ್ಲಿ ಸರ್ಕಾರವನ್ನು ರಚನೆ ಮಾಡಿದ್ದೇವೆ" ಎಂದು ಸಚಿನ್ ಪೈಲೆಟ್ ತಿಳಿಸಿದರು.

ಗೆಹ್ಲೋಟ್ ಭೇಟಿಯಾದ ಸಚಿನ್ ಪೈಲೆಟ್ ಬಣದ ಶಾಸಕ! ಗೆಹ್ಲೋಟ್ ಭೇಟಿಯಾದ ಸಚಿನ್ ಪೈಲೆಟ್ ಬಣದ ಶಾಸಕ!

3 Member Committee By Congress Sachin Pilot Welcome The Step

"ಸೋನಿಯಾ ಗಾಂಧಿ ಅವರು ನಾವು ಎತ್ತಿದ ಎಲ್ಲಾ ವಿಚಾರಗಳ ಕುರಿತು ವಿವರಗಳನ್ನು ಕೇಳಿದ್ದಾರೆ. ಮೂವರು ಸದಸ್ಯರ ಸಮಿತಿ ರಚನೆ ಮಾಡಿದ್ದು ಉತ್ತಮ ನಿರ್ಧಾರ. ಶೀಘ್ರವೇ ಸಮಸ್ಯೆ ಬಗೆಹರಿಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಭೇಟಿಯಾದ ಬಂಡಾಯ ನಾಯಕ ಸಚಿನ್ ಪೈಲೆಟ್! ರಾಹುಲ್ ಗಾಂಧಿ ಭೇಟಿಯಾದ ಬಂಡಾಯ ನಾಯಕ ಸಚಿನ್ ಪೈಲೆಟ್!

ವಾರ್ ರೂಂನಲ್ಲಿ ಸಭೆ : ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಪ್ರಿಯಾಂಕಾ ವಾದ್ರಾ, ಅಹ್ಮದ್ ಪಟೇಲ್ ಮತ್ತು ಕೆ. ಸಿ. ವೇಣುಗೋಪಾಲ್ ಕಾಂಗ್ರೆಸ್ ವಾರ್ ರೂಂನಲ್ಲಿ ಸಭೆಯನ್ನು ನಡೆಸುತ್ತಿದ್ದಾರೆ.

ಸೋಮವಾರ ಬೆಳಗ್ಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದರು. ಸಚಿನ್ ಪೈಲೆಟ್ ಮಧ್ಯಾಹ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಭೇಟಿಯಾಗಿದ್ದರು.

English summary
Rajasthan Congress rebel leader Sachin Pilot welcomed the formation of the 3 member committee by the Congress president to address the state Congress issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X