ಫಸ್ಟ್ Rank ರಾಣಿ, ಸೆಕೆಂಡ್ Rank ರಾಜು ವಿಚ್ಛೇದನಕ್ಕೆ ಅರ್ಜಿ
ನವದೆಹಲಿ, ನ. 20: 2015ನೇ ಸಾಲಿನ ಲೋಕಸೇವಾ ಆಯೋಗದ ಪರೀಕ್ಷೆಯ ಟಾಪರ್ ಟೀನಾ ದಬಿ ಹಾಗೂ ಅಥಾರ್ ಆಮೀರ್-ಉಲ್-ಶಫೀ ಖಾನ್ ಮದುವೆ ಸಂಸಾರ ಸಂಭಮ ಕೆಲ ವರ್ಷಗಳಲ್ಲೇ ಮುಕ್ತಾಯ ಕಂಡಿದೆ. ಫಸ್ಟ್ Rank ರಾಣಿ, ಸೆಕೆಂಡ್ Rank ರಾಜು ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಸುದ್ದಿ ಬಂದಿದೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದಿದ್ದ ದಬಿ ಮೇಲೆ ಪ್ರೀತಿ ಬಂದಿದ್ದ ಖಾನ್ ಅದೇ ಪರೀಕ್ಷೆಯಲ್ಲಿ ಎರಡನೇ ಸ್ಥಾನದಲ್ಲಿದ್ದವರು. ಈಗ ಜೈಪುರದ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.
ಎರಡೂ ಕಡೆಯ ಪೋಷಕರು ಈ ಸಂಬಂಧವನ್ನು ಒಪ್ಪಿದ್ದಾರೆ. 'ನಾನು ಸ್ವತಂತ್ರ ಆಲೋಚನೆ ಇರುವ ಮಹಿಳೆಯಾಗಿ ಕೆಲವನ್ನು ಆರಿಸಿಕೊಳ್ಳಲು ಸ್ವತಂತ್ರಳು. ನನ್ನ ಆಯ್ಕೆ ಬಗ್ಗೆ ಸಂತೋಷ ಇದೆ. ಅದೇ ಥರ ಅಮೀರ್ ಗೂ ಖುಷಿ ಇದೆ. ನಮ್ಮ ಫೋಷಕರು ಸಂತೋಷವಾಗಿದ್ದಾರೆ. ಸಣ್ಣ ಸಮುದಾಯದಿಂದ ಬಂದಂಥ ನಮ್ಮಂಥವರು ಬೇರೆ ಧರ್ಮದ ಹುಡುಗನ ಜೊತೆ ಡೇಟಿಂಗ್ ಮಾಡುವಾಗ ನಕಾರಾತ್ಮಕ ಮಾತುಗಳನ್ನಾಡುವುದು ಸಹಜ ಎಂದು ಟೀನಾ ದಬಿ ಡೇಟಿಂಗ್, ಪ್ರೀತಿ ಸಂದರ್ಭದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಾಶ್ಮೀರದ ಒಂದು ಸಣ್ಣ ಹಳ್ಳಿಯವರಾದ ಅಥಾರ್ ಆಮೀರ್-ಉಲ್-ಶಫೀ ಖಾನ್ ಅವರು ದೆಹಲಿಯ ದಲಿತ ಕುಟುಂಬದ ಹೆಣ್ಣುಮಗಳು ದಬಿಯನ್ನು ಮೆಚ್ಚಿ ಪ್ರೀತಿಸಿದ್ದರು.
ಫಸ್ಟ್ Rank ರಾಣಿಗೆ ಒಲಿದ ಸೆಕೆಂಡ್ Rank ರಾಜು!
2016ರಲ್ಲಿ DoPT ಕಚೇರಿಯ ಸನ್ಮಾನ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೇಮ ನಿವೇದಿಸಿಕೊಂಡಿದ್ದರು. ಇಬ್ಬರ ಮದುವೆಯನ್ನು ಲವ್ ಜಿಹಾದ್ ಎಂದು ಧಾರ್ಮಿಕ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.
ನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿ
ಸರ್ ನೇಮ್ ತೆಗೆದು ಹಾಕಿದ್ದ ಟೀನಾ
ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಟೀನಾ ಅವರು ತಮ್ಮ ಹೆಸರಿನ ಜೊತೆಗಿದ್ದ ಖಾನ್ ಸರ್ ನೇಮ್ ತೆಗೆದು ಹಾಕಿದ್ದು ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇನ್ಸ್ಟಾಗ್ರಾಂನಲ್ಲಿ ಟೀನಾರನ್ನು ಅಥಾರ್ ಅನ್ ಫಾಲೋ ಮಾಡಿದ್ದರು.