ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಕುಟುಂಬದ 26 ಸದಸ್ಯರಿಗೆ ಕೊರೊನಾ ವೈರಸ್ ಸೋಂಕು!

|
Google Oneindia Kannada News

ಜೈಪುರ, ಜೂನ್ 09 : ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಒಬ್ಬ ವ್ಯಕ್ತಿಯಿಂದಾಗಿ ಆತನ ಕುಟುಂಬ 26 ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ಹಬ್ಬಿದೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಜಸ್ಥಾನದ ಜೈಪುರದಲ್ಲಿ ಈ ರೀತಿ ಒಂದೇ ಕುಟುಂಬದ 26 ಸದಸ್ಯರಿಗೆ ಕೊರೊನಾ ವೈರಸ್ ಸೋಂಕು ಹಬ್ಬಿದೆ. ಜೈಪುರ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ನರೋತ್ತಮ್ ಶರ್ಮಾ ಇದನ್ನು ಖಚಿತಪಡಿಸಿದ್ದಾರೆ.

ಮದ್ಯದ ಬೆಲೆ ಹೆಚ್ಚಿಸಿದ ರಾಜಸ್ಥಾನ ಸರ್ಕಾರ: ಆದಾಯ ಹೆಚ್ಚಿಸಿಕೊಳ್ಳಲು ಪ್ಲ್ಯಾನ್‌ಮದ್ಯದ ಬೆಲೆ ಹೆಚ್ಚಿಸಿದ ರಾಜಸ್ಥಾನ ಸರ್ಕಾರ: ಆದಾಯ ಹೆಚ್ಚಿಸಿಕೊಳ್ಳಲು ಪ್ಲ್ಯಾನ್‌

ಏಳು ದಿನಗಳ ಹಿಂದೆ ಜೈಪುರದ ವ್ಯಕ್ತಿಯೊಬ್ಬನಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಆತನನ್ನು ಐಸೋಲೆಷನ್ ವಾರ್ಡ್‌ಗೆ ದಾಖಲು ಮಾಡಲಾಗಿತ್ತು. ರೋಗಿಯ ಜೊತೆ ಪ್ರಾಥಮಿಕ, ಎರಡನೇ ಹಂತದ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರ ಮಾದರಿಗಳನ್ನು ಸಂಗ್ರಹ ಮಾಡಲಾಗಿತ್ತು.

ಕರ್ನಾಟಕದಿಂದ ರಾಜಸ್ಥಾನ, ಗುಜರಾತ್‌ಗೆ ರೈಲಲ್ಲಿ ಹೊರಟ ಟ್ರ್ಯಾಕ್ಟರ್‌ ಕರ್ನಾಟಕದಿಂದ ರಾಜಸ್ಥಾನ, ಗುಜರಾತ್‌ಗೆ ರೈಲಲ್ಲಿ ಹೊರಟ ಟ್ರ್ಯಾಕ್ಟರ್‌

COVID 19 Patient 26 Family Members Tested Positive

ಮಂಗಳವಾರ ಎಲ್ಲರ ಪರೀಕ್ಷೆಯ ವರದಿ ಬಂದಿದ್ದು 26 ಜನರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಚಿತವಾಗಿದೆ. ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಹೇಳಿದ್ದಾರೆ.

''ಆಲ್ಕೋಹಾಲ್ ಕೊರೊನಾವನ್ನು ಕೊಲ್ಲುತ್ತದೆ'' ಎಂದ ರಾಜಸ್ಥಾನ ಶಾಸಕ ''ಆಲ್ಕೋಹಾಲ್ ಕೊರೊನಾವನ್ನು ಕೊಲ್ಲುತ್ತದೆ'' ಎಂದ ರಾಜಸ್ಥಾನ ಶಾಸಕ

ರಾಜಸ್ಥಾನದಲ್ಲಿ ಮಂಗಳವಾರ 144 ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಾಗಿದ್ದು, 5 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11020. ಇದುವರೆಗೂ ರಾಜ್ಯದಲ್ಲಿ 251 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

English summary
26 family members of the Coronavirus patient tested positive in Rajasthan. Seven days back a person had tested positive for COVID - 19. Health department isolated him and took samples of all 26 members of the family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X