ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂ ಒತ್ತುವರಿ ಖಂಡಿಸಿ 21 ರೈತರಿಂದ 'ಜಮೀನು ಸಮಾಧಿ ಸತ್ಯಾಗ್ರಹ'

|
Google Oneindia Kannada News

ಜೈಪುರ, ಮಾರ್ಚ್ 2: ವಸತಿ ಯೋಜನೆಗಾಗಿ ಜೈಪುರ ಅಭಿವೃದ್ದಿ ಪ್ರಾಧಿಕಾರದ ಭೂ ಒತ್ತುವರಿ ಖಂಡಿಸಿ 21 ರೈತರು ಜಮೀನು ಸಮಾಧಿ ಸತ್ಯಾಗ್ರಹ ಮಾಡುತ್ತಿರುವ ಘಟನೆ ರಾಜಸ್ತಾನದ ನಿಂದರ್ ಗ್ರಾಮದಲ್ಲಿ ಕಂಡು ಬಂದಿದೆ.

ಜೈಪುರ ಅಭಿವೃದ್ದಿ ಪ್ರಾಧಿಕಾರ ಅಕ್ರಮವಾಗಿ ರೈತರ ಭೂಮಿ ವಶಪಡಿಸಿಕೊಂಡಿದೆ. ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ಪ್ರಕಾರ ತಮ್ಮ ಜಮೀನನ್ನು ವಶಪಡಿಸಿಕೊಂಡು, ಅದಕ್ಕೆ ತಕ್ಕಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ಇಬ್ಬರ ನಡುವಿನ ಕಿತ್ತಾಟದಲ್ಲಿ 113 ಪುಟ್ಟ ಕಂದಮ್ಮಗಳು ಸಾವುಇಬ್ಬರ ನಡುವಿನ ಕಿತ್ತಾಟದಲ್ಲಿ 113 ಪುಟ್ಟ ಕಂದಮ್ಮಗಳು ಸಾವು

ಜಮೀನು ಸಮಾಧಿ ಸತ್ಯಾಗ್ರಹ ಅಂದ್ರೆ ಕುತ್ತಿಗೆವರೆಗೂ ಭೂಮಿಯಲ್ಲಿ ಹೂತುಕೊಂಡು ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. 21 ರೈತರ ಪೈಕಿ 5 ಮಹಿಳೆಯರು ಭಾಗಿಯಾಗಿದ್ದಾರೆ.

21 Farmers Protesting Against Jaipur Development Authority

ಈ ಮೊದಲು ಜನವರಿ ತಿಂಗಳಲ್ಲಿ ರೈತರು ಜಮೀನು ಸಮಾಧಿ ಸತ್ಯಾಗ್ರಹ ಮಾಡಿದ್ದರು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರ 50 ದಿನದಲ್ಲಿ ತಮ್ಮ ಸಮಸ್ಯೆ ಬಗೆಹರಿಸಿಕೊಡುವುದಾಗಿ ಆಶ್ವಾಸನೆ ನೀಡಿತ್ತು. ನಾಲ್ಕು ದಿನದ ನಂತರ ಪ್ರತಿಭಟನೆ ಕೈಬಿಟ್ಟಿದ್ದರು.

ಹುಡುಗಿಯೊಂದಿಗೆ ಟಿಕ್‌-ಟಾಕ್‌ ಮಾಡಿದ್ದಕ್ಕೆ ಬೆತ್ತಲೆ ಶಿಕ್ಷೆಹುಡುಗಿಯೊಂದಿಗೆ ಟಿಕ್‌-ಟಾಕ್‌ ಮಾಡಿದ್ದಕ್ಕೆ ಬೆತ್ತಲೆ ಶಿಕ್ಷೆ

'ಸದ್ಯಕ್ಕೆ 21 ರೈತರು ಜಮೀನು ಸಮಾಧಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ಸೋಮವಾರ 50 ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಹಕ್ಕು ತಮಗೆ ಸಿಗುವವರೆಗೂ ಈ ಹೋರಾಟ ನಿಲ್ಲಿಸಲ್ಲ' ಎಂದು ಹೋರಾಟಗಾರ ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.

21 Farmers Protesting Against Jaipur Development Authority

ಇದಕ್ಕೂ ಮುಂಚೆ 2017ರಲ್ಲಿ ಜೈಪುರ ಅಭಿವೃದ್ದಿ ಪ್ರಾಧಿಕಾರದ ವಿರುದ್ಧ ರೈತರು ಪ್ರತಿಭಟನೆ ಮಾಡಿದ್ದರು. ಇದರಲ್ಲಿ ಹಲವರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು.

English summary
Farmers stage 'zameen samadhi satyagraha' to protest against provisions of acquisition of their land by Jaipur Development Authority (JDA), at Nindar village in Jaipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X