• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಚೆತ್ತುಕೊಳ್ಳದ ಜನ: ರಾಜಸ್ಥಾನದ ದರ್ಗಾ ಸಭೆಯಲ್ಲಿ ನೂರಾರು ಮಂದಿ ಭಾಗಿ

|

ಜೈಪುರ, ಏಪ್ರಿಲ್ 2: ತಬ್ಲಿಘ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಗೆ ಕೊರೊನಾ ಹರಡಿರುವುದು ತಿಳಿದುಬಂದ ಬೆನ್ನಲ್ಲೇ ರಾಜಸ್ಥಾನದ ದರ್ಗಾ ಸಭೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.

   First time in india anti-hiv drugs used on Italian couple with coronavirus patients in jaipur

   ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನೂರಾರು ಜನರಿಗೆ ಕೊರೊನಾ ಸೋಂಕು ತಗುಲಿರುವುದು ತಿಳಿದಿದ್ದರೂ ಜನರಲ್ಲಿ ಅರಿವು ಮೂಡಿದಂತೆ ಕಾಣುತ್ತಿಲ್ಲ.

   ದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಬಾಗಲಕೋಟೆಯ 19 ಜನದೆಹಲಿ ಮಸೀದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಬಾಗಲಕೋಟೆಯ 19 ಜನ

   ಏಕೆಂದರೆ ಈ ಘಟನೆಯ ಬೆನ್ನಲ್ಲೇ ರಾಜಸ್ಥಾನದ ಅಜ್ಮೇರ್‌ ಜಿಲ್ಲೆಯ ಸರವಾರ್‌ ಪಟ್ಟಣದ ದರ್ಗಾವೊಂದರಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.

   100 Gather For Religious Congregation At Rajasthan Dargah

   ಬಳಿಕ ಪೊಲೀಸರು ಬಂದು ಗುಂಪನ್ನು ಚೆದುರಿಸಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಭೆ ಆಯೋಜಿಸಿದ್ದ ಕಾರಣದಿಂದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
   ಸಂಪ್ರದಾಯದಂತೆ ಪ್ರತಿವರ್ಷ ಸರವಾರ್ ದರ್ಗಾಕ್ಕೆ ಅಜ್ಮೇರ್‌ನ ಸೂಫಿ ಸಂತ ಮೊಹಿಮುದ್ದೀನ್ ಚಿಸ್ತಿ ದರ್ಗಾದ ಧಾರ್ಮಿಕ ಮುಖಂಡರು ಚಾದರ ಅರ್ಪಿಸುತ್ತಾರೆ.

   ತಬ್ಲಿಘ್ ಜಮಾತ್: ವೈದ್ಯರ ಮೇಲೆ ಉಗುಳಿದ ಜಮಾತ್ ಕಾರ್ಯಕರ್ತರುತಬ್ಲಿಘ್ ಜಮಾತ್: ವೈದ್ಯರ ಮೇಲೆ ಉಗುಳಿದ ಜಮಾತ್ ಕಾರ್ಯಕರ್ತರು

   ಆದರೆ , ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರೂ ದರ್ಗಾದ ಧಾರ್ಮಿಕ ಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.

   ತಬ್ಲಿಘ್‌ನಲ್ಲಿ ಅಷ್ಟೊಂದು ದೊಡ್ಡ ಘಟನೆ ನಡೆದಿದ್ದು, ಇಡೀ ದೇಶವೇ ಭೀತಿಯಲ್ಲಿರುವಾಗ ಮತ್ತೆ ಅದೇ ರೀತಿಯ ಸಭೆಯನ್ನು ನಡೆಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

   English summary
   About 100 people gathered for a religious congregation at a dargah in Sarwar town of Rajasthan's Ajmer district on Tuesday following which police used mild force to disperse them, police sources said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X